Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ಹತ್ತನೇ ಹಂತದಲ್ಲಿ ಅಬ್ಬರಿಸಿದ ಹೋಂಡಾ ತಂಡದ ರೈಡರ್ಸ್
2021ರ ಡಕಾರ್ ರ‍್ಯಾಲಿಯ 43ನೇ ಆವೃತ್ತಿಯ ಹತ್ತನೇ ಹಂತವು ಇಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, 2020ರ ವಿಜೇತ ತಂಡದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ಗಳು ಈ ಬಾರಿಯೂ ಚಾಂಪಿಯನ್‌ಶಿಪ್ ಹಾದಿಯಲ್ಲಿರುವುದು ಸ್ಪಷ್ಟವಾಗಿದೆ.

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿ ಮುಕ್ತಾಯಕ್ಕೆ ಇನ್ನೆರಡು ಮಾತ್ರ ಬಾಕಿ ಉಳಿದಿದ್ದು, ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯು ಇದೀಗ ಹತ್ತು ಹಂತಗಳನ್ನು ಪೂರ್ಣಗೊಳಿಸಿದೆ. ನಿಯೊಮ್ ನಗರದಿಂದ ಆರಂಭವಾಗಿದ್ದ ಹತ್ತನೇ ಹಂತದ ರ‍್ಯಾಲಿಯು ಅಲ್-ಉಲಾ ನಗರವನ್ನು ತಲುಪಬೇಕಿತ್ತು. ಒಟ್ಟು 583 ಕಿ.ಮೀ ಒಳಗೊಂಡಿದ್ದ ಹತ್ತನೇ ಹಂತದಲ್ಲಿ 342 ಕಿ.ಮೀ ವಿಶೇಷ ಮಾರ್ಗವೆಂದು ಘೋಷಣೆ ಮಾಡಲಾಗಿತ್ತು.

ಹತ್ತನೇ ಹಂತದ ರ‍್ಯಾಲಿಯು ಕೆಂಪು ಸಮುದ್ರದ ದಡದಲ್ಲಿ ಆರಂಭವಾಗುವುದರೊಂದಿಗೆ ಶೇ. 70ರಷ್ಟು ಮಾರ್ಗವು ಮರಳುಗಾಡಿನಿಂದ ಕೂಡಿದ್ದರೆ ಇನ್ನುಳಿದ ಶೇ. 30 ರಷ್ಟು ರೈಡಿಂಗ್ ಮಾರ್ಗವು ಮಣ್ಣುಮಿಶ್ರಿತ ರಸ್ತೆ ಮತ್ತು ಒರಾಟದ ಕಲ್ಲು ಮಿಶ್ರಿತ ರಸ್ತೆಗಳನ್ನು ಒಳಗೊಂಡಿತ್ತು.

43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಪ್ರತಿ ಹಂತವು ಕೂಡಾ ರೈಡರ್‌ಗಳೊಂಗಿಗೆ ಒಂದೊಂದು ಕ್ಲಿಷ್ಟಕರವಾದ ಸವಾಲುಗಳನ್ನು ಒಡ್ಡುತ್ತಿದ್ದು, ವಿಪರೀತವಾದ ಧೂಳಿನ ಅಬ್ಬರದ ನಡುವೆಯೂ ಬೈಕ್ ರೈಡರ್‌ಗಳು ಕಠಿಣ ಸವಾಲು ಎದುರಿ ಮುನ್ನುಗ್ಗುತ್ತಿದ್ದಾರೆ.

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಪ್ರತಿ ಹಂತದಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳು ಚಾಂಪಿಯನ್ ತಂಡಕ್ಕಾಗಿ ಭಾರೀ ಪೈಪೋಟಿ ನಡೆಸುತ್ತಿದ್ದು, ಇಂದು ನಡೆದ ಹತ್ತನೇ ಹಂತದ ರ‍್ಯಾಲಿಯು ಮೊದಲ ಮೂರು ಸ್ಥಾನಗಳಲ್ಲೂ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ಗಳು ಮುನ್ನಡೆ ಸಾಧಿಸಿದರು.

ಹತ್ತನೇ ಹಂತದ ರ‍್ಯಾಲಿಯಲ್ಲಿ ಅಬ್ಬರಿಸಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರಿಕಿ ಬ್ರಾಬೆಕ್ ಮೊದಲ ಸ್ಥಾನವನ್ನು ಪಡೆದರೆ ಎರಡನೇ ಸ್ಥಾನವನ್ನು ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಜೋನ್ ಬ್ಯಾರೆಡಾ ಬೋರ್ಟ್ ಮತ್ತು ಮೂರನೇ ಸ್ಥಾನವನ್ನು ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಮತ್ತೊಬ್ಬ ರೈಡರ್ ಕೆವಿನ್ ಬೆನಾವಿಡ್ಸ್ ಅಗ್ರ ಮೂರು ಸ್ಥಾನದಲ್ಲಿದ್ದಾರೆ.

ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ನಂತರ ಕೆಟಿಎಂ ಫ್ಯಾಕ್ಟರಿ ತಂಡದ ರೈಡರ್‌ಗಳು ಉತ್ತಮ ಸ್ಥಾನ ಕಾಯ್ದುಕೊಂಡಿದ್ದು, ತದನಂತರದಲ್ಲಿ ಹಸ್ಕವರ್ನಾ ಮತ್ತು ಯಮಹಾ ತಂಡದ ರೈಡರ್‌ಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.

ಟಾಪ್ 20ರ ಸ್ಥಾನದಲ್ಲಿ ಹರಿತ್ ನೋವಾ
2021ರ ಡಕಾರ್ ರ‍್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್‌ಗಳು ಒಂಬತ್ತನೇ ಮತ್ತು ಹತ್ತನೇ ಹಂತದ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸಿದ್ದ ಸಿಎಸ್ ಸಂತೋಷ್ ಅಲಭ್ಯತೆಯ ನಡುವೆಯೂ ತಂಡದ ಇತರೆ ರೈಡರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಹೀರೋ ಮೋಟೋಸ್ಪೋರ್ಟ್ ತಂಡದ ಜೊಕ್ವಿಮ್ ರೋಡ್ರಿಗೊಸ್ ಇಂದಿನ ರ‍್ಯಾಲಿಯಲ್ಲಿ 10ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 21ನೇ ಸ್ಥಾನವನ್ನು ಪಡೆದುಕೊಂಡರು. ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿನಿಧಿಸುತ್ತಿರುವ ಲೊರೆಂಜೊ ಸ್ಯಾಂಟೊಲಿನೊ 9ನೇ ಸ್ಥಾನ ಪಡೆದುಕೊಂಡಿದರೆ ಇನ್ನಿಬ್ಬರು ರೈಡರ್‌ಗಳಾದಹರಿತ್ ನೋವಾ 16ನೇ ಸ್ಥಾನಕ್ಕೆ ಮತ್ತು ರುಯಿ ಗೊನ್ಕಾಲ್ವ್ಸ್ 19ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸದ್ಯ ಹತ್ತು ಹಂತಗಳಲ್ಲೂ ಉತ್ತಮ ಪ್ರದರ್ಶನ ತೋರಿರುವ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಕೆವಿನ್ ಬೆನಾವಿಡ್ಸ್ ಮೊದಲ ಸ್ಥಾನದಲ್ಲಿ, ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಮತ್ತೊಬ್ಬ ರೈಡರ್ ರಿಕಿ ಬ್ರಾಬೆಕ್ ಎರಡನೇ ಸ್ಥಾನದಲ್ಲಿ ಮತ್ತು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಸ್ಯಾಮ್ ಸುಂದರ್‌ಲ್ಯಾಂಡ್ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ಡಕಾರ್ ರ‍್ಯಾಲಿಯಲ್ಲಿ ಭಾಗಿಯಾಗಿರುವ ಕ್ವಾರ್ಡ್ರಿಸೈಕಲ್ ವಿಭಾಗದಲ್ಲಿ 7240 ತಂಡದ ಮ್ಯಾನುಯೆಲ್ ಆಂಡೂಜರ್, ಕಾರು ವಿಭಾಗದಲ್ಲಿ ಎಕ್ಸ್-ರೈಡ್ ಮಿನಿ ಜೆಸಿಡಬ್ಲ್ಯೂ ತಂಡದ ಸ್ಟೀಫನ್ ಪೀಟರ್‌ಹ್ಯಾನ್ಸೆಲ್ ಮತ್ತು ಎಡ್ವರ್ಡ್ ಬೌಲಂಜರ್, ಹಗುರ ವಾಹನ ವಿಭಾಗದಲ್ಲಿ ಸೌತ್ ರೇಸಿಂಗ್ ತಂಡದ ಫ್ರಾನ್ಸಿಸ್ಕೊ ಲೋಪೆಜ್ ಕಾಂಟಾರ್ಡೊ ಮತ್ತು ಜುವಾನ್ ಪ್ಯಾಬ್ಲೊ ಲಾಟ್ರಾಚ್ ವಿನಾಗ್ರೆ ಮುನ್ನಡೆಯಲ್ಲಿದ್ದಾರೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಟ್ರಕ್ ವಿಭಾಗದಲ್ಲಿ ಕಾಮಜ್ - ಮಾಸ್ಟರ್ ತಂಡದ ಡಿಮಿಟ್ರಿ ಸೊಟ್ನಿಕೋವ್, ರುಸ್ಲಾನ್ ಅಖ್ಮದೇವ್ ಮತ್ತು ಇಲ್ಗಿಜ್ ಅಖ್ಮೆಟ್ಜಿಯಾನೋವ್ ಹಾಗೂ ಕ್ಲಾಸಿಕ್ ವಿಭಾಗದಲ್ಲಿ ಟೀಂ ಸನ್‌ಹಿಲ್ ತಂಡದ ಡೌಟನ್ ಮತ್ತು ಎಮಿಲಿಯನ್ ಎಟಿಯೆನ್ನೆ ಮುನ್ನಡೆ ಕಾಯ್ದುಕೊಂಡಿದ್ದಾರೆ.