Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Movies
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ನಾಲ್ಕನೇ ಹಂತದ ರ‍್ಯಾಲಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಕನ್ನಡಿಗ ಸಿಎಸ್ ಸಂತೋಷ್
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 2021ರ ಡಕಾರ್ ರ‍್ಯಾಲಿಯು ನಾಲ್ಕನೇ ಹಂತ ಪೂರ್ಣಗೊಂಡಿದೆ. ಆದರೆ ಕನ್ನಡಿಗರ ಹೆಮ್ಮೆಯ ಸಿ.ಎಸ್.ಸಂತೋಷ್ ಅವರು ಡಕಾರ್ ರ‍್ಯಾಲಿಯು ನಾಲ್ಕನೇ ಹಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

2021ರ ಡಕಾರ್ ರ‍್ಯಾಲಿಯ ಇಂದಿನ ಹಂತದಲ್ಲಿ ವೇ ಪಾಯಿಂಟ್ 4 ಅನ್ನು ದಾಟಿದ ನಂತರ ಹೀರೋ ಮೋಟೋಸ್ಪೋರ್ಟ್‌ಗಾಗಿ ಭಾರತೀಯ ರ‍್ಯಾಲಿ ರೈಡರ್ ಮತ್ತು ಕನ್ನಡಿಗ ಸಿ.ಎಸ್.ಸಂತೋಷ್ ಅಪಘಾತಕ್ಕೆ ಈಡಾಗಿರುವಂತಹ ದುರದೃಷ್ಟಕರ ಘಟನೆ ನಡೆದಿದೆ. ಸಿಎಸ್ ಸಂತೋಷ್ ಅವರನ್ನು ರಿಯಾದ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೀರೋ ಮೋಟೋಸ್ಪೋರ್ಟ್ ಪ್ರಕಾರ, ಸಿಎಸ್ ಸಂತೋಷ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಸಿಎಸ್ ಸಂತೋಷ್ ಅವರು ಡಕಾರ್ ರ‍್ಯಾಲಿಯಲ್ಲಿ ಭಾರತದ ಪರವಾಗಿ ಏಳನೇ ಬಾರಿ ಪ್ರತಿನಿಧಿಸುತ್ತಿದ್ದಾರೆ. ವಿಶ್ವದ ಕಠಿಣ ಮತ್ತು ಅಪಾಯಕಾರಿ ಡಕಾರ್ ರ‍್ಯಾಲಿಲಿಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ. ಇಂಡಿಯನ್ ಏಸ್ ರ‍್ಯಾಲಿ ನಂತಹ ಅನೇಕ ಪ್ರತಿಷ್ಠಿತ ರ‍್ಯಾಲಿ ರೇಸ್‌ಗಳಲ್ಲಿ ಸ್ಪರ್ಧಿಸಿದ್ದಾರೆ.
MOST READ: ಡಕಾರ್ ರ‍್ಯಾಲಿ 2021: ಮೂರನೇ ಹಂತದ ರ‍್ಯಾಲಿಯಲ್ಲೂ ಮುಂದುವರಿದ ಹೋಂಡಾ, ಕೆಟಿಎಂ ತಂಡಗಳ ಪ್ರಾಬಲ್ಯ

ಸಿಎಸ್ ಸಂತೋಷ್ ಆರಂಭಿಕ ಪ್ರೊಲಾಗ್ ಹಂತದಲ್ಲಿ 35ನೇ ಸ್ಥಾನವನ್ನು ಗಳಿಸುವ ಮೂಲಕ 2021 ಡಕರ್ ರ‍್ಯಾಲಿ ಹಂತವನ್ನು ಪ್ರಾರಂಭಿಸಿದರು. ಅವರು ಈ ವರ್ಷದ ಡಕಾರ್ ರ‍್ಯಾಲಿಯ ನಾಲ್ಕನೇ ಹಂತವನ್ನು 43ನೇ ಸ್ಥಾನದಲ್ಲಿ ಕೊನೆಗೊಳಿಸಿದ್ದಾರೆ.

