ಇಂಡಿಯಾ ಬೈಕ್ ವೀಕ್ 2021: ಹಾರ್ಲೆ ಡೇವಿಡ್ಸನ್ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡನ್ಸ್ ಕಂಪನಿಯು ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 15.51 ಲಕ್ಷ ಬೆಲೆ ಹೊಂದಿದೆ.

ಇಂಡಿಯನ್ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮಾದರಿಯು ಹಾರ್ಲೆ ಡೇವಿಡ್ಸನ್ ನಿರ್ಮಾಣದ ಅತ್ಯಾಧುನಿಕ ಪ್ರೀಮಿಯಂ ಕ್ರೂಸರ್ ಮಾದರಿಯಾಗಿದ್ದು, ಸ್ಪೋರ್ಟ್‌ಸ್ಟರ್ ಎಸ್ ಮಾದರಿಯು ಪ್ಯಾನ್ ಅಮೆರಿಕಾ 1250 ಅಡ್ವೆಂಚರ್ ಬೈಕ್‌ನ ನಂತರ ಹೊಸ ರೆವಲ್ಯೂಷನ್ ಮ್ಯಾಕ್ಸ್ 1250 ಪ್ಲಾಟ್‌ಫಾರ್ಮ್ ಆಧರಿಸಿ ಮಾರುಕಟ್ಟೆಗೆ ಬಂದ ಎರಡನೇ ಹಾರ್ಲೆ-ಡೇವಿಡ್ಸನ್ ಮಾದರಿಯಾಗಿದೆ.

ಇಂಡಿಯನ್ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯೊಂದಿಗೆ ಸಹಭಾಗಿತ್ವ ಯೋಜನೆ ಆರಂಭಿಸಿದ ನಂತರ ಬಿಡುಗಡೆಯಾದ ಎರಡನೇ ಬೈಕ್ ಮಾದರಿಯಾಗಿರುವ ಸ್ಪೋರ್ಟ್‌ಸ್ಟರ್ ಎಸ್ ಆವೃತ್ತಿಯು ಹೆಚ್ಚಿನ ಟಾರ್ಕ್‌ಗಾಗಿ ಟ್ಯೂನಿಂಗ್ ಮಾಡಲಾದ ಎಂಜಿನ್ ಪಡೆದುಕೊಂಡಿದೆ.

ಇಂಡಿಯನ್ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ಸ್ಪೋರ್ಟ್‌ಸ್ಟರ್ ಎಸ್‌ ಮಾದರಿಯಲ್ಲಿ ಪ್ಯಾನ್ ಅಮೆರಿಕಾ 1250 ಅಡ್ವೆಂಚರ್ ಟೂರರ್‌ನಲ್ಲಿರುವ ಕೌಂಟರ್‌ಬ್ಯಾಲೆನ್ಸ್ಡ್ ರೆವಲ್ಯೂಷನ್ ಮ್ಯಾಕ್ಸ್ 1250 ಸಿಸಿ ಲಿಕ್ವಿಡ್-ಕೂಲ್ಡ್ ವಿ-ಟ್ವಿನ್ ಎಂಜಿನ್ ನೀಡಲಾಗಿದ್ದು, ಇದು 60-ಡಿಗ್ರಿ ವಿ-ಟ್ವಿನ್ ಎಂಜಿನ್ ಮಾದರಿಯಾಗಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಸ್ಪೋರ್ಟ್‌ಸ್ಟರ್ ಎಸ್‌ನಲ್ಲಿರುವ ಎಂಜಿನ್ ಅನ್ನು ಹಾರ್ಲೆ ಕಂಪನಿಯು ರೆವಲ್ಯೂಷನ್ ಮ್ಯಾಕ್ಸ್ 1250ಟಿ ಎಂದು ಹೆಸರಿಸಿದ್ದು, ಇದು 7,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಮತ್ತು 6,000 ಆರ್‌ಪಿಎಂನಲ್ಲಿ 125 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಸಾಫ್ಟ್ ಶಿಫ್ಟ್‌ಗಳೊಂದಿಗೆ ಜೋಡಿಸಲಾಗಿದೆ.

