ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ 2020ರ ನವೆಂಬರ್‌ನಲ್ಲಿ ವರ್ಲ್ಡ್ ಪ್ರೀಮಿಯರ್‌ನಲ್ಲಿ ತನ್ನ ಹೊಸ ಸೂಪರ್‌ಸ್ಪೋರ್ಟ್ 950 ಬೈಕನ್ನು ಅನಾವರಣಗೊಳಿಸಿತ್ತು. ಈ ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಡುಕಾಟಿ ಕಂಪನಿಯು ಬೊಲೊಗ್ನಾದಲ್ಲಿರುವ ತಮ್ಮ ಘಟಕದಲ್ಲಿ ಈ ಹೊಸ ಸೂಪರ್‌ಸ್ಪೋರ್ಟ್ 950 ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಲಿದೆ. 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಎಸ್ ಬೈಕ್ ಪ್ರಮುಖ ನವೀಕರಣಗಳನ್ನು ಪಡೆಯುತ್ತದೆ. ಅದರ ಸ್ಟೈಲಿಂಗ್‌ನಿಂದ ಆರಂಭಗೊಂಡು, ಸೂಪರ್‌ಸ್ಪೋರ್ಟ್ 950 ಈಗ ಪಾನಿಗಲೆ-ಪ್ರೇರಿತ ಅಗ್ರೇಸಿವ್ ಫಾಸಿಕ, ಸ್ಕೂಪ್‌ಗಳು ಮತ್ತು ಫುಲ್-ಎಲ್ಇಡಿ ಲೈಟಿಂಗ್ ಅನ್ನು ಹೊಂದಿರುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ರಿಫ್ರೆಶ್ ವಿನ್ಯಾಸದ ಹೊರತಾಗಿ, ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕಿಗೆ ಹೊಸ ಎಲೆಕ್ಟ್ರಾನಿಕ್ ಸಾಧನಗಳನ್ನು ಸೇರಿಸಿದೆ. ಇದು ಸಿಕ್ಸ್-ಆಕ್ಸಿಸ್ ಐಎಂಯು ಅನ್ನು ಪಡೆಯುತ್ತದೆ, ಇನ್ನು ನೇರ, ಪಿಚ್ ಮತ್ತು ಯಾವ್ ಮೂಲಕ ಹೊಸ ಎಬಿಎಸ್, ವ್ಹೀಲಿ ಮತ್ತು ಟ್ಯಾಕ್ಷನ್ ಕಂಟ್ರೋಲ್ ಅನ್ನು ನಿಯಂತ್ರಿಸುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇದಲ್ಲದೆ, ಹೊಸ ಸೂಪರ್‌ಸ್ಪೋರ್ಟ್ 950 ಬೈಕಿನಲ್ಲಿ ಮೂರು ರೈಡ್ ಮೋಡ್‌ಗಳನ್ನು ಹೊಂದಿರುತ್ತದೆ. ಇನ್ನು ಇದರಲ್ಲಿ ಹೊಸ 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 937 ಸಿಸಿ, ಟೆಸ್ಟಾಸ್ಟ್ರೆಟಾ ಎಲ್-ಟ್ವಿನ್ ಎಂಜಿನ್‌ ಅನ್ನು ಹೊಂದಿರುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಈ ಎಂಜಿನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವಾಗ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವಾಗ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇನ್ನು ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಓಹ್ಲಿನ್ಸ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ ಇದರಲ್ಲಿ ಬದಲಾವಣೆಗಳನ್ನು ಮಾಡಾಲಾಗಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇನ್ನು ಹೊಸ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್ ಸ್ವಾಂಕಿ ವೈಟ್ ಮತ್ತು ರೆಡ್ ಎಂಬ ಬಣ್ನಗಳ ಆಯ್ಕೆಯಲ್ಲಿ ಲಭ್ತ್ಯವಿರಲಿದೆ. ಈ ಸೂಪರ್‌ಸ್ಪೋರ್ಟ್ 950 ಬೈಕ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್

ಇನ್ನು ಭಾರತೀಯ ಮಾರುಕಟ್ಟೆಗೆ ಈ ವರ್ಷದ ಅಂತ್ಯದಲ್ಲಿ ಐಷಾರಾಮಿ 2021ರ ಡುಕಾಟಿ ಸೂಪರ್‌ಸ್ಪೋರ್ಟ್ 950 ಬೈಕ್ ಲಗ್ಗೆ ಇಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಡುಕಾಟಿ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸೂಪರ್‌ಸ್ಪೋರ್ಟ್ ಬೈಕುಗಳಲ್ಲಿ ಒಂದಾಗಿದೆ.

Most Read Articles

Kannada
Read more on ಡುಕಾಟಿ ducati
English summary
2021 Ducati SuperSport 950 Production Begins. Read In Kananda.
Story first published: Monday, January 25, 2021, 17:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X