ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಶೀಘ್ರದಲ್ಲೇ ನವೀಕರಿಸಿದ ಚೀಫ್ ಸೀರೀಸ್ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿ ತಿಳಿಸಿದೆ. ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್‌ಗಳ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.20,75,922ಗಳಾಗಿದೆ.

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಕಂಪನಿಯು ತನ್ನ ಅಧಿಕೃತ ಡೀಲರ್'ಗಳ ಮೂಲಕ ಈ ಬೈಕುಗಳ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಚೀಫ್ ಬೈಕುಗಳನ್ನು ಖರೀದಿಸ ಬಯಸುವವರು ರೂ.3 ಲಕ್ಷ ಪಾವತಿಸಿ ಈ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಕಂಪನಿಯು 2021ರ ಮಧ್ಯ ಭಾಗದಲ್ಲಿ ಚೀಫ್ ಸರಣಿಯ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಚೀಫ್ ಸರಣಿಯಲ್ಲಿ ಚೀಫ್ ಡಾರ್ಕ್ ಹಾರ್ಸ್, ಚೀಫ್ ಬಾಬರ್ ಡಾರ್ಕ್ ಹಾರ್ಸ್ ಹಾಗೂ ಸೂಪರ್ ಚೀಫ್ ಲಿಮಿಟೆಡ್ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿ ತಿಳಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಹೊಸ ಬೈಕುಗಳಲ್ಲಿ ವಿಭಿನ್ನ ವಿನ್ಯಾಸ, ಫೀಚರ್'ಗಳ ಜೊತೆಗೆ ಹಲವಾರು ತಾಂತ್ರಿಕ ಅಪ್'ಡೇಟ್'ಗಳನ್ನು ನೀಡಲಾಗುತ್ತದೆ. ಹೊಸ ಬೈಕುಗಳ ಜೊತೆಗೆ ಒರಿಜಿನಲ್ ಬಿಡಿಭಾಗಗಳನ್ನು ಸಹ ನಿಡುವುದರಿಂದ ಗ್ರಾಹಕರು ವಿಭಿನ್ನ ಸವಾರಿ ಅನುಭವವನ್ನು ಪಡೆಯಬಹುದು.

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಹೊಸ ಇಂಡಿಯನ್ ಚೀಫ್ ಸರಣಿ ಬೈಕುಗಳನ್ನು ಪರಿಚಯಿಸಿದ ನಂತರ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ಲಲಿತ್ ಶರ್ಮಾ, ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿಯು 100 ವರ್ಷಗಳ ಇತಿಹಾಸವನ್ನು ಪೂರ್ಣಗೊಳಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಈ ಹಿನ್ನೆಲೆಯಲ್ಲಿ ಕಂಪನಿಯು ಚೀಫ್ ಸರಣಿಯ ಅಪ್ ಡೇಟೆಡ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ಹೇಳಿದರು. ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್ 64 ಇಂಚಿನ ಶಾರ್ಟ್ ವ್ಹೀಲ್ ಬೇಸ್ ಹಾಗೂ 26 ಇಂಚಿನ ಎತ್ತರದ ಸೀಟ್ ಅನ್ನು ಹೊಂದಿದೆ.

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಚೀಫ್ ಸರಣಿಯಲ್ಲಿರುವ ಬೈಕ್ 46 ಎಂಎಂ ಫ್ರಂಟ್ ಅಡ್ಜಸ್ಟಬಲ್ ಫೋರ್ಕ್ ಹೊಂದಿದೆ. ಈ ಬೈಕಿನಲ್ಲಿ 28.5 ಡಿಗ್ರಿ ಲೀನ್ ಆಂಗಲ್ ನೀಡಲಾಗಿದೆ. ಸವಾರನ ಅನುಕೂಲಕ್ಕಾಗಿ ಈ ಬೈಕಿನಲ್ಲಿ ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ನೀಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಹೊಸ ಇಂಡಿಯನ್ ಚೀಫ್ ಬೈಕ್, ಹಳೆಯ ಮಾದರಿಯಲ್ಲಿರುವಂತಹ ಸಾಂಪ್ರದಾಯಿಕ ವಿ-ಟ್ವಿನ್ ಎಂಜಿನ್‌ ಹೊಂದಿದೆ. ಈ ಬೈಕ್ ಪವರ್ ಉತ್ಪಾದನೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕಂಪನಿಯ ಬೈಕುಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಈ ಐಕಾನಿಕ್ ಬೈಕ್ ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್'ನಂತಹ ಫೀಚರ್'ಗಳನ್ನು ಹೊಂದಿರಲಿದೆ. ಭಾರತದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿಗೆ ಇಂಗ್ಲೆಂಡ್ ಮೂಲದ ಟ್ರಯಂಫ್ ಕಂಪನಿಯು ನೇರ ಸ್ಪರ್ಧಿಯಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಚೀಫ್ ಸೀರೀಸ್ ಬೈಕ್‌ಗಳ ಬುಕ್ಕಿಂಗ್ ಆರಂಭಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಚೀಫ್‌ ಸರಣಿಯ ಬೈಕುಗಳು ಬಿಡುಗಡೆಯಾದ ನಂತರ ಅಮೆರಿಕಾ ಮೂಲದ ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವಇತರ ಕ್ರೂಸರ್ ಬೈಕ್ ಕಂಪನಿಗಳಿಗೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Indian Motorcycle starts bookings for chief lineup bikes. Read in Kannada.
Story first published: Wednesday, March 10, 2021, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X