Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಮಾನ್ಸ್ಟರ್ ಬೈಕಿನ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ ಜನಪ್ರಿಯ ಮಾನ್ಸ್ಟರ್ ಮಾದರಿಯ 350,000ನೇ ಯುನಿಟ್ ಅನ್ನು ಉತ್ಪಾದಿಸುವ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದೆ.

ಮೊದಲ ಮಾನ್ಸ್ಟರ್ ಪಾದಾರ್ಪಣೆ ಮಾಡಿದ ಸುಮಾರು 30 ವರ್ಷಗಳ ನಂತರ. 350,000ನೇ ಮಾದರಿಯು ಡುಕಾಟಿ ಮಾನ್ಸ್ಟರ್ 1200 ಎಸ್ 'ಬ್ಲ್ಯಾಕ್ ಆನ್ ಬ್ಲ್ಯಾಕ್' ಆಗಿದೆ. ಇನ್ನು ವಿಶೇಷವೆಂದರೆ, ಡುಕಾಟಿ ಸಿಇಒ ಕ್ಲಾಡಿಯೊ ಡೊಮೆನಿಕಲಿ ಮತ್ತು ಡುಕಾಟಿ ವಿನ್ಯಾಸ ಕೇಂದ್ರದ ನಿರ್ದೇಶಕ ಆಂಡ್ರಿಯಾ ಫೆರಾರೆಸಿ ವೈಯಕ್ತಿಕವಾಗಿ ತೆರಳಿ 350,000ನೇ ಮಾನ್ಸ್ಟರ್ ಬೈಕನ್ನು ಖರೀದಿಸಿದವರೆಗೆ ಹಸ್ತಾಂತರಿಸಿದ್ದಾರೆ.

ಡುಕಾಟಿ ಕಂಪನಿಯು ಇತ್ತೀಚೆಗೆ ತನ್ನ 2021ರ ಮಾನ್ಸ್ಟರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿತ್ತು. 2021ರ ಡುಕಾಟಿ ಮಾನ್ಸ್ಟರ್ ಬೈಕ್ ವಿನ್ಯಾಸದ ವಿಷಯದಲ್ಲಿ ಮಾತ್ರವಲ್ಲದೆ ಹೊಸ ಫೀಚರ್, ರೈಡರ್ ಏಡ್ಸ್ ಮತ್ತು ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಸಹ ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

2021ರ ಡುಕಾಟಿ ಮಾನ್ಸ್ಟರ್ ಬೈಕ್ ಏಪ್ರಿಲ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ದೈತ್ಯಾಕಾರದ ಹಗುರವಾದ ನೇಕೆಡ್ ಸ್ಟ್ರೀಟ್ ಫೈಟರ್ ಆಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಸ್ಪೋರ್ಟಿಯರ್ ಮತ್ತು ಸ್ಕಪಲಡಡ್ ವಿನ್ಯಾಸದೊಂದಿಗೆ ಬರುತ್ತದೆ.

2021ರ ಡುಕಾಟಿ ಮಾನ್ಸ್ಟರ್ ಹೊಚ್ಚ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಅದರ ಸುತ್ತಲಿನ ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಎದ್ದು ಕಾಣುತ್ತದೆ. ಹೊಸ ಮಾನ್ಸ್ಟರ್ ಸ್ಕಪಲಡಡ್ ಟ್ಯಾಂಕ್ ವಿನ್ಯಾಸ, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್ ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನು ಸಹ ಒಳಗೊಂಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಹ್ಯಾಂಡಲ್‌ಬಾರ್ ಮತ್ತು ಫುಟ್‌ಪೆಗ್ ಸ್ಥಾನಗಳಿಗೆ ಬದಲಾಯಿಸಲಾಗಿದೆ. 2021ರ ಡುಕಾಟಿ ಮಾನ್ಸ್ಟರ್ ಸ್ಟೈಲಿಂಗ್ ಅಪ್‌ಡೇಟ್‌ನೊಂದಿಗೆ, ಡುಕಾಟಿ ಹೊಸ ಮಾನ್ಸ್ಟರ್ ಇನ್ನೂ ಹಗುರವಾದ ಆವೃತ್ತಿಯಾಗಿದೆ ಎಂದು ಖಚಿತಪಡಿಸಿದೆ. ಇಟಾಲಿಯನ್ ಸೂಪರ್‌ಬೈಕ್ ತಯಾರಕರು ಈ ಬೈಕಿನ ತೂಕವನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದಾರೆ.

ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಡುಕಾಟಿ ಮಾನ್ಸ್ಟರ್ ಬೈಕಿಗೆ 18 ಕೆಜಿ ಕಡಿಮೆಯಾಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿ ಪವರ್ ಫುಲ್ 937 ಸಿಸಿ ಎಲ್-ಟ್ವಿನ್ ಟೆಸ್ಟಾಸ್ಟ್ರೆಟಾ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ 9250 ಆರ್‌ಪಿಎಂನಲ್ಲಿ 111 ಬಿಹೆಚ್‌ಪಿ ಮತ್ತು 6500 ಆರ್‌ಪಿಎಂನಲ್ಲಿ 93 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಟೋ-ವೇ ಕ್ವೀಕ್ ಶಿಫ್ಟರ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿನ ಇತರ ಫೀಚರ್ ಗಳಾದ, ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಮತ್ತು 4.3-ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

ಇನ್ನು ಈ ಬೈಕಿನಲ್ಲಿ ಐಷಾರಾಮಿ ಮಾದರಿಗಳಲ್ಲಿರುವಂತ ಟ್ಯಾಕ್ಷನ್ ಕಂಟ್ರೀಲ್, ವ್ಹೀಲಿ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಗಳನ್ನು ಹೊಂದಿವೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.