Just In
- 9 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 10 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 11 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 11 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- Sports
ಆರ್ಸಿಬಿ ಪರ ನಿರ್ಣಾಯಕ ಪಾತ್ರವಹಿಸಲು ಕಾರಣವಾದ ಅಂಶವನ್ನು ವಿವರಿಸಿದ ಗ್ಲೆನ್ ಮ್ಯಾಕ್ಸ್ವೆಲ್
- News
ಬೆಂಗಳೂರಲ್ಲಿ ರೆಮಿಡಿಸ್ವಿರ್ ಔಷಧಿ ಪೂರೈಕೆಗೆ SAST ಏಜೆನ್ಸಿ ನಿಯೋಜನೆ
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೈಬ್ರಿಡ್ ಸ್ಕೂಟರ್ ಆಗಿ ಮಾಡಿಫೈಗೊಂಡ ಹೋಂಡಾ ಆಕ್ಟಿವಾ
ಹೋಂಡಾ ಆಕ್ಟಿವಾ ಸ್ಕೂಟರ್ ಭಾರತೀಯರ ನೆಚ್ಚಿನ ಸ್ಕೂಟರ್'ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಅನ್ನು ಮಹಾರಾಷ್ಟ್ರದ ಕಂಪನಿಯೊಂದು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಹೈಬ್ರಿಡ್ ವಾಹನವಾಗಿ ಪರಿವರ್ತಿಸಿದೆ.

ಕ್ರಿಯೇಟಿವ್ ಸೈನ್ಸ್ ಎಂಬ ಯೂಟ್ಯೂಬ್ ಚಾನೆಲ್ ಈ ಹೈಬ್ರಿಡ್ ಸ್ಕೂಟರಿಗೆ ಸಂಬಂಧಿಸಿದ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ಹೈಬ್ರಿಡ್ ಸ್ಕೂಟರ್ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಎರಡರಿಂದಲೂ ಚಲಿಸುತ್ತದೆ. ವಾಹನ ತಯಾರಕ ಕಂಪನಿಗಳು ಈ ಸಾಮರ್ಥ್ಯವನ್ನು ಟಾಪ್ ಎಂಡ್ ಕಾರುಗಳಲ್ಲಿ ಮಾತ್ರ ನೀಡುತ್ತಿವೆ.

ಇದೇ ಮೊದಲ ಬಾರಿಗೆ ಈ ಸಾಮರ್ಥ್ಯವನ್ನು ಸ್ಕೂಟರ್'ನಲ್ಲಿ ನೀಡಲಾಗಿದೆ. ಇದನ್ನು ಖಾಸಗಿ ಕಂಪನಿಯೊಂದು ನೀಡಿರುವುದು ಗಮನಾರ್ಹ. ಆಕ್ಟಿವಾ 5 ಜಿ ಮಾದರಿಯನ್ನು ಹೈಬ್ರಿಡ್ ವಾಹನವನ್ನಾಗಿ ಮಾಡಿಫೈ ಮಾಡಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವೀಡಿಯೊದಲ್ಲಿ ಹೈಬ್ರಿಡ್ ವಾಹನ ತಯಾರಿಸಲು ಅಗತ್ಯವಿರುವ ಎಲ್ಲಾ ಅಂಶಗಳನ್ನು ಸಿದ್ಧಪಡಿಸಿಕೊಂಡಿರುವುದನ್ನು ಕಾಣಬಹುದು. ಆಕ್ಟಿವಾ ಸ್ಕೂಟರ್ ಅನ್ನು ಮಾಡಿಫೈ ಮಾಡುತ್ತಿರುವವರು ತಮ್ಮ ಜೊತೆಯಲ್ಲಿ ಸ್ವಿಚ್, ವ್ಹೀಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್, ಮೆಟಲ್ ಪ್ಲೇಟ್, ಟೂ ವೇ ಆಕ್ಸಲರೇಟರ್ ಕೇಬಲ್ ಹೊಂದಿರುವುದನ್ನು ಕಾಣಬಹುದು.

ನಂತರ ಆಕ್ಟಿವಾ ಸ್ಕೂಟರ್ ಅನ್ನು ಹೈಬ್ರಿಡ್ ವಾಹನವನ್ನಾಗಿ ಬದಲಿಸುವ ಕೆಲಸವನ್ನು ಆರಂಭಿಸಲಾಗಿದೆ. ಸ್ಕೂಟರಿನಲ್ಲಿರುವ ಎಲ್ಲಾ ಪ್ಯಾನೆಲ್'ಗಳನ್ನು ತೆಗೆದುಹಾಕಲಾಗಿದೆ. ನಂತರ ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ಎಂಜಿನ್ ಅನ್ನು ಕಂಟ್ರೋಲ್ ಮಾಡುವ ಎರಡು ಟರ್ಮಿನಲ್ ಆಕ್ಸಲರೇಟರ್ ಕೇಬಲ್'ಗಳನ್ನು ತೆಗೆದು ಹಾಕಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇದರ ಒಂದು ತುದಿಯನ್ನು ಪೆಟ್ರೋಲ್ ಎಂಜಿನ್‌ಗೆ ಹಾಗೂ ಮತ್ತೊಂದು ತುದಿಯನ್ನು ಎಲೆಕ್ಟ್ರಿಕ್ ಮೋಟರ್‌ಗೆ ಕನೆಕ್ಟ್ ಮಾಡಲಾಗಿದೆ. ಎಲೆಕ್ಟ್ರಿಕ್ ಮೋಟರ್ ಬಳಕೆಗಾಗಿ ಪ್ರಮುಖ ಭಾಗದಲ್ಲಿ ಸ್ವಿಚ್ ಅಳವಡಿಸಲಾಗಿದೆ.

