ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ರತನ್ ಇಂಡಿಯಾ ಇತ್ತೀಚೆಗೆ ರಿವೋಲ್ಟ್ ಇಂಟೆಲ್ಲಿಸ್ ಕಾರ್ಪ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟಿದೆ. ರಿವೋಲ್ಟ್ ಕಂಪನಿಯ ಆರ್‌ವಿ 300 ಹಾಗೂ ಆರ್‌ವಿ 400 ಎಲೆಕ್ಟ್ರಿಕ್ ಬೈಕ್‌ಗಳು ಹೆಚ್ಚು ಬೇಡಿಕೆ ಹೊಂದಿವೆ.

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬೈಕ್‌ಗಳ ಬುಕ್ಕಿಂಗ್'ಗಳನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ನಿಲ್ಲಿಸಲಾಗಿದೆ. ಮಾಹಿತಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಆರ್ಡರ್'ಗಳನ್ನು ಪೂರೈಸಿದ ಬಳಿಕ ಬುಕ್ಕಿಂಗ್'ಗಳನ್ನು ಪುನರಾರಂಭಿಸಲಾಗುತ್ತದೆ.

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಹೊಸ ಹೂಡಿಕೆಯ ನಂತರ ರಿವೋಲ್ಟ್ ಕಂಪನಿಯು 50%ನಷ್ಟು ಪಾಲನ್ನು ಹೊಂದಿರಲಿದೆ. ರಾಜೀವ್ ರತನ್'ರವರು ರಿವೋಲ್ಟ್ ಮಂಡಳಿಯ ಅಧ್ಯಕ್ಷರಾಗಿರಲಿದ್ದಾರೆ. ರಿವೋಲ್ಟ್ ಬೈಕುಗಳನ್ನು ಹರಿಯಾಣದ ಮಾನೇಸರ್ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಕಂಪನಿಯು ಈ ಘಟಕದಲ್ಲಿ ಆರ್‌ವಿ 300 ಹಾಗೂ ಆರ್‌ವಿ 400 ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುತ್ತದೆ. ರಿವೋಲ್ಟ್ ಕಂಪನಿಯು ಸದ್ಯಕ್ಕೆ ತನ್ನ ಬೈಕುಗಳನ್ನು ದೆಹಲಿ, ಪುಣೆ, ಚೆನ್ನೈ, ಹೈದರಾಬಾದ್ ಹಾಗೂ ಅಹಮದಾಬಾದ್‌ ನಗರಗಳಲ್ಲಿ ಮಾರಾಟ ಮಾಡುತ್ತಿದೆ.

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಈ ಎರಡೂ ಬೈಕುಗಳು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 150 ಕಿ.ಮೀಗಳವರೆಗೆ ಚಲಿಸುತ್ತವೆ. ಈ ಬೈಕುಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀಗಳಾಗಿದೆ. ಈ ಬೈಕ್‌ಗಳಲ್ಲಿರುವ ಬ್ಯಾಟರಿಗಳು ಸುಮಾರು 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತವೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಈ ಬೈಕ್‌ಗಳಲ್ಲಿ 3.24 ಕಿ.ವ್ಯಾ ಬ್ಯಾಟರಿ ಅಳವಡಿಸಲಾಗಿದೆ. ಈ ಎರಡೂ ಬೈಕ್‌ಗಳಿಗೆ ಕಂಪನಿಯು 1,50,000 ಕಿ.ಮೀಗಳ ವಾರಂಟಿ ನೀಡುತ್ತದೆ. ಭಾರತದಲ್ಲಿರುವ ಯಾವುದೇ ದ್ವಿಚಕ್ರ ವಾಹನ ಕಂಪನಿಯು ಈ ರೀತಿಯ ವಾರಂಟಿ ನೀಡುತ್ತಿಲ್ಲ.

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ರಿವೋಲ್ಟ್ ತನ್ನ ವಿತರಣೆ ಹಾಗೂ ನೆಟ್ ವರ್ಕ್ ಜಾಲವನ್ನು ಭಾರತದಾದ್ಯಂತ 35 ನಗರಗಳಿಗೆ ವಿಸ್ತರಿಸಲು ಹೂಡಿಕೆ ಮಾಡುವುದಾಗಿ ತಿಳಿಸಿದೆ. ರತನ್ ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್‌ ರಿವೋಲ್ಟ್ ಕಂಪನಿಯನ್ನು ವಿಸ್ತರಿಸಲು ರೂ.150 ಕೋಟಿ ಹೂಡಿಕೆ ಮಾಡಲಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ರಿವೋಲ್ಟ್ ಆರ್‌ವಿ 300 ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ರೂ.95,000 ಪಾವತಿಸಿ ಹಾಗೂ ಆರ್‌ವಿ 400 ಬೈಕ್ ಅನ್ನು ಒಂದು ಬಾರಿ ರೂ.1.19 ಲಕ್ಷ ಪಾವತಿಸಿ ಖರೀದಿಸಬಹುದು.

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಇಎಂಐ ಮೂಲಕ ಆರ್‌ವಿ 300 ಬೈಕ್ ಖರೀದಿಸುವುದಾದರೆ ರೂ.7,199 ಬುಕ್ಕಿಂಗ್ ಮೊತ್ತ ಹಾಗೂ ಪ್ರತಿ ತಿಂಗಳು ರೂ.3,174 ಪಾವತಿಸುವ ಮೂಲಕ ಖರೀದಿಸಬಹುದು. ಇನ್ನು ಆರ್‌ವಿ 400 ಬೈಕ್'ಗಾಗಿ ರೂ.4,399 ಬುಕ್ಕಿಂಗ್ ಮೊತ್ತ ಹಾಗೂ ಪ್ರತಿ ತಿಂಗಳು ರೂ.7,999 ಪಾವತಿಸಬೇಕಾಗುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಬೇಡಿಕೆ ಹೆಚ್ಚಾದ ಹಿನ್ನೆಲೆ, ಬೈಕುಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿವೋಲ್ಟ್

ಈ ಎರಡೂ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಆರ್‌ವಿ 300 ಚಿಕ್ಕ ಬೈಕ್ ಆಗಿದೆ. ಈ ಬೈಕ್ ಆರ್‌ವಿ 400 ಬೈಕಿಗಿಂತ 30 ಎಂಎಂ ಕಡಿಮೆಯಾಗಿದ್ದು, 1,350 ಎಂಎಂ ಉದ್ದದ ವ್ಹೀಲ್‌ಬೇಸ್ ಹೊಂದಿದೆ. ಆರ್‌ವಿ 400 ಬೈಕ್ 101 ಕೆ.ಜಿ ತೂಕವನ್ನು ಹೊಂದಿದ್ದರೆ, ಆರ್‌ವಿ 300 ಬೈಕ್ 94 ಕೆ.ಜಿ ತೂಕವನ್ನು ಹೊಂದಿದೆ.

Most Read Articles

Kannada
English summary
Revolt stops booking for its electric bikes due to high demand. Read in Kannada.
Story first published: Thursday, May 6, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X