EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ 2022ರ ಇವಿ ಇಂಡಿಯಾ ಎಕ್ಸ್‌ಪೋ ವಿದ್ಯುಕ್ತವಾಗಿ ಚಾಲನೆ ಪಡೆದುಕೊಂಡಿದ್ದು, ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಹಲವಾರು ಹೊಸ ಇವಿ ವಾಹನಗಳು ಪ್ರದರ್ಶನಗೊಳ್ಳುತ್ತಿವೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಹಲವಾರು ಹೊಸ ಇವಿ ವಾಹನ ಮಾದರಿಗಳು ಪ್ರದರ್ಶನಗೊಳ್ಳುತ್ತಿದ್ದು, ಇವಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಇವಿಟ್ರಿಕ್ ಕಂಪನಿಯು ಕೂಡಾ ತನ್ನ ಬಹುನೀರಿಕ್ಷಿತ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್‌ಗಳನ್ನು ಪ್ರದರ್ಶನಗೊಳಿಸುವುದರ ಜೊತೆಗೆ ಅಧಿಕೃತ ಬಿಡುಗಡೆ ಮಾಡಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಮಾದರಿಗಳು ಹೈ ಸ್ಪೀಡ್ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಇವಿಟ್ರಿಕ್ ಕಂಪನಿಯು ಮೈಟಿ ಪ್ರೊ ಇವಿ ಸ್ಕೂಟರ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 79,567 ಕ್ಕೆ ಮತ್ತು ರೈಡ್ ಹೆಚ್ಎಸ್ ಇವಿ ಸ್ಕೂಟರ್ ಬೆಲೆಯನ್ನು ರೂ. 81,838 ಕ್ಕೆ ನಿಗದಿಪಡಿಸಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ವಿವಿಧ ಮಾದರಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಹೈ ಸ್ಪೀಡ್ ಇವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್‌ಗಳು ತನ್ನ ವಿಭಾಗದಲ್ಲಿನ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಮಾದರಿಯಾಗಿದ್ದು, ಅತ್ಯುತ್ತಮ ಉತ್ಪಾದನಾ ಗುಣಮಟ್ಟ ಹೊಂದಿರುವ ಹೊಸ ಇವಿ ಮಾದರಿಗಳು ಗ್ರಾಹಕರನ್ನು ಸೆಳೆಯಲು ಸಜ್ಜಾಗಿವೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇವಿಟ್ರಿಕ್ ಬ್ರ್ಯಾಂಡ್ ಈಗಾಗಲೇ ಮಾರುಕಟ್ಟೆಯಲ್ಲಿ ರೈಡ್, ಆಕ್ಸಿಸ್, ಮೈಟಿ, ರೈಸ್, ಕನೆಕ್ಟ್, ರೈಡ್ ಪ್ರೊ ಮತ್ತು ಹೊಸದಾಗಿ ಮೈಟಿ ಪ್ರೊ ಮತ್ತು ರೈಡ್ ಹೆಚ್ಎಸ್ ಸೇರಿ ಒಟ್ಟು 8 ಇವಿ ದ್ವಿಚಕ್ರ ವಾಹನ ಉತ್ಪನ್ನಗಳನ್ನು ಹೊಂದಿದ್ದು, ಹೊಸ ಇವಿ ಮಾದರಿಗಳು ಹೆಚ್ಚಿನ ತಾಂತ್ರಿಕ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇದರಲ್ಲಿ ರೈಡ್ ಹೆಚ್ಎಸ್ ಮಾದರಿಯು ಹೈ-ಸ್ಪೀಡ್ ವೈಶಿಷ್ಟ್ಯತೆ ಹೊಂದಿದ್ದು, ಉನ್ನತ ಕಾರ್ಯಕ್ಷಮತೆಯೊಂದಿಗೆ ಸಶಕ್ತಗೊಳಿಸಲಾಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 55 ಕಿ.