Just In
Don't Miss!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ಮೊದಲ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡ ಕನ್ನಡಿಗ ಸಿಎಸ್ ಸಂತೋಷ್
ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿರುವ 2021ರ ಡಕಾರ್ ರ‍್ಯಾಲಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವದ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ರ‍್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 43ನೇ ಆವೃತ್ತಿಯ ಮೊದಲ ಹಂತದ ಪೂರ್ವ ಸಿದ್ದತಾ ರೈಡ್‌ನಲ್ಲಿ ಹೀರೋ ಮೋಟೋಸ್ಪೋರ್ಟ್ ತಂಡದ ಪ್ರತಿನಿಧಿ ಸಿಎಸ್ ಸಂತೋಷ್ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದಾರೆ.

2021ರ ಡಕಾರ್ ರ‍್ಯಾಲಿಯು ನಾಳೆಯಿಂದ ಆರಂಭವಾಗಿ 15ರ ತನಕ ನಡೆಯಲಿದ್ದು, 43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಸಾವಿರಾರು ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಮುಖ್ಯ ರ‍್ಯಾಲಿಗೆ ಪೂರಕವಾಗಿ ದ್ವಿಚಕ್ರ ವಾಹನಗಳ ಸವಾರರಿಗೆ ಇಂದು ಟೆಸ್ಟಿಂಗ್ ರೈಡ್ ಆರಂಭಿಸಿದ್ದ ಡಕಾರ್ ರ‍್ಯಾಲಿ ಆಯೋಜಕರು 129 ಕಿ.ಮೀ ಉದ್ದದ ಮೊದಲ ಹಂತದ ಮಾರ್ಗದಲ್ಲಿ ಟೆಸ್ಟಿಂಗ್ ರೈಡ್ ಆಯೋಜಿಸಿತ್ತು. ಟೆಸ್ಟಿಂಗ್ ರೈಡ್ ನಾಳೆಯಿಂದ ಆರಂಭವಾಗುವ ಮೊದಲ ಹಂತದ ರ‍್ಯಾಲಿಗೆ ಪೂರ್ವ ಸಿದ್ದತೆ ಮಾಡಿಕೊಳ್ಳಲು ಉತ್ತಮ ಸಮಯಾವಕಾಶ ಎನ್ನಬಹುದು.

ಪೂರ್ವ ಸಿದ್ದತಾ ರ‍್ಯಾಲಿಯಲ್ಲಿ ರೈಡರ್ ತನ್ನ ವಾಹನಗಳ ಕಾರ್ಯಕ್ಷಮತೆಯನ್ನು ಪರಿಶೀಲನೆ ಮಾಡಿಕೊಳ್ಳಲು ಸಹಕಾರಿಯಾಗಲಿದ್ದು, 129ಕಿ.ಮೀ ಉದ್ದದ ಮೊದಲ ಹಂತದ ರೈಡಿಂಗ್‌ನಲ್ಲಿ ಇಂದು ಭಾರತದವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೊಸ್ಪೋರ್ಟ್ ತಂಡವು ಉತ್ತಮ ಪ್ರದರ್ಶನ ತೋರಿದರು.

ಪೂರ್ವ ಸಿದ್ದತಾ ರ‍್ಯಾಲಿಯಲ್ಲಿದ್ದ 101 ರೈಡ್‌ಗಳಲ್ಲಿ ಕನ್ನಡಿಗ ಸಿಎಸ್ ಸಂತೋಷ್ 35ನೇ ಸ್ಥಾನಕ್ಕೆ ಮತ್ತು ಹೀರೋ ಮೋಟೋಸ್ಪೋರ್ಟ್ ತಂಡದ ಇನ್ನಿಬ್ಬರು ರೈಡರ್‌ಗಳಾದ ಸ್ಟೆಬಾಸ್ಟಿನ್ ಬ್ರುಲೆರ್, ಜೊಕ್ವಿಮ್ ರೋಡ್ರಿಗೊಸ್ ಅವರು ಕ್ರಮವಾಗಿ 5ನೇ ಮತ್ತು 10ನೇ ಸ್ಥಾನವನ್ನು ಪಡೆದುಕೊಂಡರು.

