ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಬೆನೆಲ್ಲಿಯ ಮೂಲ ಕಂಪನಿಯಾದ ಕಿಯಾಂಜಿಯಾಂಗ್ ಮೋಟರ್ ಸೈಕಲ್ಸ್ 2021ರ ಬೀಜಿಂಗ್ ಮೋಟಾರ್ ಶೋನಲ್ಲಿ ಹೊಸ ಎಲೆಕ್ಟ್ರಿಕ್ ಬೈಕಿನ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ. ಕ್ರಿಸ್ಟೇನ್ಡ್ 'ಕ್ಯೂಜೆ7000ಡಿ' ಎಂಬ ಈ ಎಲೆಕ್ಟ್ರಿಕ್ ಬೈಕ್ ಬೆನೆಲ್ಲಿ ಬ್ರ್ಯಾಂಡ್ ಅಡಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರೀ ಬೇಡಿಕೆಯನ್ನು ಪಡೆದುಕೊಂಡಿವೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ ಇದರಿಂದ ಸರಿಯಾದ ಸಮಯದಲ್ಲಿ ಬೆನೆಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ, ಬೆನೆಲ್ಲಿಯ ಕಿಯಾಂಜಿಯಾಂಗ್ ಈ ಹೊಸ ಎಲೆಕ್ಟ್ರಿಕ್ ಬೈಕಿನ ತಾಂತ್ರಿಕ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಿಲ್ಲ,

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಆದರೆ ವರದಿಗಳ ಪ್ರಕಾರ, ಮುಂಬರುವ ಮಾದರಿಯು ಉತ್ಪಾದಕರಿಂದ ಉನ್ನತ-ಮಟ್ಟದ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಬೈಕ್ ಗಳಿಗೆ ಹೊಸ ಮಾನದಂಡವಾಗಬಹುದು. ಇಲ್ಲಿ ಗಮನಿಸಬೇಕಾದ ಸಾಕಷ್ಟು ಆಸಕ್ತಿದಾಯಕ ವಿವರಗಳಿವೆ. ಈ ಬೈಕ್ ಮಿಡ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಇದು ಸಾಂಪ್ರದಾಯಿಕ ಗೇರ್ ಬಾಕ್ಸ್ ಮತ್ತು ಚೈನ್ ಫೈನಲ್ ಡ್ರೈವ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಇನ್ನು ಹೊಸ ಕಿಯಾಂಜಿಯಾಂಗ್ ಕ್ಯೂಜೆ7000ಡಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಯುಎಸ್ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಇನ್ನು ಈ ಹೊಸ ಬೈಕಿನಲ್ಲಿ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕಿಯಾಂಜಿಯಾಂಗ್ ಈ ಎಲೆಕ್ಟ್ರಿಕ್ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ಪ್ರದೇಶದಲ್ಲಿ ಸ್ಟೋರೇಂಜ್ ಸ್ಪೇಸ್ ಅನ್ನು ಹೊಂದಿದೆ. ಈ ಸ್ಟೋರೇಂಜ್ ಸ್ಪೇಸ್ ಒಂದು ಹೆಲ್ಮೆಟ್ ಇಡುವಷ್ಟು ಸ್ಪೇಸ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಹೆಚ್ಚಿನ-ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸೆಂಟರ್-ಸೆಟ್ ಫುಟ್‌ಪೆಗ್‌ಗಳೊಂದಿಗೆ ರೈಡಿಂಗ್ ಎರೋಗನೊಮಿಕ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಸ್ಪ್ಲಿಪ್ಡ್-ಸೀಟ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಇನ್ನು ಟೈಲ್ ವಿಭಾಗವು ಸಾಕಷ್ಟು ನಯವಾದ ನೋಟವನ್ನು ಹೊಂದಿದೆ, ಈ ಹೊಸ ಎಲೆಕ್ಟ್ರಿಕ್ ಬೈಕ್ ಒಟ್ಟಾರೆ ವಿನ್ಯಾಸವು ಸಾಕಷ್ಟು ಅಗ್ರೇಸಿವ್ ಆಗಿದೆ. ಇದರ ವಿನ್ಯಾಸವು ಕ್ಯೂಜೆ ಎಸ್ಆರ್ಜಿ600 ಬೈಕ್ ನಿಂದ ಸ್ಫೂರ್ತಿ ಪಡೆದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಮುಂಭಾಗದಲ್ಲಿರುವ ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್, ರ್ಯಾಕ್ಡ್ ವಿಸರ್ ಮತ್ತು ಫುಲ್ ಫೇರಿಂಗ್ ಜೊತೆಗೆ ಬೈಕ್‌ಗೆ ಅತ್ಯಂತ ಅಗ್ರೇಸಿವ್ ಲುಕ್ ಅನ್ನು ನೀಡುತ್ತದೆ. ಪ್ರದರ್ಶಿತ ಕಾನ್ಸೆಪ್ಟ್ ಮಾದರಿಗೆ ಹೋಲಿಸಿದರೆ ಅಂತಿಮ ಉತ್ಪಾದನಾ ಮಾದರಿಯು ಸ್ಟೈಲಿಂಗ್ ವಿಷಯದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿರಬಹುದು. ಕಿಯಾಂಜಿಯಾಂಗ್ ಕ್ಯೂಜಿ7000ಡಿ ನ್ನು ಉತ್ಪಾದನೆಗೆ ಒಳಪಡಿಸುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಬೆನೆಲ್ಲಿ

ಬೆನೆಲ್ಲಿ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಬೈಕನ್ನು ಮೊದಲು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಬಹುದು.

Most Read Articles

Kannada
English summary
Benelli’s First Electric Motorcycle Previewed At 2021 Beijing Motor Show. Read In Kannada.
Story first published: Saturday, June 5, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X