S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್‌ನ (Ola Electric) ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಓಲಾ ಎಸ್ 1 ಹಾಗೂ ಓಲಾ ಎಸ್ 1 ಪ್ರೊ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿವೆ. ಇದುವರೆಗೂ ಈ ಎಲೆಕ್ಟ್ರಿಕ್ ಸ್ಕೂಟರಿನ ವಿತರಣೆ ಆರಂಭವಾಗಿಲ್ಲ. ಕಂಪನಿಯು ಶೀಘ್ರದಲ್ಲೇ ಈ ಎಲೆಕ್ಟ್ರಿಕ್ ಸ್ಕೂಟರ್'ಗಳ ವಿತರಣೆಯನ್ನು ಆರಂಭಿಸಲಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಈಗ Ola S1 Pro ಎಲೆಕ್ಟ್ರಿಕ್ ಸ್ಕೂಟರಿಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳು ಹೊರ ಬರುತ್ತಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಹಾಗೂ ಸಿಇಒ ಭವಿಶ್ ಅಗರ್ವಾಲ್ ರವರು ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಸ್ಟಮ್ ಪೇಂಟ್ ಫಿನಿಶ್ ಒದಗಿಸಲು ಕಂಪನಿಯು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಕಂಪನಿಯು ಇದನ್ನು ಯಾವಾಗ ಆರಂಭಿಸುತ್ತದೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಓಲಾ ಎಲೆಕ್ಟ್ರಿಕ್, ತನ್ನ ಓಲಾ ಎಸ್ 1 ಹಾಗೂ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೆಲವು ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಓಲಾ ಎಲೆಕ್ಟ್ರಿಕ್ ಒಟ್ಟು 9 ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಭಾರತದಲ್ಲಿರುವ ನೆದರ್‌ಲ್ಯಾಂಡ್ಸ್ ರಾಯಭಾರ ಕಚೇರಿಗೆ ತಲುಪಿಸುತ್ತದೆ ಎಂದು ಕಂಪನಿಯು ಇತ್ತೀಚೆಗೆ ತಿಳಿಸಿತ್ತು.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಕಂಪನಿಯು ಈ ಮಾದರಿಗಳಲ್ಲಿ ಡಚ್ ಆರೆಂಜೆ ಎಂಬ ವಿಶಿಷ್ಟ ಬಣ್ಣದ ಆಯ್ಕೆಯನ್ನು ಒದಗಿಸುತ್ತದೆ. ಓಲಾ ಎಲೆಕ್ಟ್ರಿಕ್ ತನ್ನ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮೈಸ್ ಮಾಡಲು ಬಯಸುವ ಗ್ರಾಹಕರಿಗೆ ಕಸ್ಟಮ್ ಪೇಂಟ್ ಫಿನಿಶ್ ನೀಡಲು ನಿರ್ಧರಿಸಿದೆ. ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್ 1 ಹಾಗೂ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್'ಗಳ ವಿತರಣೆಯು ಮುಂಬರುವ ವಾರಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

Ola S1 ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 99,999 ಗಳಾದರೆ, Ola S1 Pro ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,29,999 ಗಳಾಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ 3.9 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 8.5 ಕಿ.ವ್ಯಾ ಪವರ್ ಉತ್ಪಾದಿಸುತ್ತದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

750 ವ್ಯಾ ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಫಾಸ್ಟ್ ಚಾರ್ಜರ್‌ ಮೂಲಕ ಈ ಬ್ಯಾಟರಿಯು ಕೇವಲ 18 ನಿಮಿಷಗಳಲ್ಲಿ 75% ವರೆಗೆ ಚಾರ್ಜ್ ಆಗುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹಲವಾರು ಹೊಸ ಹಾಗೂ ಆಧುನಿಕ ಫೀಚರ್ ಗಳನ್ನು ನೀಡಲಾಗಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

Ola S1 ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 121 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರಿನ ಟಾಪ್ ಎಂಡ್ ಮಾದರಿಯಾದ S1 Pro ಪೂರ್ತಿಯಾಗಿ ಚಾರ್ಜ್ ಆದ ನಂತರ 181 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ವೇಗದ ಬಗ್ಗೆ ಹೇಳುವುದಾದರೆ, Ola S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರತಿ ಗಂಟೆಗೆ 90 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದು. ಇನ್ನು Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರತಿ ಗಂಟೆಗೆ 115 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದು.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ದೇಶಾದ್ಯಂತ ಪ್ರಮುಖ ಮೆಟ್ರೊ ನಗರಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್‌ಗಳ ಟೆಸ್ಟ್ ರೈಡ್ ಆರಂಭಿಸಿದೆ. ಶೀಘ್ರದಲ್ಲೇ ದೇಶಾದ ಪ್ರಮುಖ ನಗರಗಳಲ್ಲೂ ಟೆಸ್ಟ್ ರೈಡ್ ಆರಂಭವಾಗಲಿದೆ. ಡಿಸೆಂಬರ್ 16ರಿಂದ ದೇಶದ ಒಂದು ಸಾವಿರ ಪ್ರಮುಖ ನಗರಗಳಲ್ಲಿ ಹೊಸ ಎಸ್1 ಸ್ಕೂಟರ್ ಟೆಸ್ಟ್ ರೈಡ್ ಆರಂಭವಾಗಲಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬುಕ್ಕಿಂಗ್ ಆರಂಭಿಸಿರುವ ಸಾವಿರಾರು ಗ್ರಾಹಕರಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಟೆಸ್ಟ್ ರೈಡ್ ಅವಕಾಶ ನೀಡಿದೆ. ಮೊದಲ ಹಂತದಲ್ಲಿ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಓಲಾ ಕಂಪನಿಯು ಹಂತ ಹಂತವಾಗಿ ಡಿಸೆಂಬರ್ ಮೊದಲ ವಾರದಿಂದ ಮಾರ್ಚ್ ಅಂತ್ಯವರೆಗೆ ವಿತರಣೆಯಾಗಲಿದೆ. ಡಿಸೆಂಬರ್ 16ರಿಂದ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸುವುದಾಗಿ ಓಲಾ ಕಂಪನಿ ಮಾಹಿತಿ ನೀಡಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಎರಡನೇ ಹಂತದಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮುಂದಿನ ಏಪ್ರಿಲ್‌ನಿಂದ ಸ್ಕೂಟರ್ ವಿತರಣೆಯಾಗಲಿದೆ. ಹೆಚ್ಚು ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಶೋರೂಂಗಳ ಬದಲು ಆನ್‌ಲೈನ್ ಪ್ಲ್ಯಾಟ್‌ಫಾರಂ ಮೂಲಕ ಮಾರಾಟ ಮಾಡಲು ಬಯಸಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಕಂಪನಿಯು ಸ್ಕೂಟರ್ ಖರೀದಿ, ವಿತರಣೆ ಹಾಗೂ ಮಾರಾಟ ನಂತರದ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಲ್ಲಿ ನೀಡಲು ಮುಂದಾಗಿದೆ. ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1.50 ಲಕ್ಷಕ್ಕೂ ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ. ಸ್ಕೂಟರ್ ಖರೀದಿದಾಗಿ ಓಲಾ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಮಾಡಿಕೊಂಡಿದ್ದು, ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿಸಬಹುದು. ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಖರೀದಿಗೆ ಸಬ್ಸಿಡಿ ನೀಡುವ ಕಾರಣ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್ ನಂತಹ ರಾಜ್ಯಗಳಲ್ಲಿ ಇತರ ರಾಜ್ಯಗಳಿಗಿಂತ ಕಡಿಮೆಯಿದೆ.

S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮ್ ಬಣ್ಣದ ಆಯ್ಕೆಯಲ್ಲಿ ನೀಡಲಿದೆ Ola

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರವು ಸಹ ತನ್ನ ಫೇಮ್ 2 ಯೋಜನೆಯಡಿ ಸಬ್ಸಿಡಿ ನೀಡುತ್ತಿದೆ. ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಎಲ್ಲಾ ಪ್ರಶ್ನೆಗಳಿಗೆ ಮಾಹಿತಿ ನಿಡಿಯಲು Ola Electric App ಅಭಿವೃದ್ದಿಪಡಿಸಿದೆ. ಈ ಆ್ಯಪ್ ಮೂಲಕ ಗ್ರಾಹಕರು ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಬಹುದು.

Most Read Articles

Kannada
English summary
Ola to offer s1 pro scooter with custom color option details
Story first published: Monday, November 22, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X