Just In
- 3 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 5 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 5 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 5 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಪ್ಯಾಶನ್ ಪ್ರೊ 100 ಮಿಲಿಯನ್ ಎಡಿಷನ್
ವಿಶ್ವದ ಮುಂಚೂಣಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಇತ್ತೀಚೆಗೆ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಮೂಲಕ 10 ಕೋಟಿ(100 ಮಿಲಿಯನ್) ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸಿದ್ದು, ಹೊಸ ಮೈಲಿಗಲ್ಲು ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸುತ್ತಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಾಗುತ್ತಿದೆ.

ಎಕ್ಸ್‌ಟ್ರಿಮ್ 160ಆರ್ ಮಾದರಿಯಲ್ಲಿ ಈಗಾಗಲೇ 100 ಮಿಲಿಯನ್ ಎಡಿಷನ್ ಬಿಡುಗಡೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಶೀಘ್ರದಲ್ಲೇ ಸ್ಪ್ಲೆಂಡರ್ ಪ್ಲಸ್ ಮತ್ತು ಪ್ಯಾಶನ್ ಪ್ರೊ ಮಾದರಿಗಳಲ್ಲೂ ಸ್ಪೆಷಲ್ ಎಡಿಷನ್ ಪರಿಚಯಿಸಲಾಗುತ್ತಿದೆ.

10 ಕೋಟಿ ಬೈಕ್ ಉತ್ಪಾದನಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಬ್ರಾಂಡ್ ಅಂಬಾಸಿಡರ್ ಬಾಲಿವುಡ್ ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಸ್ಪೆಷಲ್ ಎಡಿಷನ್ ಬೈಕ್ ಮಾದರಿಗಳು ಸೆಲೆಬ್ರಿಟಿ ಎಡಿಷನ್‌ಗಳಾಗಿ ಮಾರಾಟವಾಗಲಿದ್ದು, ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾದ ಪೇಟಿಂಗ್ ಆಯ್ಕೆ ಮತ್ತು ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಪಡೆದುಕೊಳ್ಳಲಿವೆ.

ಹೊಸ ಪೇಟಿಂಗ್ ಮತ್ತು ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಾಗಲಿರುವ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಇನ್ನುಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದ್ದು, 1984ರಲ್ಲಿ ಹೀರೋ ಹೋಂಡಾ ಮೋಟಾರ್ ಸೈಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಂಪನಿಯು ಜಪಾನ್ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಜೊತೆಗೂಡಿ ಆಟೋ ಉತ್ಪಾದನಾ ವಲಯದಲ್ಲಿ ಮೊದಲ ಕಾರ್ಯಾಚರಣೆ ಆರಂಭಿಸಿತ್ತು.

2000ನೇ ಇಸವಿ ಹೊತ್ತಿಗೆ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದ ಹೀರೋ-ಹೋಂಡಾ ಕಂಪನಿಯು ಬರೋಬ್ಬರಿ 26 ವರ್ಷಗಳ ನಂತರ 2010ರಲ್ಲಿ ಸಹಭಾಗಿತ್ವ ಯೋಜನೆಯಿಂದ ಹಿಂದೆ ಸರಿದು ಸ್ವತಂತ್ರ ಕಾರ್ಯಾಚರಣೆ ಆರಂಭಿಸಿದ್ದವು.

1985ರಲ್ಲಿ ಹರಿಯಾಣದ ಧರುಹೆರ ಎಂಬಲ್ಲಿ ಮೊದಲ ಬೈಕ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದ ಹೀರೋ-ಹೋಂಡಾ ಕಂಪನಿಯು ಸಹಭಾಗಿತ್ವದ ಯೋಜನೆಯ ಅಡಿಯಲ್ಲಿ ಮೊದಲ ಬೈಕ್ ಮಾದರಿಯಾಗಿ ಸಿಡಿ100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಬೈಕ್ ಉತ್ಪಾದನೆ ಆರಂಭಿಸಿ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡ ಹೀರೋ ಹೋಂಡಾ ಕಂಪನಿಗಳು 1987ರ ಹೊತ್ತಿಗೆ 1 ಲಕ್ಷ ಯುನಿಟ್ ಮಾರಾಟ ಗುರಿ ಸಾಧಿಸಿದವು. ತದನಂತರ ಬೈಕ್ ಉತ್ಪಾದನೆಯಲ್ಲಿ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದ ಸಹಭಾಗಿತ್ವ ಕಂಪನಿಗಳು 2004ರ ಹೊತ್ತಿಗೆ 1 ಕೋಟಿ ಬೈಕ್ ಉತ್ಪಾದನೆ ಗುರಿ ತಲುಪುವ ಮೂಲಕ ವಿಶ್ವದ ಮುಂಚೂಣಿ ಬೈಕ್ ಕಂಪನಿಯಾಗಿ ಹೊರಹೊಮ್ಮಿದವು.

ತದನಂತರ ಬೈಕ್ ಮಾರಾಟದಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾದ ಸಹಭಾಗಿತ್ವ ಕಂಪನಿಗಳಾದ ಹೀರೋ ಹೋಂಡಾ ಕಂಪನಿಗಳು ಕಾರಣಾಂತರಗಳಿಂದ 2010ರಲ್ಲಿ ಸ್ವತಂತ್ರ ಕಾರ್ಯಾಚರಣೆ ಆಂಭಿಸಿದವು. ಸಹಭಾಗಿತ್ವದ ಯೋಜನೆಯಿಂದ ಹಿಂದೆ ಸರಿದ ನಂತರ ಹೀರೋ ಮೋಟೋಕಾರ್ಪ್ ಕಂಪನಿಯಾಗಿ ಸ್ವತಂತ್ರ ಕಾರ್ಯಾಚರಣೆ ಆರಂಭಿಸಿ 2013ರ ಹೊತ್ತಿಗೆ 5 ಕೋಟಿ ಬೈಕ್ ಉತ್ಪಾದನಾ ಗುರಿ ಸಾಧಿಸಿತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2014 ರಿಂದ ಇತ್ತೀಚೆಗೆ ವಿವಿಧ ಹೊಸ ಬೈಕ್ ಮಾದರಿಗಳ ಮೂಲಕ ಕೇವಲ 7 ವರ್ಷಗಳಲ್ಲಿ 5 ಕೋಟಿ ಬೈಕ್‌ಗಳನ್ನು ಉತ್ಪಾದನೆ ಮಾಡಿದೆ. ಒಟ್ಟು 34 ವರ್ಷಗಳಲ್ಲಿ 10 ಕೋಟಿ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ 40 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲ ಹೊಂದಿದ್ದು, ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುವಷ್ಟು ಅತಿ ದೊಡ್ಡ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ.