ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ ಫೋರ್ಸ್(GT Force) ಕಂಪನಿಯು ಇವಿ ಇಂಡಿಯಾ ಎಕ್ಸ್‌ಪೋ: 2021(EV India Expo 2021 ) ದಲ್ಲಿ ಹೊಸ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದೆ. ಜಿಟಿ ಫೋರ್ಸ್ ಎಕ್ಸ್‌ಪೋ:ದಲ್ಲಿ ಪ್ರದರ್ಶನಗೊಳಿಸಿದ ಮಾದರಿಗಳು ಜಿಟಿ ಡ್ರೈವ್, ಜಿಟಿ ಡ್ರೈವ್ ಪ್ರೊ ಮತ್ತು ಎಲೆಕ್ಟ್ರಿಕ್ ಬೈಕ್ ಪ್ರೊಟೊಟೈಪ್ ಆಗಿದೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇದೇ ಸಂದರ್ಭದಲ್ಲಿ ಸ್ಟಾರ್ಟ್-ಅಪ್ ಇವಿ ಕಂಪನಿ ಜಿಟಿ ಫೋರ್ಸ್ ಚಮತ್ಕಾರಿ ಶೈಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸುವ ಉನ್ನತ-ಮಟ್ಟದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಲೈನ್-ಅಪ್ ಅನ್ನು ಪ್ರಸ್ತುತಪಡಿಸಿದ್ದಾರೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ ಡ್ರೈವ್ ಎಲೆಕ್ಟ್ರಿಕ್ ಸ್ಕೂಟರ್

ಜಿಟಿ ಫೋರ್ಸ್ ಕಂಪನಿಯು ಅನಾವರಣಗೊಳಿಸಿದ ಜಿಟಿ ಡ್ರೈವ್ ಎಲೆಕ್ಟ್ರಿಕ್ ಸ್ಕೂಟರ್ ಹೈ-ಸ್ಪೀಡ್ ವಿಭಾಗಕ್ಕೆ ಸೇರ್ಪಡೆಯಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 60 ಕಿಲೋಮೀಟರ್‌ಗಳ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣ ಚಾರ್ಜ್ ಮಾಡಿದರೆ 150 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ. ಅಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ 150 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ..

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಈ ಜಿಟಿ ಡ್ರೈವ್ ಎಲೆಕ್ಟ್ರಿಕ್ ಸ್ಕೂಟರ್ ಲಿಥಿಯಂ-ಐಯಾನ್ ಬ್ಯಾಟರಿಯಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಎಕಾನಾಮಿ, ಸ್ಟ್ಯಾಂಡರ್ಡ್ ಮತ್ತು ಟರ್ಬೊ ಎಂಬ ಮೂರು ಡ್ರೈವ್ ಮೋಡ್‌ಗಳೊಂದಿಗೆ ಬರುತ್ತದೆ. ಇದರೊಂದಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಸಹ ಹೊಂದಿದೆ,

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ ಡ್ರೈವ್ ಪ್ರೊ ಲೆಕ್ಟ್ರಿಕ್ ಸ್ಕೂಟರ್

ನಿಧಾನಗತಿಯ ವಿಭಾಗಕ್ಕೆ ಸೇರುವ ಈ ಸ್ಕೂಟರ್ ಕಡಿಮೆ-ದೂರ ಪ್ರಯಾಣದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಮಾದರಿಯಾಗಿದೆ. ಕುಟುಂಬ, ಮಹಿಳೆಯರು ಮತ್ತು ಮಕ್ಕಳ ಅಗತ್ಯತೆಗಳನ್ನು ಅರ್ಥೈಸಿಕೊಂಡು, ಉತ್ಪನ್ನವನ್ನು ಎಲ್ಲರೊಂದಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಈ ಹೊಸ ಜಿಟಿ ಡ್ರೈವ್ ಪ್ರೊ ಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣ ಚಾರ್ಜ್ ಮಾಡಿದರೆ 150 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 25 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಮಾದರಿಯು ಲೀಡ್ ಆಸಿಡ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಒಳಗೊಂಡಿರುತ್ತದೆ,

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಎಲೆಕ್ಟ್ರಿಕ್ ಬೈಕ್

ಹೆಚ್ಚುವರಿಯಾಗಿ ಜಿಟಿ ಫೋರ್ಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕಿನ ಪ್ರೊಟೊಟೈಪ್ ಮಾದರಿಯನ್ನು ಎಕ್ಸ್‌ಪೋದಲ್ಲಿ ಪ್ರೇಕ್ಷಕರಿಗಾಗಿ ಅನಾವರಣಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಈ ಹೊಸ ಎಲೆಕ್ಟ್ರಿಕ್ ಬೈಕ್ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ,