ಮೊದಲ ಸ್ಥಾನದಲ್ಲಿ 2020ರ ಡಕಾರ್ ರ‍್ಯಾಲಿಯ ವಿಜೇತರಾಗಿರುವ ಹೋಂಡಾ ರೈಡರ್ ರಿಕಿ ಬ್ರಾಬೆಕ್ ಮೊದಲ ಸ್ಥಾನ ಕಾಯ್ದುಕೊಂಡರು. ಸದ್ಯಕ್ಕೆ ಇದು ಪೂರ್ವ ಸಿದ್ದತಾ ರ‍್ಯಾಲಿ ರೈಡ್ ಆಗಿದ್ದರೂ ಮುಖ್ಯ ರ‍್ಯಾಲಿಯಲ್ಲಿನ ಪ್ರದರ್ಶನಕ್ಕೆ ಪೂರ್ವ ಸಿದ್ದತಾ ರ‍್ಯಾಲಿಯು ಪ್ರಮುಖ ಘಟ್ಟವಾಗಿದ್ದು, ನಾಳೆಯಿಂದ ಮುಖ್ಯ ರ‍್ಯಾಲಿಯ ಮೊದಲ ಹಂತಕ್ಕೆ ಚಾಲನೆ ಸಿಗಲಿದೆ. ಇನ್ನು ಕರೋನಾ ವೈರಸ್ ಪರಿಣಾಮ ವಿಶ್ವಾದ್ಯಂತ ಹಲವಾರು ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರೂ ಡಕಾರ್ ರ‍್ಯಾಲಿಯನ್ನು ಮಾತ್ರ ರದ್ದುಗೊಳಿಸದೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ರ‍್ಯಾಲಿಯ ಪ್ರತಿ ಹಂತದಲ್ಲೂ ಸ್ಪರ್ಧಿಗಳ ಆರೋಗ್ಯದ ಮೇಲೆ ನಿಗಾವಹಿಸಿರುವ ಆಯೋಜಕರು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಕೈಗೊಂಡ ನಂತರವೇ ಸ್ಪರ್ಧಾಳುಗಳಿಗೆ ಅವಕಾಶ ನೀಡಲಾಗುತ್ತಿದ್ದು, 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿರುವ 108 ವಿವಿಧ ಮಾದರಿಯ ರೇಸ್ ಎಡಿಷನ್ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ರೇಸ್ ಕಾರುಗಳು ಮತ್ತು 42 ರೇಸ್ ಟ್ರಕ್‌ಗಳು ಭಾಗಿಯಾಗಲಿದ್ದು, ಒಟ್ಟು 7,646 ಕಿ.ಮೀ ಅಂತರದಲ್ಲಿ ಬರೋಬ್ಬರಿ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿರುತ್ತದೆ.

ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ಸಾವಿರಾರು ಸ್ಪರ್ಧಿಗಳು ಭಾಗಿಯಾಗುತ್ತಿದ್ದು, ರ‍್ಯಾಲಿಯ ಶೇ.70 ರಷ್ಟು ಮಾರ್ಗವು ಮರಳುಗಾಡಿನಿಂದ ಕೂಡಿರಲಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಕರೋನಾ ಹಿನ್ನಲೆ ಕೆಲವು ಮಾರ್ಗಗಳ ಪ್ರಯಾಣವನ್ನು ತಪ್ಪಿಸುವ ಉದ್ದೇಶದಿಂದ 2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಲಾಗಿದ್ದು, ನಾಲ್ಕನೇ ಸುತ್ತಿನ ಪ್ರಯಾಣವು 2021ರ ಡಕಾರ್ ರ‍್ಯಾಲಿಯ ಅತಿ ಉದ್ದದ ಮಾರ್ಗವಾಗಿದೆ.