ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಪ್ರಸಿದ್ಧ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು, ಬಿಎಂಡಬ್ಲ್ಯು ಮೋಟರ್‌ರಾಡ್ ಹೆಸರಿನಲ್ಲಿ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಕಂಪನಿಯ ದ್ವಿಚಕ್ರ ವಾಹನಗಳು ವಿಶ್ವದಾದ್ಯಂತ ಜನಪ್ರಿಯತೆಯನ್ನು ಹೊಂದಿವೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ವಿಶ್ವದ ಅಗತ್ಯತೆಗಳ ಬಗ್ಗೆ ಅರಿತಿರುವ ಕಂಪನಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದಕ್ಕೆ ಪೂರಕವಾಗಿ ಕಂಪನಿಯು ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈಗ ಬಿಎಂಡಬ್ಲ್ಯು ಮೋಟರ್‌ರಾಡ್ ಮತ್ತೊಂದು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸಿದೆ. ಬಿಎಂಡಬ್ಲ್ಯು ಮೋಟರ್‌ರಾಡ್ ಎಡಿವಿ (ಅಡ್ವೆಂಚರ್) ಶೈಲಿಯ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಕಂಪನಿಯು ಈ ಎಲೆಕ್ಟ್ರಿಕ್ ಬೈಕಿಗೆ ಬಿಎಂಡಬ್ಲ್ಯು ಡಿ -05 ಟಿ ಎಂದು ಹೆಸರಿಟ್ಟಿದೆ. ಈ ಬೈಕಿನಲ್ಲಿ ಹಲವಾರು ಹೊಸ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಈ ಬೈಕ್ ಅನ್ನು ವಿನ್ಯಾಸಗೊಳಿಸಿರುವವರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಬೈಕ್ ಅನ್ನು ನೀರಜ್ ಜಾವೆಲ್ ಎಂಬ ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ್ದಾರೆ. ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ವಿಶ್ವವಿದ್ಯಾಲಯವು ಗಾಂಧಿನಗರದಲ್ಲಿದೆ. ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಈಗ ನೀರಜ್ ಜಾವೆಲ್ ವಿನ್ಯಾಸಗೊಳಿಸಿದ ಬೈಕ್ ಅನ್ನು ಅನಾವರಣಗೊಳಿಸಿದೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸ್ಕೂಟರ್ ಆಗಿರುತ್ತವೆ ಅಥವಾ ಸ್ಪೋರ್ಟ್ಸ್ ಸೆಗ್'ಮೆಂಟಿಗೆ ಸೇರಿರುತ್ತವೆ. ಆದರೆ ನೀರಜ್ ಜಾವೆಲ್ ವಿನ್ಯಾಸಗೊಳಿಸಿರುವ ಎಲೆಕ್ಟ್ರಿಕ್ ಬೈಕ್ ಅಡ್ವೆಂಚರ್ ಮಾದರಿಯ ಎಲೆಕ್ಟ್ರಿಕ್ ಬೈಕ್ ಎಂಬುದು ವಿಶೇಷ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಕಾರಣಕ್ಕೆ ಈ ಬೈಕ್ ವಿಶ್ವದಾದ್ಯಂತ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹಲವಾರು ಜನರು ಈ ಬೈಕಿನ ನೋಟ ಹಾಗೂ ಶೈಲಿಯಿಂದ ಆಕರ್ಷಿತರಾಗಿದ್ದಾರೆ. ಈ ಬೈಕಿನ ಸೀಟ್ ಹಾಗೂ ಬಾಡಿ ಪ್ಯಾನೆಲ್ ಯುವಜನರನ್ನು ಆಕರ್ಷಿಸುತ್ತವೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಬೈಕಿನಲ್ಲಿ ಯಾವ ಫೀಚರ್'ಗಳನ್ನು ಅಳವಡಿಸಲಾಗುವುದು ಎಂಬ ಬಗ್ಗೆ ಬಿಎಂಡಬ್ಲ್ಯು ಮೋಟರ್‌ರಾಡ್ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈ ಬೈಕ್ ಹಲವಾರು ಮೈಂಡ್ ಕವರ್ ಫೀಚರ್'ಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಬೈಕ್ ನಾನ್ ಸ್ಲಿಪ್ ಬ್ಯಾಟರಿ, ಮ್ಯಾಗ್ನೆಟಿಕ್ ಚಾರ್ಜಿಂಗ್ ಸಿಸ್ಟಂ, ಮಲ್ಟಿ ರೈಡಿಂಗ್ ಮೋಡ್, ಹೈಸ್ಪೀಡ್ ಎಲೆಕ್ಟ್ರಿಕ್ ಮೋಟರ್'ನಂತಹ ಆಕರ್ಷಕ ಫೀಚರ್'ಗಳನ್ನು ಹೊಂದಿರಲಿದೆ ಎಂದು ಕಂಪನಿ ಹೇಳಿದೆ.

ಭಾರತೀಯ ವಿದ್ಯಾರ್ಥಿ ವಿನ್ಯಾಸಗೊಳಿಸಿದ ಬೈಕ್ ಅನಾವರಣಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಬಿಎಂಡಬ್ಲ್ಯು ಮೋಟರ್‌ರಾಡ್ ಸದ್ಯಕ್ಕೆ ಟಿ -05 ಡಿ ಬೈಕ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಮಾತ್ರ ಪರಿಚಯಿಸಿದೆ. ಇದೇ ವೇಳೆ ಕಂಪನಿಯು ಈ ಬೈಕ್ ತಯಾರಿಸುವ ಉದ್ದೇಶವನ್ನು ಹೊಂದಿಲ್ಲವೆಂದು ತಿಳಿದುಬಂದಿದೆ.

ಚಿತ್ರಕೃಪೆ : ನೀರಜ್ ಜವಾಲೆ / ಬೆಹನ್ಸ್

Most Read Articles

Kannada
English summary
BMW Motorrad unveils adventure electric bike prototype model designed by Indian student. Read in Kannada.
Story first published: Friday, April 9, 2021, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X