ಇಂಡಿಯನ್ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ಹಾರ್ಲೆ ಡೇವಿಡ್‌ಸನ್ ಕಂಪನಿಯು ಹೊಸ ಸ್ಪೋರ್ಟ್‌ಸ್ಟರ್ ಎಸ್ ಮಾದರಿಯಲ್ಲಿ ಮೂರು ಪೂರ್ವ ನಿರ್ಧರಿತ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಸ್ಪೋರ್ಟ್, ರೋಡ್ ಮತ್ತು ರೈನ್ ಮೋಡ್‌ಗಳೊಂದಿಗೆ ಬೈಕ್ ಮಾಲೀಕರು ತಮ್ಮ ಸವಾರಿ ಶೈಲಿಗೆ ಸೂಕ್ತವಾದ ವೈಶಿಷ್ಟ್ಯತೆಗಳನ್ನು ಪಡೆಯಲು ಸಂಪೂರ್ಣ ಗ್ರಾಹಕೀಯಗೊಳಿಸಬಹುದಾದ ಸೌಲಭ್ಯವನ್ನು ಸಹ ನೀಡಲಾಗಿದೆ.

ಇಂಡಿಯನ್ ಬೈಕ್ ವೀಕ್‌ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬಿಡುಗಡೆ

ವಿಭಿನ್ನ ರೈಡಿಂಗ್ ಮೋಡ್‌ಗಳ ನಡುವೆ ಸೈಕ್ಲಿಂಗ್ ಮಾಡುವುದರಿಂದ ಥ್ರೊಟಲ್ ಪ್ರತಿಕ್ರಿಯೆ, ಟಾರ್ಕ್ ವಿತರಣೆ ಮತ್ತು ಎಂಜಿನ್ ಬ್ರೇಕಿಂಗ್ ಅನ್ನು ಟ್ವೀಕ್ ಮಾಡಬಹುದಾಗಿದ್ದು, ಹೊಸ ಬೈಕಿನ ಎಬಿಎಸ್ ಸೆಟಪ್‌ಗಳು ಸಾಕಷ್ಟು ಹೊಸತನದೊಂದಿಗೆ ಕೂಡಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಹೊಸ ಬೈಕಿನಲ್ಲಿ ಹಾರ್ಲೆ ಕಂಪನಿಯು 43 ಎಂಎಂ ಇನ್ವರ್ಟೆಡ್ ಫ್ರಂಟ್ ಫೋರ್ಕ್‌ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಂಷನ್ ಹೊಂದಿದ್ದು, ಇದರೊಂದಿಗೆ ಶೋವಾ ಸಸ್ಪೆನ್ಷನ್ ಸೆಟಪ್ ಕಂಪ್ರೆಷನ್, ರಿಬೌಂಡ್ ಮತ್ತು ಸ್ಪ್ರಿಂಗ್ ಪ್ರಿಲೋಡ್‌ಗಾಗಿ ಹೊಂದಾಣಿಕೆ ಪಡೆದುಕೊಂಡಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಹಾಗೆಯೇ ಹೊಸ ಸ್ಪೋರ್ಟ್‌ಸ್ಟರ್ ಎಸ್ ಮಾದರಿಯಲ್ಲಿ 4 ಪಿಸ್ಟನ್ ಬ್ರೆಂಬೊ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ರೆಡಿಯಲ್ ಮೌಂಟೆಡ್ ಮೊನೊಬ್ಲಾಕ್ ಫ್ರಂಟ್ ಡಿಸ್ಕ್ ಬ್ರೇಕ್ ಜೋಡಿಸಲಾಗಿದ್ದು, ಹಿಂಬದಿಯಲ್ಲಿ ಸಿಂಗಲ್ ಬ್ರೆಂಬೋ ಬ್ರೇಕ್ ಕ್ಯಾಲಿಪರ್ ಸೆಟಪ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್‌‌ನೊಂದಿಗೆ 228 ಕೆಜಿ ತೂಕ ಹೊಂದಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಸ್ಪೋರ್ಟ್‌ಸ್ಟರ್ ಎಸ್ ಮಾದರಿಯು ಮುಂಭಾಗದಲ್ಲಿ 17-ಇಂಚಿನ ಚಕ್ರವನ್ನು ಮತ್ತು 16 ಇಂಚಿನ ಚಕ್ರವನ್ನು ಹಿಂಬದಿಯಲ್ಲಿ ಜೋಡಿಸಲಾಗಿದ್ದು, ಹಗುರವಾದ ಅಲ್ಯೂಮಿನಿಯಂ ಚಕ್ರಗಳಲ್ಲಿ 160/70 