ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಆಸ್ಟ್ರಿಯಾ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಎಂಬ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಲಿಮಿಟೆಡ್ ಎಡಿಷನ್ ಅನ್ನು ಕೇವಲ 80 ಯುನಿಟ್ ಗಳಿಗೆ ಸೀಮಿತವಾಗಿ ಉತ್ಪಾದಿಸಲಾಗುತ್ತದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಕೆಟಿಎಂ ಕೆಲವು ಸಮರ್ಥ ಆಫ್-ರೋಡ್ ಮತ್ತು ಅಡ್ವೆಂಚರ ಬೈಕುಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದೀಗ ಒಂದು ಹೆಚ್ಚೆ ಮುಂದೆ ಹೋಗಿ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಎಂಬ ರ್‍ಯಾಲಿ ಬೈಕನ್ನು ಅಭಿವೃದ್ಧಿ ಪಡಿಸಿದ್ದಾರೆ. ಡಾಕರ್ ನಂತಹ ರ್‍ಯಾಲಿಯಲ್ಲಿ ಭಾಗವಹಿಸಲು ಬಯಸುವ ಜನರಿಗಾಗಿ 2022ರ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಈ ರ್‍ಯಾಲಿ ಬೈಕನ್ನು ಅನ್ನು ಅಭಿವೃದ್ಧಿಪಡಿಸಲು ಆಸ್ಟ್ರಿಯನ್ ಬ್ರ್ಯಾಂಡ್ ರೆಡ್ ಬುಲ್ ರೇಸಿಂಗ್ ತಂಡದಿಂದ ಸಹಾಯವನ್ನು ಪಡೆದುಕೊಂಡಿದೆ. ರ್‍ಯಾಲಿ ವರ್ಲ್ಡ್ ಚಾಂಪಿಯನ್‌ಗಳಾದ ಟೋಬಿ ಪ್ರೈಸ್, ಮಥಿಯಾಸ್ ವಾಕ್ನರ್ ಮತ್ತು ಸ್ಯಾಮ್ ಸುಂದರ್‌ಲ್ಯಾಂಡ್ ಕೂಡ ಈ ರ್‍ಯಾಲಿ ಬೈಕಿನ ಉತ್ಪಾದನೆಗೆ ನೆರವಾಗುವ ಸಲಹೆಗಳನ್ನು ನೀಡಿದ್ದಾರೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಬೈಕಿನಲ್ಲಿ 450 ಸಿಸಿ ಎಸ್‌ಒಹೆಚ್‌ಸಿ ಸಿಂಗಲ್-ಶಾಫ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಇದು ವಿಶ್ವದ ಸಾರ್ವಕಾಲಿಕ ಅತ್ಯಂತ ಸವಾಲಿನ ರ್‍ಯಾಲಿಯಲ್ಲಿ ಕಂಪನಿಯ ಗೆಲುವಿನ ಅನುಭವದಿಂದ ಅಭಿವೃದ್ಧಿಪಡಿಸಲಾಗಿದೆ. ಈ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಹೈಟೆಕ್ ಕೋನ್ ವಾಲ್ವ್ ತಂತ್ರಜ್ಞಾನದೊಂದಿಗೆ ಎಕ್ಸ್‌ಎಸಿಟಿ ಪ್ರೊ ಕಾರ್ಟ್ರಿಡ್ಜ್ ಫೋರ್ಕ್‌ಗಳೊಂದಿಗೆ ಟಾ-ಸ್ಪೆಕ್ ಡಬ್ಲ್ಯೂಪಿ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಈ ಮಾದರಿಯು ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ಯಂತ್ರಗಳಲ್ಲಿ ಕಂಡುಬರುವ ಪ್ಯಾಂಕ್ಎಲ್ ರೇಸಿಂಗ್ ಸಿಸ್ಟಮ್ಸ್ ಗೇರ್‌ಬಾಕ್ಸ್ ಅನ್ನು ಉಳಿಸಿಕೊಂಡಿದೆ. ಇನ್ನು ಈ ರ್‍ಯಾಲಿ ಬೈಕ್ ಹಲವಾರು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ತನ್ನ 2021ರ ಆರ್‍‍ಸಿ 390 ಸಂಪೂರ್ಣ ಫೇರ್ಡ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಆಯ್ದ ಕೆಟಿಎಂ ಡೀಲರುಗಳು ನ್ಯೂ ಜನರೇಷನ್ ಕೆಟಿಎಂ ಆರ್‍‍ಸಿ 390 ಬೈಕಿನ ಖರೀದಿಗಾಗಿ ಅನಧಿಕೃತ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಕೆಟಿಎಂ ಆರ್‍‍ಸಿ 390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬೇಸ್ಡ್ ಬೈಕ್ ಆಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‍‍ಸಿ 390 ಬೈಕ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಬಿಡುಗಡೆಯಾಗಲಿದೆ.

ಅನಾವರಣವಾಯ್ತು ಕೆಟಿಎಂ 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಲಿಮಿಟೆಡ್ ಎಡಿಷನ್

ಇನ್ನು ಕೆಟಿಎಂ ಕಂಪನಿಯು 450 ರ್‍ಯಾಲಿ ಫ್ಯಾಕ್ಟರಿ ರೆಪ್ಲಿಕಾ ಬೈಕಿನ ಬೆಲೆಯನ್ನು 25,900 ಯುರೋಗಳನ್ನು ನಿಗದಿಪಡಿಸಿದೆ. ಇದು ಭಾರತೀಯ ಕರೆನ್ಸಿ ಪ್ರಕಾರ ರೂ.23 ಲಕ್ಷಗಳಾಗಿದೆ. ಇನ್ನು ಈ ರ್‍ಯಾಲಿ ಬೈಕ್ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಮಾರಾಟಕ್ಕೆ ಬರಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM Unveils Limited-edition 450 Rally Factory Replica. Read In Kannada.
Story first published: Thursday, June 24, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X