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ ಫೋರ್ಸ್ ಕಂಪನಿಯ ಸಿಇಒ ಮುಖೇಶ್ ತನೇಜಾ ಅವರು ಮಾತನಾಡಿ, ಎಲೆಕ್ಟ್ರಿಕ್ ವಾಹನಗಳು ದೂರ ಪ್ರಯಾಣದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದಿರಬಹುದು ಅಥವಾ ಬಹುಶಃ ಅವು ಅನಾನುಕೂಲಕರವಾಗಿರಬಹುದು ಎಂಬ ತಪ್ಪು ಕಲ್ಪನೆಯಲ್ಲಿ ಜನರಿದ್ದಾರೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಈ ತಪ್ಪು ಕಲ್ಪನೆಗೆ ಕಾರಣವೇನೆಂದರೆ, ಅವರು ಇನ್ನೂ ಉತ್ಪನ್ನಗಳನ್ನು ನಿಜವಾಗಿಯೂ ಪ್ರಯತ್ನ ಮಾಡಿಯೇ ಇಲ್ಲ. ಆದ್ದರಿಂದ, ಉತ್ಪನ್ನವನ್ನು ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಹೆಚ್ಚಿನ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ವಿತರಕರ ಜಾಲವನ್ನು ವಿಸ್ತರಿಸಲು ತಂಡವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ-ಫೋರ್ಸ್‌ನ ಸಿಒ-ಸಂಸ್ಥಾಪ ರಾಜೇಶ್ ಸೈತ್ಯ ಅವರು ಮಾತನಾಡಿ, ಭಾರತವು ನಿಧಾನಗತಿಯಲ್ಲಿ ಐಸಿಇ ನಿಂದ ಇವಿ ಕಡೆಗೆ ಚಲಿಸುತ್ತಿದೆ. ಬಳಕೆದಾರರಿಗೆ ಕೈಗೆಟುಕುವ ಗುಣಮಟ್ಟದ ಮಾದರಿಗಳನ್ನು ನೀಡುವ ಮೂಲಕ ನಾವು ನಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಇದರ ಉದ್ದೇಶವು ದೊಡ್ಡ ರಾಷ್ಟ್ರೀಯ ಮಹತ್ವಾಕಾಂಕ್ಷೆಗೆ ಸೇರಿಕೊಳ್ಳುವುದಾಗಿದೆ, ಅಂತಿಮ-ಬಳಕೆದಾರರು ಇವಿ ತಂತ್ರಜ್ಞಾನದೊಂದಿಗೆ ಪರಿಚಿತರಾಗಿರುವುದು ಕಡ್ಡಾಯವಾಗಿದೆ. ಜನರ ಪ್ರಯಾಣದ ಸವಾಲುಗಳನ್ನು ಒಂದೊಂದಾಗಿ ಪರಿಹರಿಸುವ ರೀತಿಯಲ್ಲಿ ನಾವು ನಮ್ಮ ಉತ್ಪನ್ನವನ್ನು ವಿಸ್ತರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ-ಫೋರ್ಸ್ ಕಂಪನಿಯು ಈಗಾಗಲೇ ತನ್ನ ವಿತರಕರ ಜಾಲವನ್ನು ದೇಶದಾದ್ಯಂತ 80 ನಗರಗಳಲ್ಲಿ 100 ಕ್ಕೂ ಹೆಚ್ಚು ಡೀಲರ್‌ಶಿಪ್‌ನೊಂದಿಗೆ ವಿಸ್ತರಿಸಿದೆ, ಸದ್ಯ ಇದು ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಪ್ರಬಲವಾದ ಅಸ್ತಿತ್ವವನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ತನ್ನ ನೆಟ್‌ವರ್ಕ್ ಅನ್ನು 150 ಕ್ಕೂ ಹೆಚ್ಚು ವಿತರಕರಿಗೆ ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ.

ಇವಿ ಇಂಡಿಯಾ ಎಕ್ಸ್‌ಪೋ 2021: ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನಾವರಣಗೊಳಿಸಿದ GT-Force

ಜಿಟಿ-ಫೋರ್ಸ್ ಹ್ಯೂಸ್ಟನ್ ಇನ್ನೋವೇಶನ್ಸ್ ಎಲ್ಎಲ್‌ಪಿ ಯ ಪ್ರಮುಖ ಬ್ರಾಂಡ್ ಆಗಿದೆ ಮತ್ತು ಇದು ಹರಿಯಾಣದ ಮಾನೇಸರ್‌ ಎಂಬಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಈ ಬ್ರ್ಯಾಂಡ್ ಆರಂಭದಿಂದಲೂ ಜನರ ನಂಬಿಕೆಯನ್ನು ಬೆಳೆಸುವುದಕ್ಕಾಗಿ ಶ್ರಮಿಸಿದರು. ಜಿಟಿ ಫೋರ್ಸ್ ಬ್ರಾಂಡ್ ಹೆಸರಿನಲ್ಲಿ ಜಿಟಿ ಫೋರ್ಸ್ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.

Most Read Articles

Kannada
English summary
Gt force unveiled new three electric two wheelers at ev india expo 2021 details
Story first published: Monday, December 27, 2021, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X