ಡಕಾರ್ ರ‍್ಯಾಲಿಯ ಮೂರನೇ ಹಂತದಲ್ಲಿ 36ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಹಂತದಲ್ಲಿಯು ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸುತ್ತಿರುವ ಕನ್ನಡಿಗ ಸಿಎಸ್ ಸಂತೋಷ್ 36ನೇ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮೂವರು ರೈಡರ್‌ಗಳನ್ನು ಒಳಗೊಂಡಿರುವ ಹೀರೋ ಮೋಟೋಸ್ಪೋರ್ಟ್ ತಂಡದಲ್ಲಿ ಸಿಎಸ್ ಸಂತೋಷ್ ನಂತರ ಜೊಕ್ವಿಮ್ ರೋಡ್ರಿಗೊಸ್ ಮತ್ತು ಹಿಂದಿನ ಆವೃತ್ತಿಗೆ ತಂಡಕ್ಕೆ ಸೆಬಾಸ್ಟಿಯನ್ ಬುಹ್ಲರ್ ಸೇರಿಕೊಂಡರು. ಸಿಎಸ್ ಸಂತೋಷ್ ಮತ್ತು ಜೊಕ್ವಿಮ್ ರೋಡ್ರಿಗೊಸ್ ಡಕಾರ್ ರ‍್ಯಾಲಿಯಲ್ಲಿ ಬ್ರ್ಯಾಂಡ್ ನೊಂದಿಗೆ ಐದನೇ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

2021ರ ಡಕಾರ್ ರ‍್ಯಾಲಿಯ ಹೀರೋ ಮೋಟೋಸ್ಪೋರ್ಟ್ ತಂಡದ 3ನೇ ಹಂತದ ನಂತರ ಇಬ್ಬರು ರೈಡರ್ ಗಳು ಜನರಲ್ ರ್ಯಾಂಕಿಂಗ್‌ನಲ್ಲಿ ಅಗ್ರ 25 ರೊಳಗೆ ಸ್ಥಾನ ಪಡೆದಿದ್ದಾರೆ. ಜೊವಾಕಿಮ್ ರೊಡ್ರಿಗಸ್ 19ನೇ ಮತ್ತು ಸೆಬಾಸ್ಟಿಯನ್ ಬುಹ್ಲರ್ 24 ನೇ ಸ್ಥಾನವನ್ನು ಪಡೆದಿದ್ದಾರೆ. ಸಿ.ಎಸ್. ಸಂತೋಷ್ 34ನೇ ಸ್ಥಾನದಲ್ಲಿದ್ದಾರೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

3ನೇ ಹಂತದ ನಂತರದ ಪ್ರತಿಕ್ರಿಯಿಸಿದ ಸಿ.ಎಸ್.ಸಂತೋಷ್, "ಇಂದು ಮತ್ತೊಂದು ದೀರ್ಘ ಮತ್ತು ವೇಗದ ಹಂತವಾಗಿತ್ತು. ಇದು ಹೆಚ್ಚಾಗಿ ಕುಳಿತುಕೊಳ್ಳಲಾಗದೆ ಮತ್ತು ಗೋಚರತೆ ಅಷ್ಟು ಉತ್ತಮವಾಗಿಲ್ಲ, ಆದ್ದರಿಂದ ಅದು ಕಠಿಣವಾಗಿತ್ತು. ಇದು ನನಗೆ ಅಷ್ಟು ತೃಪ್ತಿ ತಂದಿಲ್ಲ. ಆದರೆ ಇಂದು ಉತ್ತಮ ವೇದಿಕೆಯಲ್ಲಿ ಇರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದರು.

ಹೆಮ್ಮೆಯ ಕನ್ನಡಿಗ ಸಿ.ಎಸ್.ಸಂತೋಷ್ ಅಪಾಘತಗೊಂಡು ಗಾಯಗೊಂಡಿರುವುದು ದುರದೃಷ್ಟಕರ ಘಟನೆಯಾಗಿದೆ, ಇವರು 2021ರ ಡಕಾರ್ ರ‍್ಯಾಲಿಯಿಂದ ಹೊರಬಿದ್ದಿದ್ದಾರೆ. ಆದರೆ ಸಿ.ಎಸ್.ಸಂತೋಷ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಅದಷ್ಟು ಬೇಗನೆ ಗಾಯದಿಂದ ಚೇತರಿಕೆಯನ್ನು ಕಾಣಲಿ ಎಂದು ಹಾರೈಸುತ್ತೇವೆ.