ಇದಕ್ಕಾಗಿ ಕೀ ಮೇಲೆ ಕಂಟ್ರೋಲ್ ನೀಡಲಾಗಿದೆ. ಇದರಿಂದಾಗಿ ಕೀಯನ್ನು ಹಾಕದಿದ್ದರೆ ಸ್ವಿಚ್ ಆನ್ ಮಾಡಲು ಸಾಧ್ಯವಿಲ್ಲ. ಕೀಯನ್ನು ಆನ್ ಮಾಡಿದಾಗ ವ್ಹೀಲ್ ಮೇಲೆ ಜೋಡಿಸಲಾದ ಎಲೆಕ್ಟ್ರಿಕ್ ಮೋಟರ್‌ಗೆ ನೇರವಾಗಿ ಪವರ್ ಬರುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದರಿಂದ ಸ್ಕೂಟರ್ ಚಲಾಯಿಸಲು ಸಹಾಯವಾಗುತ್ತದೆ. ವ್ಹೀಲ್ ಆಪರೇಟ್ ಮಾಡಲು ಎಲೆಕ್ಟ್ರಿಕ್ ಮೋಟರ್ ಅನ್ನು ಮೆಟಲ್ ಸಿಲಿಂಡರ್ ಸಿಸ್ಟಂನಲ್ಲಿ ಸ್ಕೂಟರ್‌ನ ಹಿಂದಿನ ವ್ಹೀಲ್ ಮೇಲೆ ನೇರವಾಗಿ ಜೋಡಿಸಲಾಗಿದೆ.

ಇದಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸಬಲ್ಲ ಬ್ಯಾಟರಿಯನ್ನು ಸ್ಕೂಟರ್‌ನ ಸ್ಟೋರೆಜ್ ಸ್ಪೇಸ್ ನಲ್ಲಿ ಇರಿಸಲಾಗಿದೆ. ಅದನ್ನು ಆನ್, ಆಫ್ ಮಾಡಲು ಸ್ವಿಚ್ ನೀಡಲಾಗಿದೆ. ಹಿಂದಿನ ವ್ಹೀಲ್'ನಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟರ್ ಎಕ್ಸಾಸ್ಟ್ ಸಿಸ್ಟಂಗೆ ಅಡ್ಡಿಯಾಗುವುದಿಲ್ಲ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದಕ್ಕಾಗಿ ತೆಳುವಾದ ಎಲೆಕ್ಟ್ರಿಕ್ ಮೋಟರ್ ಬಳಸಲಾಗುತ್ತದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಬಗ್ಗೆ ಮಾಹಿತಿ ಲಭ್ಯವಿಲ್ಲವಾದರೂ ಪರೀಕ್ಷಾ ಚಾಲನೆಯಲ್ಲಿ ಎಲೆಕ್ಟ್ರಿಕ್ ಮೋಟರ್ ಗಂಟೆಗೆ ಸುಮಾರು 50 ಕಿ.ಮೀ ವೇಗದಲ್ಲಿ ಚಲಿಸುತ್ತಿರುವುದು ಕಂಡು ಬಂದಿದೆ.
ಒರಟು ರಸ್ತೆಯನ್ನು ಸಹ ಸುಲಭವಾಗಿ ದಾಟಬಹುದು ಎಂದು ಮಾಡಿಫಿಕೇಶನ್ ತಂಡವು ಈ ವೀಡಿಯೊದಲ್ಲಿ ತೋರಿಸಿದೆ. ವಾಹನಗಳನ್ನು ಹೈಬ್ರಿಡ್ ಮಾನದಂಡಗಳಿಗೆ ತಕ್ಕಂತೆ ಅಪ್‌ಗ್ರೇಡ್ ಮಾಡುವ ಮೂಲಕ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಬಹುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರ ಜೊತೆಗೆ ವಾಯುಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು. ಹೈಬ್ರಿಡ್ ಆಗಿ ಮಾಡಿಫೈಗೊಂಡಿರುವ ಆಕ್ಟಿವಾ ಸ್ಕೂಟರ್ ವಾಹನ ಪ್ರಿಯರ ಗಮನವನ್ನುತನ್ನತ್ತ ಸೆಳೆಯುತ್ತಿದೆ. ಈ ರೀತಿಯ ಹೈಬ್ರಿಡ್ ವಾಹನಗಳು ಶೀಘ್ರದಲ್ಲೇ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ನಿರೀಕ್ಷೆಗಳಿವೆ.