Just In
Don't Miss!
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಟೀಸರ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಜಾಗತಿವಾಗಿ ಕಳೆದ ವರ್ಷ ಅನಾವರಣಗೊಳಿಸಿತ್ತು. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ.

ಇದೀಗ ಈ ಹೊಸ ಟ್ರೈಡೆಂಟ್ 660 ಬೈಕಿನ ಅಧಿಕೃತ ಟೀಸರ್ ಅನ್ನು ಟ್ರಯಂಫ್ ಕಂಪನಿಯು ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಟ್ರಯಂಫ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಟ್ರಯಂಫ್ ಟ್ರೈಡೆಂಟ್ 660 ಬೈಕಿಗಾಗಿ ಪ್ರಿ ಬುಕ್ಕಿಂಗ್ ಅನ್ನು ಈಗಾಗಲೇ ಆರಂಭಿಸಿದ್ದಾರೆ.

ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದ್ದು, ಜಾಗತಿಕವಾಗಿ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದ ಬೈಕ್ ಇದಾಗಿದೆ. ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನ ಬೆಲೆಯ ಮಾಹಿತಿಯು ಬಹಿರಂಗವಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಅತ್ಯಂತ ಸೊಗಸಾದ ವಿನ್ಯಾಸ ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಹೊಸ ವಿನ್ಯಾಸ ಶೈಲಿಯನ್ನು ಒಳಗೊಂಡಿದೆ.

ಈ ಹೊಸ ಟ್ರೈಡೆಂಟ್ 660 ಬೈಕ್ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್ ನೊಂದಿಗೆ ಮಸ್ಕಲರ್ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕ್ ಸಿಂಗಲ್-ಪೀಸ್ ಸೀಟ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಮತ್ತು ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟ್ರೈಡೆಂಟ್ ಎಂಬ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ

ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಮ್ಯಾಟ್ ಜೆಟ್ ಬ್ಲಾಕ್/ಮ್ಯಾಟ್ ಸಿಲ್ವರ್ ಐಸ್, ಸಿಲ್ವರ್ ಐಸ್ ಮತ್ತು ಡಯಾಬ್ಲೊ ರೆಡ್, ಕ್ರಿಸ್ಟಲ್ ವೈಟ್ ಮತ್ತು ಸಾಫೈರ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಹೊಸ ಟ್ರೈಡೆಂಟ್ 660 ಬೈಕ್ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಒಳಗೊಂಡಿದೆ. ‘ಮೈ ಟ್ರಯಂಫ್' ಆ್ಯಪ್ ಬಳಸಿ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾದಬಹುದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ರೈಡರ್ ಏಡ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಸಹ ನೀಡುತ್ತದೆ, ಉದಾಹರಣೆಗೆ ರೈಡ್-ಬೈ-ವೈರ್, ಟ್ರ್ಯಾಕ್ಷನ್ ಕಂಟ್ರೋಲ್, ರೈನ್ ಮತ್ತು ರೋಡ್ ರೈಡರ್ ಮೋಡ್ ಗಳು ಸೇರಿದಂತೆ ಇತರ ಹಲವಾರು ಫೀಚರ್ ಗಳನ್ನು ಹೊಂದಿವೆ.

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಟೂಬುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದೆ. ಈ ಹೊಸ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಅನ್ನು ಒಳಗೊಂಡಿದೆ

ಇನ್ನು ಈ ಟ್ರಯಂಫ್ ಟ್ರೈಡೆಂಟ್ 660 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ. ಈ ಹೊಸ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ಝಡ್ 650 ಬೈಕಿಗೆ ಪೈಪೋಟಿ ನೀಡುತ್ತದೆ.