ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟ್ರಯಂಫ್ ರಾಕೆಟ್ 3 ಬ್ಲ್ಯಾಕ್ ಬೈಕ್‌ಗಳು
ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ಜಾಗತಿಕವಾಗಿ ಲಿಮಿಟೆಡ್ ಎಡಿಷನ್ ಆದ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಮಾದರಿಗಳನ್ನು ಪರಿಚಯಿಸಿತು. ಇವುಗಳನ್ನು ವಿಶ್ವಾದ್ಯಂತ ಒಟ್ಟು 1,000 ಯುನಿಟ್‌ಗಳನ್ನು ತಯಾರಿಸಲಾಗುವುದು ಮತ್ತು ಇವುಗಳಲ್ಲಿ ಕೆಲವು ಭಾರತಕ್ಕೂ ರವಾನಿಸಲಿದೆ.

ವರದಿಗಳ ಪ್ರಕಾರ ಭಾರತಕ್ಕೆ ಒಟ್ಟು 15 ಯುನಿಟ್‌ಗಳು ಬರಲಿದೆ. ದೇಶಾದ್ಯಂತ ಟ್ರಯಂಫ್ ಡೀಲರುಗಳಲ್ಲಿ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಮಾದರಿಗಳಿಗಾಗಿ ಅನಧಿಕೃತ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿವೆ. ಆದರೆ ಭಾರತಕ್ಕೆ ಕೇವಲ 15 ಯುನಿಟ್‌ಗಳು ಮಾತ್ರ ಬರಲಿದೆ. ಇದರಿಂದ ಈ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಖರೀದಿಸಲು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ.

ಹೊಸ ಟ್ರಯಂಫ್ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಬೈಕ್‌ಗಳ ವಿತರಣೆಯನ್ನು ದೇಶಿಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಲ್ಲಿ ಪ್ರಾರಂಭಿಸಬಹುದು. ಈ ಎರಡು ಬೈಕ್‌ಗಳು ವಿಶೇಷ ಆವೃತ್ತಿಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಟ್ರಯಂಫ್ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಬೈಕ್‌ಗಳ ಹೆಸರೇ ಹೇಳುವಂತೆ ಸಂಪೂರ್ಣ ಬ್ಲ್ಯಾಕ್ ಬಣ್ಣದಿಂದ ಕೂಡಿದೆ. ಎಂಜಿನ್ ಸೇರಿದಂತೆ ಹಲವು ಭಾಗಗಳು ಬ್ಲ್ಯಾಕ್ ಔಟ್ ಆಗಿದೆ.

ಇದರೊಂದಿಗೆ ಫ್ಲೈ ಸ್ಕ್ರೀನ್ ಫಿನಿಶರ್‌ಗಳು, ಹ್ಯಾಂಡಲ್‌ಬಾರ್, ರೈಡರ್ ಫುಟ್‌ರೆಸ್ಟ್‌ಗಳು, ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳು ಮತ್ತು ಸ್ವಿಂಗಾರ್ಮ್ ಗಾರ್ಡ್‌ನೊಂದಿಗೆ ಹೆಡ್ ಲೈಟ್ ಕೂಡ ಬ್ಲ್ಯಾಕ್ ಬೆಜೆಲ್‌ಗಳನ್ನು ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಟ್ರಯಂಫ್ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಬೈಕ್‌ಗಳಲ್ಲಿ 2,500 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 167 ಬಿಹೆಚ್‍ಪಿ ಪವರ್ 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡೂ ಬೈಕ್‌ಗಳಲ್ಲಿ ಲೀನ್ ಸೆನ್ಸಿಟಿವ್ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ನಾಲ್ಕು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿವೆ. ಎರಡು ಮಾದರಿಗಳ ಸೀಟ್ ಎತ್ತರ ವಿಭಿನ್ನವಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಟ್ರಯಂಫ್ ಮೋಟಾರ್‌ಸೈಕಲ್ ತನ್ನ ಸ್ಟ್ಯಾಂಡರ್ಡ್ ರಾಕೆಟ್ 3 ಜಿಟಿ ಬೈಕನ್ನು ಕಳೆದ ವರ್ಷದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಟ್ರಯಂಫ್ ಮೋಟಾರ್‌ಸೈಕಲ್ ತನ್ನ ರಾಕೆಟ್ 3 ಜಿಟಿ ಬೈಕನ್ನು ಕಳೆದ ವರ್ಷ ನಡೆದ 2019 ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದ್ದರು.

ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿ ಮಾಸ್ ಬೈಕುಗಳಲ್ಲಿಯೇ ಅತಿ ದೊಡ್ಡದು ಎನ್ನಲಾದ 2,458 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್‍ಪಿಎಂನಲ್ಲಿ 165 ಬಿಹೆಚ್‍ಪಿ ಪವರ್ ಹಾಗೂ 4,000 ಆರ್‍ಪಿಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಹಲವಾರು ಫೀಚರ್ ಹಾಗೂ ಎಲೆಕ್ಟ್ರಾನಿಕ್ ಎಕ್ವಿಪ್‍ಮೆಂಟ್‍ಗಳಿವೆ.

ಇನ್ನು ಟ್ರಯಂಫ್ ಕಂಪನಿಯು ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪಲ್ ಬ್ಲ್ಯಾಕ್ ಮಾದರಿಗಳ 15 ಯುನಿಟ್‌ಗಳನ್ನು ಮಾತ್ರ ಭಾರತಕ್ಕೆ ರವಾನಿಸಲಾಗುತ್ತದೆ. ಈ ಎರಡು ಬೈಕುಗಳು ಶೀಘ್ರದಲ್ಲೇ ಭಾರತದ ತೀರ ತಲಪುಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








