ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಹೈ ಸ್ಪೀಡ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಅನಾವರಣಗೊಳಿಸಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಲೋ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಆಕ್ಸಿಸ್ ಮತ್ತು ರೈಡ್ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿ ಮಾರಾಟ ಆರಂಭಿಸಿರುವ ಇವಿಟ್ರಿಕ್ ಕಂಪನಿಯು ಇದೀಗ ಹೊಸದಾಗಿ ಹೈ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ರೈಜ್(Rise) ಮೋಟಾರ್‌ಸೈಕಲ್, ಮೈಟಿ(Mighty) ಮತ್ತು ರೈಡ್ ಪ್ರೊ(Ride Pro) ಎನ್ನುವ ಸ್ಕೂಟರ್‌ಗಳನ್ನು ಅಭಿವೃದ್ದಿಗೊಳಿಸಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿರುವ ರೈಜ್, ಮೈಟಿ ಮತ್ತು ರೈಡ್ ಪ್ರೊ ಮಾದರಿಗಳನ್ನು ಇವಿಟ್ರಿಕ್ ಕಂಪನಿಯು '2021ರ ಇವಿ ಇಂಡಿಯಾ ಎಕ್ಸ್‌ಪೋ'ದಲ್ಲಿ ಅನಾವರಣಗೊಳಿಸಿದ್ದು, ಹೊಸ ಇವಿ ಮಾದರಿಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಹೊಸ ರೈಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯು ಕಂಪನಿಯ ಮೊದಲ ಇವಿ ಬೈಕ್ ಆವೃತ್ತಿಯಾಗಿದ್ದು, ಇದರಲ್ಲಿ ಅತ್ಯುನ್ನತ ತಂತ್ರಜ್ಞಾನವನ್ನು ಬಳಕೆ ಮಾಡಿರುವ ಕಂಪನಿಯು 3.0 kWh ಲಿಥಿಯಂ-ಐಯಾನ್ ಬ್ಯಾಟರಿ ಜೋಡಣೆ ಮಾಡಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಸಂಪೂರ್ಣವಾಗಿ ಒಂದು ಚಾರ್ಜ್ ಮಾಡಿದ ನಂತರ ಈ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಪ್ರತಿ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ 120 ಕಿ.ಮೀ ದೂರ ಕ್ರಮಿಸಬಹುದಾಗಿದ್ದು, ಇದು ಸಾಮಾನ್ಯ 125 ಸಿಸಿ ಎಂಜಿನ್ ಪ್ರೇರಿತ ಬೈಕ್ ಮಾದರಿಗಳಂತೆ ಉತ್ತಮವಾಗಿರುವ ಬ್ರೇಕಿಂಗ್, ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಉತ್ತಮವಾದ ಆಸನ ಸೌಲಭ್ಯವನ್ನು ಹೊಂದಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಹಾಗೆಯೇ ಹೊಸ ಹೈ ಸ್ಪೀಡ್ ಮಾದರಿಗಳಲ್ಲಿ ಮತ್ತೊಂದು ಗಮನಸೆಳೆಯುವ ಮಾದರಿಯಾದ ಮೈಟಿ ಆವೃತ್ತಿಯನ್ನು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಭಾಗದಲ್ಲಿ ಪರಿಚಯಿಸಲಾಗುತ್ತಿದ್ದು, ಈ ಸ್ಕೂಟರ್ ಅತ್ಯಂತ ಶಕ್ತಿಶಾಲಿ ಮತ್ತು ಆರಾಮದಾಯಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಈ ಸ್ಕೂಟರ್ ಗರಿಷ್ಠ 70 ಕಿಮೀ ವೇಗದೊಂದಿಗೆ ಪ್ರತಿ ಚಾರ್ಜ್‌ನಲ್ಲಿ ಗರಿಷ್ಠ 90 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಮುಖ ಇವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಇನ್ನು ಹೊಸದಾಗಿ ಅನಾವರಣಗೊಳಿಸಿದ ಮಾದರಿಗಳಲ್ಲಿ ರೈಡ್ ಪ್ರೊ ಮಾದರಿಯು ಕೂಡಾ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಇದು ಪ್ರತಿ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಹೊಸ ರೈಜ್, ಮೈಟಿ ಮತ್ತು ರೈಡ್ ಪ್ರೊ ಮಾದರಿಗಳ ಮೂಲಕ ಇವಿಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಇವಿ ಮಾದರಿಗಳ ಬೆಲೆ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಇವಿಟ್ರಿಕ್ ಕಂಪನಿಯು ಸದ್ಯ ಆಕ್ಸಿಸ್ ಮತ್ತು ರೈಡ್ ಎಂಬ ಎರಡು ಲೋ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸುವ ಮೂಲಕ ದೇಶಾದ್ಯಂತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಮುಂದಿನ ಎಪ್ರಿಲ್ ಒಳಗಾಗಿ ದೇಶಾದ್ಯಂತ ಪ್ರಮುಖ 70 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ವಿಸ್ತರಿಸುವ ಗುರಿಹೊಂದಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಇವಿಟ್ರಿಕ್ ಕಂಪನಿಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಪ್ರಮುಖ ಮಲ್ಟಿ ಇವಿ ಬ್ರಾಂಡ್ ವಿತರಕರೊಂದಿಗೆ ಮಾರಾಟ ಸೌಲಭ್ಯವನ್ನು ತೆರೆದಿದ್ದು, ಮುಂಬರುವ ಕೆಲವೇ ತಿಂಗಳಿನಲ್ಲಿ ಮತ್ತಷ್ಟು ಹೊಸ ಇವಿ ಮಾರಾಟ ಮಳಿಗೆಗಳನ್ನು ತೆರೆಯಲಿದೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇವಿಟ್ರಿಕ್ ಸ್ಕೂಟರ್‌ಗಳು ಎಕ್ಸ್‌ಶೋರೂಂ ಪ್ರಕಾರ ರೂ. 64,994(ಆಕ್ಸಿಸ್) ಮತ್ತು ರೂ. 67,996(ರೈಡ್) ಬೆಲೆ ಹೊಂದಿದ್ದು, ಹೊಸದಾಗಿ ಅನಾವರಣಗೊಂಡಿರುವ ಹೊಸ ಇವಿ ಮಾದರಿಗಳು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ರೂ. 75 ಸಾವಿರದಿಂದ ರೂ.95 ಸಾವಿರ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿವೆ.

