Just In
- 15 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 1 hr ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್
ಬೆನೆಲ್ಲಿ ಇಂಡಿಯಾ ಕಂಪನಿಯು ತನ್ನ ಹೊಸ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬೆನೆಲ್ಲಿ ಕಂಪನಿಯು ತನ್ನ ಆಫ್-ರೋಡ್ ಆಧಾರಿತ ಟಿಆರ್‌ಕೆ 502ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಬೆನೆಲ್ಲಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಅವರು ಟಿಆರ್‌ಕೆ 502ಎಕ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಿದ್ದರು. ವರದಿಗಳ ಪ್ರಕಾರ, ಆಫ್-ರೋಡ್ ಆಧಾರಿತ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಇದೇ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಬಗ್ಗೆ ಹೇಳುವುದಾದರೆ, ಇದನ್ನು ಹೆಚ್ಚು ಆಫ್-ರೋಡ್‌ಗೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗಿದೆ.

ಈ ಹೊಸ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕಿನಲ್ಲಿ ಸ್ಪೋಕ್ಡ್ ವೀಲ್ಸ್, ಸ್ವಲ್ಪ ದೊಡ್ಡದಾದ ಎಂಜಿನ್ ಗಾರ್ಡ್, ಹೈ-ಮೌಂಟೆಡ್ ಎಕ್ಸಾಸ್ಟ್, ಹಿಂಭಾಗದಲ್ಲಿ ಲಗೇಜ್ ರ್ಯಾಕ್ ಮತ್ತು ಟಿಆರ್ಕೆ 502 ಮಾದರಿಯ ಮೇಲೆ ರೈಡರ್ ಸೀಟ್ ಎತ್ತರ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬೆನೆಲ್ಲಿ ಟಿಆರ್‌ಕೆ 502 ಸ್ಟ್ಯಾಂಡರ್ಡ್ ಮಾದರಿಯಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ 50 ಎಂಎಂ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ 502ಎಕ್ಸ್ ಮಾದರಿಯಲ್ಲಿಯು ಇದೇ ರೀತಿಯ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿರುತ್ತದೆ.

ಇನ್ನು ಸ್ಟ್ಯಾಂಡರ್ಡ್ ಮಾದರಿಯ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಡಿಸ್ಕ್ ರೋಟರ್‌ಗಳನ್ನು ಹೊಂದಿದ್ದರೆ, ಟಿಆರ್‌ಕೆ 502ಎಕ್ಸ್ ಪೆಡಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ತನ್ನ ಸ್ಟ್ಯಾಂಡರ್ಡ್ ಮಾದರಿಯಿಂದ ಎಂಜಿನ್ ಅನ್ನು ಎರವಲು ಪಡೆದಿದೆ. ಈ ಹೊಸ ಟಿಆರ್‌ಕೆ 502ಎಕ್ಸ್ ಬೈಕಿನಲ್ಲಿ ಅದೇ 499ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಎಂಜಿನ್ ಅನ್ನು ಅಳವಡಿದೆ.

ಈ 499ಸಿಸಿ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೆಚ್ಚುವರಿಯಾಗಿ 2021ರ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಮಾಡಿದ ಎಲ್ಲಾ ಹೊಸ ಬದಲಾವಣೆಗಳನ್ನು 502ಎಕ್ಸ್ ಬೈಕಿನಲ್ಲೂ ಸಾಗಿಸುವ ನಿರೀಕ್ಷೆಯಿದೆ. ಇದು ಹೊಸ ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, ನವೀಕರಿಸಿದ ಅರೆ-ಡಿಜಿಟಲ್ ಇನ್ಸ್ ಟ್ರೂ,ಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಈಗ ವಿಭಿನ್ನ ಬ್ಯಾಕ್‌ಲಿಟ್ ಬಣ್ಣಗಳು, ಪರಿಷ್ಕೃತ ನಕಲ್ ಗಾರ್ಡ್ ಮತ್ತು ರಿಯರ್-ವ್ಯೂ ಮಿರರ್ ವಿನ್ಯಾಸ ಮತ್ತು ಸುಧಾರಿತ ರೈಡರ್ ಮತ್ತು ಪಿಲಿಯನ್ ಸೀಟುಗಳನ್ನು ಒಳಗೊಂಡಿದೆ. ಬೆನೆಲ್ಲಿ ಇಂಡಿಯಾ ತನ್ನ ಜನಪ್ರಿಯ ಆಫ್-ರೋಡ್ ಆಧಾರಿತ ಟಿಆರ್‌ಕೆ 502ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.