ಟಿಆರ್17 (ಮುಂಭಾಗ) ಮತ್ತು 180/70 ಆರ್16 (ಹಿಂಭಾಗ) ಡನ್‌ಲಾಪ್ ಟೈರ್‌ಗಳನ್ನು ನೀಡಲಾಗಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಹೊಸ ಹಾರ್ಲೆ ಡೇವಿಡ್ಸನ್ ಹೊಸ ಸ್ಪೋರ್ಟ್‌ಸ್ಟರ್ ಎಸ್ ಮಾದರಿಯು 2,265 ಎಂಎಂ ಉದ್ದ, 843 ಎಂಎಂ ಅಗಲ ಮತ್ತು 1,089 ಎಂಎಂ ಎತ್ತರವಾಗಿದ್ದು, ಬೈಕ್‌ನ ವ್ಹೀಲ್‌ಬೇಸ್ 1,519 ಎಂಎಂ ಉದ್ದವಾಗಿದೆ. ಜೊತೆಗೆ ಸ್ಪೋರ್ಟ್‌ಸ್ಟರ್ ಎಸ್‌ ನ ಆಸನವು 752 ಎಂಎಂ ಎತ್ತರವಾಗಿದ್ದರೂ ಕೇವಲ 93 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 11.8 ಲೀಟರ್ ಫ್ಯೂಲ್ ಟ್ಯಾಂಕ್ ಜೊತೆ 3 ಲೀಟರ್ ಎಮರ್ಜೆನ್ಸಿ ಫ್ಯೂಲ್ ಟ್ಯಾಂಕ್ ಹೊಂದಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಇದರೊಂದಿಗೆ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮಾದರಿಯು ಆಯತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಆಕರ್ಷಕವಾದ ಟೈರ್‌, ಆಸನ ಬಲಬದಿಗೆ ಸಾಕಷ್ಟು ಹತ್ತಿರದಲ್ಲಿ ಇರುವ ಹೈ-ಮೌಂಟೆಡ್ 2-1-2 ಎಕ್ಸಾಸ್ಟ್ ಸೆಟಪ್‌ ಮತ್ತು ರೈಡ್‌ಗೆ ಎಕ್ಸಾಸ್ಟ್ ಶಾಖ ತಗುಲದಂತೆ ಮಾಡಲು 304-ಸರಣಿಯ ಸ್ಟೇನ್‌ಲೆಸ್ ಸ್ಟೀಲ್ ಎಕ್ಸಾಸ್ಟ್ ಬಳಸಲಾಗಿದೆ.

ಇಂಡಿಯನ್ ಬೈಕ್ ವೀಕ್‌ ನಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ ಸ್ಟರ್ ಎಸ್ ಬಿಡುಗಡೆ

ಸ್ಪೋರ್ಟ್‌ಸ್ಟರ್ ಎಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್‌ಗಳಿಗಾಗಿ 4-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಹಾರ್ಲೆ ಡೇವಿಡ್ಸನ್ ಅಪ್ಲಿಕೇಶನ್‌ ಸಂಪರ್ಕದೊಂದಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಐಯುಎಂ, ಕಾರ್ನರ್ ಎಬಿಎಸ್, ಕ್ರೂಸ್ ಕಂಟ್ರೊಲ್, ಟ್ರಾಕ್ಷನ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವಾರು ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

Most Read Articles

Kannada
English summary
Harley davidson sportster s launched in india at rs 15 51 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X