ಮೂರು ಹೊಸ ಹೈ ಸ್ಪೀಡ್ ಇವಿ ಸ್ಕೂಟರ್ ಮತ್ತು ಬೈಕ್ ಅನಾವರಣಗೊಳಿಸಿದ ಇವಿಟ್ರಿಕ್

ಆಕ್ಸಿಸ್ ಮತ್ತು ರೈಡ್ ಮಾದರಿಗಳು ಪ್ರತಿ ಚಾರ್ಜ್‌ಗೆ ಹೊಸ ಸ್ಕೂಟರ್‌ಗಳು ಗರಿಷ್ಠ 75 ಕಿಮೀ ವರೆಗೆ ಚಲಿಸಲಿದ್ದು, 250W ಮೋಟಾರ್‌ನೊಂದಾಗಿಗೆ ಗರಿಷ್ಠ 25 ಕಿ.ಮೀ ವೇಗವನ್ನು ತಲುಪಬಲ್ಲವು. ಹೀಗಾಗಿ ಹೊಸ ಸ್ಕೂಟರ್‌ಗಳ ಚಾಲನೆಗೆ ನೋಂದಣಿ ಮಾಡುವ ಅವಶ್ಯವಿರುವುದಿಲ್ಲ.

Most Read Articles

Kannada
English summary
Evtric motors unveils high speed range of electric two wheelers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X