ಮೀ ವೇಗದೊಂದಿಗೆ ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಪಡೆದುಕೊಳ್ಳುತ್ತದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ರೈಡ್ ಹೆಚ್ಎಸ್ ಮಾದರಿಯನ್ನು ಕಂಪನಿಯು ಕೆಂಪು, ಕಪ್ಪು, ಬಿಳಿ ಮತ್ತು ಬೂದು ಬಣ್ಣಗಳಲ್ಲಿ ಮಾರಾಟಗೊಳಿಸಲಿದ್ದು, ಶೀಘ್ರದಲ್ಲಿಯೇ ಹೊಸ ಸ್ಕೂಟರ್ ವಿತರಣೆಯು ಆರಂಭವಾಗಲಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇನ್ನು ಮೈಟಿ ಪ್ರೊ ಮಾದರಿಯು ಬ್ರ್ಯಾಂಡ್‌ನ ಹೈ-ಸ್ಪೀಡ್ ಸ್ಕೂಟರ್ ಸವಾರರಿಗೆ ಉತ್ತಮ ಆಯ್ಕೆಯಾಗಿದ್ದು, ತಾಂತ್ರಿಕ ಸೌಕರ್ಯಗಳ ಮಿಶ್ರಣವನ್ನು ನೀಡುತ್ತದೆ. ಇದು ಸುಲಭವಾಗಿ ಗರಿಷ್ಠ 65 ಕಿಮೀ ವೇಗ ತಲುಪುದರ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 120 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆಗಲು ಗರಿಷ್ಠ 4 ಗಂಟೆ ತೆಗೆದುಕೊಳ್ಳಲಿದ್ದು, ಬಳಕೆದಾರರ ಆಯ್ಕೆಗಳನ್ನು ಪೂರೈಸಲು ಇದು ಕೆಂಪು, ಬಿಳಿ ಮತ್ತು ಬೂದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಎರಡೂ ಇ-ಸ್ಕೂಟರ್‌ಗಳಲ್ಲೂ ಕಂಪನಿಯು ಲಿಥಿಯಂ-ಐಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಸಂಪೂರ್ಣವಾಗಿ ಮೇಕ್ ಇನ್ ಇಂಡಿಯಾ ಯೋಜನಡಿಯಲ್ಲಿ ನಿರ್ಮಾಣವಾಗಿ ಹೊಸ ಸ್ಕೂಟರ್‌ಗಳು ಗ್ರಾಹಕರ ಸ್ನೇಹಿ ವೈಶಿಷ್ಟ್ಯತೆಗಳನ್ನು ಹೊಂದಿವೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಪುಣೆ ಮೂಲದ ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಸದ್ಯ ಪುಣೆ, ಮುಂಬೈ, ದೆಹಲಿ, ಗುರುಗ್ರಾಮ್, ಬೆಂಗಳೂರು, ಔರಂಗಾಬಾದ್, ಹೈದರಾಬಾದ್‌ ಮತ್ತು ತಿರುಪತಿಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಮಾರಾಟ ಸೌಲಭ್ಯ ಹೊಂದಿದ್ದು, ಮುಂದಿನ ಆರು ತಿಂಗಳಲ್ಲಿ 28 ರಾಜ್ಯಗಳಲ್ಲೂ ವಿತರಕರನ್ನು ತೆರೆಯಲು ಯೋಜಿಸಲಾಗಿದೆ ಎಂದು ಕಂಪನಿ ಹೇಳಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ ಕಂಪನಿಗಳು ಯಶಸ್ವಿಯಾಗುತ್ತಿವೆ.

EV India Expo 2022: ಇವಿಟ್ರಿಕ್ ಹೊಸ ರೈಡ್ ಹೆಚ್ಎಸ್ ಮತ್ತು ಮೈಟಿ ಪ್ರೊ ಇವಿ ಸ್ಕೂಟರ್ ಬಿಡುಗಡೆ

ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಆವೃತ್ತಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
Evtric motors launched ride hs mighty pro at ev india expo details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X