ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ಬೀಟ್ ಮತ್ತು ಬೀಟ್ ಸ್ಟ್ರೀಟ್ ಸ್ಕೂಟರ್‌ಗಳನ್ನು ನವೀಕರಿಸಿ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಬೀಟ್ ಮತ್ತು ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು ಕಾಸ್ಮೆಟಿ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಹೊಸ ಹೋಂಡಾ ಬೀಟ್ ಮತ್ತು ಬೀಟ್ ಸ್ಟ್ರೀಟ್ ಸ್ಕೂಟರ್‌ಗಳ ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಹೋಂಡಾ ಬೀಟ್ ಸ್ಕೂಟರ್ ಡಿಲಕ್ಸ್, ಸಿಬಿಎಸ್-ಐಎಸ್ಎಸ್ ಮತ್ತು ಸಿಬಿಎಸ್ ಸೀರಿಸ್ ಎಂಬ ಮೂರು ರೂಪಾಂತರಗಳಲ್ಲಿದ್ದರೆ, ಬೀಟ್ ಸ್ಟ್ರೀಟ್ ಸ್ಕೂಟರ್ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಹೊಸ ಕಾಸ್ಮೆಟಿಕ್ ಅಪ್ಡೇಟ್ ಗಳೊಂದಿಗೆ ಈ ಸ್ಕೂಟರ್‌ಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಹೋಂಡಾ ಬೀಟ್ ಸಿಬಿಎಸ್ ಸೀರಿಸ್ ರೂಪಾಂತರವು ಟೆಕ್ನೋ ಬ್ಲೂ ಬ್ಲ್ಯಾಕ್ ಮತ್ತು ಡ್ಯಾನ್ಸ್ ವೈಟ್ ಬ್ಲ್ಯಾಕ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ. ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಹೊಸ ಗ್ರಾಫಿಕ್ಸ್‌ ಅನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಹೋಂಡಾ ಸಿಬಿಎಸ್-ಐಎಸ್ಎಸ್ ಹೊಸ ಗ್ಯಾರೇಜ್ ಮ್ಯಾಟ್ ಬ್ಲಾಕ್ ಮತ್ತು ಎಲೆಕ್ಟ್ರೋ ಮ್ಯಾಟ್ ಬ್ಲೂ ಎಂಬ ಎರಡು ಬಣ್ಣಗಳನ್ನು ಪಡೆಯುತ್ತದೆ, ಇನ್ನು ಮೂರನೆಯ ರೂಪಾಂತರವಾದ ಡಿಲಕ್ಸ್ ಡಿಲಕ್ಸ್ ಬ್ರೌನ್ ಮತ್ತು ಡಿಲಕ್ಸ್ ಬ್ಲೂ ಎಂಬ ಹೊಸ ಎರಡು ಬಣ್ಣಗಳ ಆಯ್ಕೆಗಳನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಹೊಸ ಬಣ್ಣಗಳ ಆಯ್ಕೆಯೊಂದಿಗೆ 3ಡಿ ಲೋಗೊವನ್ನು ನೀಡಲಾಗುತ್ತದೆ. ಇನ್ನು ಹೋಂಡಾ ಬೀಟ್ ಸ್ಟ್ರೀಟ್ ಸ್ಕೂಟರ್ ಸ್ಟ್ರೀಟ್ ಬ್ಲ್ಯಾಕ್ ಮತ್ತು ಸ್ಟ್ರೀಟ್ ಸಿಲ್ವರ್ ಎಂಬ ಎರಡೂ ಬಣ್ಣಗಳ ಆಯ್ಕೆಯನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಹೋಂಡಾ ಬೀಟ್ ಮತ್ತು ಬೀಟ್ ಸ್ಟ್ರೀಟ್ ಸ್ಕೂಟರ್‌ಗಳಲ್ಲಿ 110 ಸಿಸಿ ಪಿಜಿಎಂ-ಎಫ್‌ಐ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 8.85 ಬಿಹೆಚ್‌ಪಿ ಮತ್ತು 5,500 ಆರ್‌ಪಿಎಂನಲ್ಲಿ 9.3 ಎನ್ಎಂ ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಮತ್ತು ಮಾಹಿತಿಯನ್ನು ಹೋಂಡಾ ಕಂಪನಿಯು ಬಹಿರಂಗಪಡಿಸಿಲ್ಲ. ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಆಗಿರಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು ಎನ್‌ಎಕ್ಸ್200 ಎಂಬ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದ್ದರು. ಹೊಸ ಹೋಂಡಾ ಎನ್‌ಎಕ್ಸ್200 ಬೈಕಿನ ವಿನ್ಯಾಸ ಮತ್ತು ಸ್ಟೈಲಿಂಗ್ ಅನ್ನು ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಮತ್ತು ಸಿಬಿಎಫ್-190 ಟಿಆರ್ ಮಾದರಿಗಳಂತೆ ಇರಬಹುದು. ಈ ಹೊಂಡಾ ಅಡ್ವೆಂಚರ್ ಬೈಕ್ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ ಹೋಂಡಾ ಬೀಟ್, ಬೀಟ್ ಸ್ಟ್ರೀಟ್ ಸ್ಕೂಟರ್‌ಗಳು

ಇನ್ನು ಹೊಸ ಹೋಂಡಾ ಬೀಟ್ ಮತ್ತು ಬೀಟ್ ಸ್ಟ್ರೀಟ್ ಸ್ಕೂಟರ್‌ಗಳನ್ನು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಮಾತ್ರ ನವೀಕರಿಸಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್‌ಗಳನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳುಸುವ ಸಾಧ್ಯತೆಗಳಿಲ್ಲ,

Most Read Articles

Kannada
English summary
Honda Beat and Beat Street New Updated. Read In Kannada.
Story first published: Monday, July 19, 2021, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X