ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಪ್ರಮುಖ ನೇಕಡ್ ಬೈಕ್ 2021ರ ಸ್ಟ್ರೀಟ್‌ಫೈಟರ್ ವಿ4 ಎಸ್ ಡಾರ್ಕ್ ಸ್ಟೆಲ್ತ್ ಬೈಕನ್ನು ಜಾಗತಿಕವಾಗಿ ರವಾನೆ ಮಾಡಲು ಪ್ರಾರಂಭಿಸಿದೆ. ಶೀಘ್ರದಲ್ಲೇ ವಿಶ್ವದಾದ್ಯಂತದವಿರುವ ಡುಕಾಟಿ ಡೀಲರ್‌ಗಳ ಬಳಿ ಈ ಬೈಕ್ ತಲುಪಲಿದೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಇನ್ನು ಡುಕಾಟಿ ಇತ್ತೀಚೆಗೆ 2021ರ ಸ್ಟ್ರೀಟ್‌ಫೈಟರ್ ವಿ4 ಮತ್ತು ವಿ4 ಎಸ್ ಬೈಕ್‌ಗಳನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಎರಡು ಬೈಕ್‌ಗಳನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರಲ್ಲಿ ವಿ4 ಎಸ್ ಡಾರ್ಕ್ ಸ್ಟೆಲ್ತ್ ಬೈಕನ್ನು ಮಾತ್ರ ರವಾನೆ ಮಾಡಲು ಪ್ರಾರಂಭಿಸಿದೆ. ಭಾರತದಲ್ಲಿ ಈ ಹೊಸ ಬೈಕ್ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಇನ್ನು ಹೊಸ ಎರಡು ಬೈಕ್‌ಗಳನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ 2021ರ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್ ಹೊಸ 'ಡಾರ್ಕ್ ಸ್ಟೆಲ್ತ್' ಬಣ್ಣವನ್ನು ಪಡೆದುಕೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಇದಲ್ಲದೆ ಬ್ರ್ಯಾಂಡ್ ಕಾರ್ಯಕ್ಷಮತೆಯ ನೇಕೆಡ್ ಬೈಕುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಸ್ಟ್ರೀಟ್‌ಫೈಟರ್ ವಿ4 ಮತ್ತು ಸ್ಟ್ರೀಟ್‌ಫೈಟರ್ ವಿ 4ಎಸ್ ನಡುವೆ ದೊಡ್ಡ ವ್ಯತ್ಯಾಸಗಳಿಲ್ಲ. ಇನ್ನು ಈ ಎರಡು ಹೊಸ ಬೈಕ್‌ಗಳಲ್ಲಿ ಎಂಜಿನ್ ಒಂದೇ ಆಗಿರುತ್ತದೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಮತ್ತು ವಿ4 ಎಸ್ ಬೈಕ್‌ಗಳಲ್ಲಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ 90 ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 206 ಬಿಹೆಚ್‍ಪಿ ಪವರ್ ಮತ್ತು 9.500 ಆರ್‌ಪಿಎಂನಲ್ಲಿ 123 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಬ್ರ್ಯಾಂಡ್‌ನ ಬೈ-ಡೈರಕ್ಷನಲ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಇವಿಒ 2 ಜೊತೆಗೆ ಸ್ಲಿಪ್-ಅಸಿಸ್ಟೆಡ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಎರಡು ಹೊಸ ಬೈಕುಗಳಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್ ಪ್ಲೇಯನ್ನು ಸಹ ನೀಡಲಾಗಿದೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಐದು-ಸ್ಪೀಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ವಿ4 ಎಸ್ ಮಾರ್ಚೆಸಿನಿ 3-ಸ್ಪೋಕ್ ಖೋಟಾ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಎರಡು ಬೈಕುಗಳು ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ II ಪರ್ಫಾರ್ಮೆನ್ಸ್ ಟಯರುಗಳನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಸ್ಟ್ಯಾಂಡರ್ಡ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಬಿಪಿಎಫ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸ್ಯಾಚ್ಸ್ ಮೊನೊ-ಶಾಕ್ ಯುನಿಟ್ ಹೊಂದಿದೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಇನ್ನು 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್‍ ಬೈಕಿನ ಮುಂಭಾಗದಲ್ಲಿ ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ಓಹ್ಲಿನ್ಸ್ ಎನ್ಐಎಕ್ಸ್ 30 ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊ-ಶಾಕ್ ಯುನಿಟ್ ಗಳನ್ನು ಒಳಗೊಂಡಿವೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

ಎರಡು ಬೈಕ್‌ಗಳು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಜ್ ಗಳ ಜೊತೆಯಲ್ಲಿ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ4.30 4-ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿವೆ.

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕಿನಲ್ಲಿ ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕಾರ್ನರಿಂಗ್ ಎಬಿಎಸ್ ಇವಿಒ, ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್(ಡಿಟಿಸಿ) ಇವಿಒ 2, ಡುಕಾಟಿ ವ್ಹೀಲಿ ಕಂಟ್ರೋಲ್ (ಡಿಡಬ್ಲ್ಯೂಸಿ) ಇವಿಒ, ಡುಕಾಟಿ ಸ್ಲೈಡ್ ಕಂಟ್ರೋಲ್ ಎಂಜಿನ್ ಬ್ರೇಕ್ ಕಂಟ್ರೋಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ಹೊಂದಿವೆ

ಹೊಸ ಫೀಚರ್‌ಗಳೊಂದಿಗೆ ಬರಲಿದೆ 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್

2021ರ ಡುಕಾಟಿ ಸ್ಟ್ರೀಟ್‌ಫೈಟರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ. ಆದರೆ ಟಾಪ್-ಸ್ಪೆಕ್ ವಿ4 ಎಸ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಡುಕಾಟಿ ducati
English summary
Global Dispatches Of Ducati Streetfighter V4 Dark Stealth Commence. Read In Kannada.
Story first published: Thursday, March 18, 2021, 21:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X