ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಹೊಸ ಬೈಕ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ ಟೀಸರ್ ಚಿತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಹೊಸ ಬೈಕ್ ಅನ್ನು ಮುಂದಿನ ವರ್ಷ ಜನವರಿ 26 ರಂದು ತನ್ನ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲಿದೆ ಎಂದು ಟೀಸರ್ ನಲ್ಲಿ ತಿಳಿಸಿದೆ, ಟೀಸರ್ ನಲ್ಲಿ "Further Faster" ಎಂಬ ಟ್ಯಾಗ್ ಲೈನ್ ಅನ್ನು ನೀಡಿದೆ. ಇದನ್ನು ಹೊರತುಪಡಿಸಿ ಕಂಪನಿಯು ಉಳಿದಂತೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ, ಮುಂಬರುವ ಹೊಸ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಮಾದರಿಯ ರೂಪಾಂತರವಾಗಿರಬಹುದು ಅಥವಾ ಇದು ಸಂಪೂರ್ಣವಾಗಿ ಹೊಸ ಮಾದರಿಯಾಗಿರಬಹುದು, ಆದರೆ ಈ ಮಾದರಿಯ ಬಗ್ಗೆ ನಿಖರವಾಗಿ ಈಗಲೇ ಹೇಳಲು ಸಾಧ್ಯವಿಲ್ಲ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಹಾರ್ಲೆ ಡೇವಿಡ್ಸನ್ ಕಂಪನಿಯು ಮುಂದಿನ ವರ್ಷಕ್ಕೆ ಕೆಲವು ಪ್ರಮುಖ ಯೋಜನೆಗಳನ್ನು ಹೊಂದಿದೆ. ಕಂಪನಿಯು ತನ್ನ ಪ್ರೀಮಿಯಂ ಇವಿ ಬ್ರ್ಯಾಂಡ್ ಲೈವ್‌ವೈರ್ ಅಡಿಯಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬೈಕ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಇತ್ತೀಚಿನ ಜಾಗತಿಕ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ಲೈವ್‌ವೈರ್ ‘ಎಸ್2 ಡೆಲ್ ಮಾರ್' ಅನ್ನು ಪರಿಚಯಿಸುತ್ತದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಹೊಸ ಬೈಕ್ ಗಳು ಕಂಪನಿಯ ಹೊಸ ಸ್ಕೇಲೆಬಲ್ ಮಾಡ್ಯುಲರ್ ‘ಆರೋ' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿವೆ. ಈ ಹೊಸ ಪ್ಲಾಟ್‌ಫಾರ್ಮ್ ಅನ್ನು ಮಿಡಲ್‌ವೇಟ್ ವಿಭಾಗಕ್ಕೆ ಗುರುತಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್ ಬಳಸಿಕೊಂಡು ಭವಿಷ್ಯದಲ್ಲಿ ಹೆಚ್ಚಿನ ಮಾದರಿಗಳನ್ನು ಸೇರಿಸಲಾಗುತ್ತದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ತನ್ನ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.15.51 ಲಕ್ಷವಾಗಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಈ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಹಾರ್ಲೆ ಡೇವಿಡ್ಸನ್ ನಿರ್ಮಾಣದ ಅತ್ಯಾಧುನಿಕ ಪ್ರೀಮಿಯಂ ಕ್ರೂಸರ್ ಮಾದರಿಯಾಗಿದೆ. ಸ್ಪೋರ್ಟ್‌ಸ್ಟರ್ ಎಸ್ ಮಾದರಿಯು ಪ್ಯಾನ್ ಅಮೆರಿಕಾ 1250 ಅಡ್ವೆಂಚರ್ ಬೈಕ್‌ನ ನಂತರ ಹೊಸ ರೆವಲ್ಯೂಷನ್ ಮ್ಯಾಕ್ಸ್ 1250 ಪ್ಲಾಟ್‌ಫಾರ್ಮ್ ಆಧರಿಸಿ ಮಾರುಕಟ್ಟೆಗೆ ಬಂದ ಎರಡನೇ ಹಾರ್ಲೆ-ಡೇವಿಡ್ಸನ್ ಮಾದರಿಯಾಗಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯೊಂದಿಗೆ ಸಹಭಾಗಿತ್ವ ಯೋಜನೆ ಆರಂಭಿಸಿದ ನಂತರ ಬಿಡುಗಡೆಯಾದ ಎರಡನೇ ಬೈಕ್ ಮಾದರಿಯಾಗಿರುವ ಸ್ಪೋರ್ಟ್‌ಸ್ಟರ್ ಎಸ್ ಆವೃತ್ತಿಯು ಹೆಚ್ಚಿನ ಟಾರ್ಕ್‌ಗಾಗಿ ಟ್ಯೂನ್ ಮಾಡಲಾದ ಎಂಜಿನ್ ಪಡೆದುಕೊಂಡಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಮುಂಭಾಗದ ಟೈರ್ ಮತ್ತು ಶಾರ್ಟ್ ಫೆಂಡರ್ ಇದಕ್ಕೆ ಕ್ಲಾಸಿಕ್ ಬಾಬರ್ ಲುಕ್ ಅನ್ನು ನೀಡುತ್ತದೆ. ಮುಂಚೂಣಿಯಲ್ಲಿ, ಸ್ಪೋರ್ಟ್‌ಸ್ಟರ್ ಎಸ್ ಕ್ಯಾಪ್ಸುಲ್-ಆಕಾರದ ಹೆಡ್‌ಲೈಟ್ ಅನ್ನು ಪ್ರದರ್ಶಿಸುತ್ತದೆ ಅದು ಸ್ವಲ್ಪ ಚಮತ್ಕಾರಿಯಾಗಿ ಕಾಣುತ್ತದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಇತರ ಸ್ಟೈಲಿಂಗ್ ಮುಖ್ಯಾಂಶಗಳಾದ ಫ್ಲಾಟ್ ಟೈಲ್ ಸೆಕ್ಷನ್, ಒಂದು ಕೌಲ್, ಸಿಂಗಲ್-ಪೀಸ್ ಸ್ಯಾಡಲ್ ಮತ್ತು ಅಪ್‌ಸ್ವೆಪ್ಟ್ ಗೋಲ್ಡನ್-ಕಲರ್ ಎಕ್ಸಾಸ್ಟ್ ಮಫ್ಲರ್‌ಗಳು ಹಾರ್ಲೆ ಡೇವಿಡ್ಸನ್ XR750 ಫ್ಲಾಟ್ ಟ್ರ್ಯಾಕರ್‌ನಿಂದ ಸ್ಫೂರ್ತಿ ಪಡೆದಿದೆ, ಮೆಗ್ನೀಸಿಯಮ್ ಎಂಜಿನ್ ಕವರ್‌ಗಳಲ್ಲಿ ಚಾಕೊಲೇಟ್ ಸ್ಯಾಟಿನ್ ಫಿನಿಶ್ ಅನ್ನು ಬಳಸುವುದರ ಮೂಲಕ ಪವರ್‌ಟ್ರೇನ್ ಅನ್ನು ಹೈಲೈಟ್ ಮಾಡಲಾಗಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಸ್ಟೋನ್ ವಾಶ್ಡ್ ವೈಟ್ ಪರ್ಲ್, ಮಿಡ್‌ನೈಟ್ ಕ್ರಿಮ್ಸನ್ ಮತ್ತು ವಿವಿಡ್ ಬ್ಲ್ಯಾಕ್ ಎಂಬ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ, ಕ್ರೂಸರ್ ಅನ್ನು ಕಸ್ಟಮ್-ಬಿಲ್ಟ್ ಬೈಕ್‌ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಸುಧಾರಿತ ತಂತ್ರಜ್ಙಾನವನ್ನು ಹೊಂದಿರುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಈ ಐಷಾರಾಮಿ ಬೈಕನ್ನು ಭಾರತದಲ್ಲಿ ಸುಮಾರು ರೂ.15 ಲಕ್ಷಗಳಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಬೈಕಿನಲ್ಲಿ 1,1250 ಸಿಸಿ ಎಂಜಿನ ಅನ್ನು ಅಳವಡಿಸಲಾಗಿದೆ. ಇದನ್ನು ಹೊಸ ಸ್ಪೋರ್ಟರ್ ಎಸ್ ನಲ್ಲಿ ವಿಭಿನ್ನವಾಗಿ ಟ್ಯೂನ್ ಮಾಡಲಾಗಿದೆ. ಈ ಹೊಸ ಸ್ಪೋರ್ಟ್‌ಸ್ಟರ್ ಎಸ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್‌ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ. ಈ ಹೊಸ ಪ್ರೀಮಿಯಂ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಬೈಕ್ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Harley Davidson

ಇನ್ನು ಪ್ರಮುಖವಾಗಿ ಈ ಪ್ರೀಮಿಯಂ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬ್ರೆಂಬೊ ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕಾರ್ನೆರಿಂಗ್ ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಂ, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಸಿ-ಎಬಿಎಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ( ಫ್ರಂಟ್-ವೀಲ್ ಲಿಫ್ಟ್ ತಗ್ಗಿಸುವಿಕೆ (ಎಫ್‌ಎಲ್‌ಎಂ) ಯೊಂದಿಗೆ ಟಿಪಿಎಂಎಸ್) ಮತ್ತು ಕಾರ್ನರಿಂಗ್ ಟ್ರ್ಯಾಕ್ಷನ್ ಕಂಟ್ರೋಲ್ (ಸಿ-ಟಿಸಿಎಸ್) ಅನ್ನು ಹೊಂದಿದೆ.

Most Read Articles

Kannada
English summary
Harley davidson teased new motorcycle world premiere january 2022 find here all details
Story first published: Sunday, December 26, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X