Just In
- 43 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್
Don't Miss!
- News
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ವ್ಯಕ್ತಿಚಿತ್ರ
- Sports
19 ವರ್ಷದ ಈ ಬ್ಯಾಟ್ಸ್ಮನ್ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು
ದೇಶಿಯ ಮಾರುಕಟ್ಟೆಯಲ್ಲಿ 2021ರ ಫೆಬ್ರವರಿ ತಿಂಗಳ ದಿಚಕ್ರ ವಾಹನಗಳ ಮಾರಾಟದಲ್ಲಿ ಶೇ.6.44 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಕಳೆದ ತಿಂಗಳು 10,14,963 ಯುನಿಟ್‌ಗಳನ್ನು ಮಾರುಕಟ್ಟೆಯಲ್ಲಿ ಮಾರಾಟಗೊಳಿಸಿವೆ.

ಹೀರೋ ಸ್ಪ್ಲೆಂಡರ್
2021ರ ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳ ಪಟ್ಟಿ ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿದೆ. ಕಳೆದ ತಿಂಗಳು ಹೀರೋ ಸ್ಪ್ಲೆಂಡರ್ ಮಾದರಿಯ 2,47,422 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸ್ಪ್ಲೆಂಡರ್ ಮಾದರಿಯ 2,15,196 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹೀರೋ ಸ್ಪ್ಲೆಂಡರ್ ಶೇ.14.98 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಹೋಂಡಾ ಆಕ್ಟಿವಾ
ಹಾಗಯೇ ಹೋಂಡಾ ಆಕ್ಟಿವಾ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿ ಮುಂದುವರೆದಿದೆ. ಪ್ರಸ್ತುತ ತನ್ನ ಆರನೇ ತಲೆಮಾರಿನ ಸ್ಕೂಟರ್ ಅನ್ನು ಮಾರಾಟವನ್ನು ಮಾಡುತ್ತಿದೆ.ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕಳೆದ ತಿಂಗಳಿನಲ್ಲಿ ಹೋಂಡಾ ಆಕ್ಟಿವಾದ 2,0,9389 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆಕ್ಟಿವಾದ 2,22,961 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.6.09 ರಷ್ಟು ಕುಸಿತ ಕಂಡಿದೆ.

ಹೀರೋ ಹೆಚ್ಎಫ್ ಡಿಲಕ್ಸ್
ಈ ಪಟ್ಟಿಯಲ್ಲಿ ಅಗ್ರ-ಮೂರು ಸ್ಥಾನವನ್ನು ಮತ್ತೊಂದು ಹೀರೋ ಕಮ್ಯೂಟರ್ ಬೈಕ್ ಹೆಚ್ಎಫ್ ಡಿಲಕ್ಸ್ ಪಡೆದುಕೊಂಡಿದೆ. ಹೀರೋ ಹೆಚ್ಎಫ್ ಡಿಲಕ್ಸ್ ಹಿಂದಿನ ತಿಂಗಳಲ್ಲಿ 1,26,309 ಯುನಿಟ್‌ಗಳು ಮಾರಾಟವಾಗಿವೆ. ಹೆಚ್ಎಫ್ ಡಿಲಕ್ಸ್ ಪ್ರಸ್ತುತ ಶೇ.12.44 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೋಂಡಾ ಸಿಬಿ ಶೈನ್
ಜಪಾನಿನ ಬ್ರ್ಯಾಂಡ್‌ನ ಪ್ರೀಮಿಯಂ ಕಮ್ಯೂಟರ್ ಬೈಕ್ ಹೋಂಡಾ ಸಿಬಿ ಶೈನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳಿನಲ್ಲಿ ಸಿಬಿ ಶೈನ್ ಮಾದರಿಯ 1,15,970 ಯುನಿಟ್‌ಗಳು ಮಾರಾಟವಾಗಿವೆ.

ಬಜಾಜ್ ಪಲ್ಸರ್
ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಬಜಾಜ್ ಪಲ್ಸರ್ ಸರಣಿಯು ಆಕ್ರಮಿಸಿಕೊಂಡಿದೆ. ಬಜಜ್ ಪಲ್ಸರ್ 81,454 ಯುನಿಟ್‌ಗಳು ಮಾರಾಟವಾಗಿವೆ. ಪಲ್ಸರ್ ಸರಣಿಯು ಪಲ್ಸರ್ 125 ದಿಂದ 220ಎಫ್ ವರೆಗೆ ಲಭ್ಯವಿದೆ. ಸರಣಿಯ ಪ್ರಮುಖ ಮಾದರಿಗಳು 200ಎನ್ಎಸ್ ಮತ್ತು 200ಆರ್‍ಎಸ್ ಮಾದರಿಗಳಾಗಿವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಟಿವಿಎಸ್ ಜೂಪಿಟರ್
ಇನ್ನು ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದಿರುವ ಟಿವಿಎಸ್ ಜೂಪಿಟರ್ ಮಾರಾಟದಲ್ಲಿ ಶೇ.66 ರಷ್ಟು ಬೆಳವಣಿಗೆಯನ್ನು ಕಾಣಿಸಿಕೊಂಡಿದೆ. ಕಳೆದ ತಿಂಗಳು ಟಿವಿಎಸ್ ಜೂಪಿಟರ್ ಮಾದರಿಯ 20,749 ಯುನಿಟ್‌ಗಳು ಮಾರಾಟವಾಗಿವೆ.

ಟಿವಿಎಸ್ ಎಕ್ಸ್‌ಎಲ್ ಸೂಪರ್
ಟಿವಿಎಸ್ ಮೋಟಾರ್ ಎಕ್ಸ್‌ಎಲ್ ಸೂಪರ್ ಮಾದರಿಯ 51,445 ಯುನಿಟ್‌ಗಳು ಮಾರಾಟವಾಗಿ ಈ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಟಿವಿಎಸ್ ಕ್ಸ್‌ಎಲ್ ಸೂಪರ್ ಮಾದರಿಯ ಮಾರಾಟದಲ್ಲಿ ಶೇ.7.81 ರಷ್ಟು ಕುಸಿತವಾಗಿದೆ.

ಸುಜುಕಿ ಆಕ್ಸೆಸ್
ಕಳೆದ ತಿಂಗಳ ಸುಜುಕಿ ಆಕ್ಸೆಸ್ 48,496 ಯುನಿಟ್ ಗಳು ಮಾರಾಟವಾಗಿವೆ, ಆದರೆ ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆಕ್ಸೆಸ್ 50,103 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.3.21 ರಷ್ಟು ಕುಸಿತವಾಗಿದೆ.

ಬಜಾಜ್ ಪ್ಲಾಟಿನಾ
ಈ ಜನಪ್ರಿಯ ಬಜಾಜ್ ಪ್ಲಾಟಿನಾ ಬೈಕ್ ಕಳೆದ ತಿಂಗಳ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಬಜಾಜ್ ಪ್ಲಾಟಿನಾ ಮಾದರಿಯ 46,264 ಯುನಿಟ್‌ಗಳು ಮಾರಾಟವಾಗಿವೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ಇನ್ನು ಈ ಪಟ್ಟಿಯಲ್ಲಿ ಟಾಪ್-10 ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಪಡೆದುಕೊಂಡಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಯ 36,025 ಯುನಿಟ್‌ಗಳು ಮಾರಾಟವಾಗಿವೆ.