ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ ಬೈಕ್ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಾರಾಟದಲ್ಲಿ ಸುಧಾರಣೆಗಾಗಿ ಹಲವಾರು ಬದಲಾವಣೆಗಳನ್ನು ಪರಚಯಿಸಿ ಯಶಸ್ವಿಯಾಗುತ್ತಿದ್ದು, ಕಂಪನಿಯು ಇದೀಗ ತನ್ನ ಪ್ರಮುಖ ಬೈಕ್ ಮಾದರಿಗಳಿಗೆ ಅತ್ಯುತ್ತಮ ಸರ್ವಿಸ್ ಸೇವೆಗಳನ್ನು ಒದಗಿಸಲು ಕೇರ್ 24 ಪ್ಯಾಕೇಜ್ ಘೋಷಣೆ ಮಾಡಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಘೋಷಣೆ ಮಾಡರುವ ಹೊಸ ಕೇರ್ 24 ಪ್ಯಾಕೇಜ್ ಮಾದರಿಯು ಸ್ಟ್ಯಾಂಡರ್ಡ್ ಸರ್ವಿಸ್ ಪ್ಯಾಕೇಜ್ ಹೊರತುಪಡಿಸಿ ಹೆಚ್ಚುವರಿ ಮೊತ್ತಕ್ಕೆ ಖರೀದಿ ಮಾಡಬೇಕಿದ್ದು, ಹೊಸ ಕೇರ್ 24 ಪ್ಯಾಕೇಜ್‌ನಲ್ಲಿ ನಿಗದಿ ಅವಧಿಯೊಳಗೆ ಮೂರು ಸಾಮಾನ್ಯ ಸರ್ವಿಸ್ ಮತ್ತು ಎರಡು ಬಾರಿ ಆಯಿಲ್ ಬದಲಾಯಿಸಿ ಕೊಡಲಾಗುತ್ತದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಕೇರ್ 24 ಸರ್ವಿಸ್ ಪ್ಯಾಕೇಜ್‌ಗೆ ರೂ. 2,499 ದರ ನಿಗದಿ ಮಾಡದ್ದು, ಹೊಸ ಸರ್ವಿಸ್ ಪ್ಯಾಕೇಜ್ ಗ್ರಾಹಕರ ಹೆಚ್ಚುವರಿಯಾಗಿ ಕೊಡುಗೆಗೆಗಳನ್ನು ಸಹ ನೀಡಲಾಗುತ್ತದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಬೈಕ್ ಸರ್ವಿಸ್ ಸಂದರ್ಭದಲ್ಲಿ ಸ್ಟ್ಯಾಂಡರ್ಡ್ ಸರ್ವಿಸ್ ಹೊರತು ಹೆಚ್ಚುವರಿ ಬಿಡಿಭಾಗಗಳ ಸೇವೆ ಅಗತ್ಯವಿದ್ದಲ್ಲಿ ಅದರ ಮೇಲೂ ವಿನಾಯ್ತಿ ನೀಡಲಿದ್ದು, ಲೆಬರ್ ಶುಲ್ಕದ ಮೇಲೂ ಶೇ. 20 ರಷ್ಟು ವಿನಾಯ್ತಿ ನೀಡಲಾಗುತ್ತಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಕೇರ್ 24 ಸರ್ವಿಸ್ ಸೇವೆಗಳಿಗಾಗಿ ಗ್ರಾಹಕರು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ಹೊಸ ಸರ್ವಿಸ್ ಪ್ಯಾಕೇಜ್‌ನೊಂದಿಗೆ ವಾಹನ ಕಾರ್ಯಕ್ಷಮತೆಗೆ ಹೆಚ್ಚಿಸಲು ಸುಧಾರಿಸಲಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ಕೋವಿಡ್ ಪರಿಣಾಮ ಕಳೆದ ತಿಂಗಳು ತಗ್ಗಿದ್ದ ಹೊಸ ವಾಹನಗಳ ಬುಕ್ಕಿಂಗ್ ಪ್ರಕ್ರಿಯೆ ಇದೀಗ ಮತ್ತೆ ಚುರುಕುಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ಮಿಟಿಯೊರ್ ಬೈಕ್ ಮಾದರಿಗೂ ಉತ್ತಮ ಬೇಡಿಕೆ ಹರಿದುಬರುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಮಾಹಿತಿಯ ಪ್ರಕಾರ ಹೊಸ ಮಿಟಿಯೊರ್ 350 ಬೈಕ್ ಖರೀದಿಸುವ ಗ್ರಾಹಕರು ಬುಕ್ಕಿಂಗ್ ನಂತರ ವಿತರಣೆಗಾಗಿ ವಿವಿಧ ನಗರಗಳಿಗೆ ಅನುಗುಣವಾಗಿ 2 ರಿಂದ 4 ತಿಂಗಳು ಕಾಯಬೇಕಾಗುತ್ತದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಲಾಕ್‌ಡೌನ್ ನಡುವೆಯೂ ಕಂಪನಿಯು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಕಂಪನಿಯು ಬೈಕ್ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಕೋವಿಡ್ ಪರಿಣಾಮ ಬೈಕ್ ಉತ್ಪಾದನಾ ಘಟಕದಲ್ಲಿ ಕನಿಷ್ಠ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಹಿನ್ನಲೆಯಲ್ಲಿ ಉತ್ಪಾದನಾ ಪ್ರಮಾಣವು ಕುಸಿತ ಕಂಡಿದ್ದು, ಪರಿಸ್ಥಿತಿ ಸುಧಾರಣೆ ಇನ್ನು ಕೆಲವು ತಿಂಗಳು ಕಾಲ ಬೇಕಾಗಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಸಂಕಷ್ಟದ ಪರಿಸ್ಥಿತಿಯಲ್ಲೂ ಬೈಕ್ ಮಾರಾಟದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಗೆ ಉತ್ತಮ ಬೇಡಿಕೆ ಹರಿದುಬಂದಿದ್ದು, ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 20,073 ಯುನಿಟ್‌ಗಳನ್ನು ಮಾರಾಟಗೊಳಿಸಿದೆ.

ಆಕರ್ಷಕ ಬೆಲೆಯಲ್ಲಿ ಕೇರ್ 24 ಸರ್ವಿಸ್ ಪ್ಯಾಕೇಜ್ ಘೋಷಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ತಿಂಗಳು ದೇಶದ ಹೆಚ್ಚಿನ ಭಾಗಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿತ್ತು. ಅಲ್ಲದೇ ಕೊರೋನಾ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಾಗಿತ್ತು. ಇದರ ನಡುವೆ ರಾಯಲ್ ಎನ್‌ಫೀಲ್ಡ್ ಕಂಪನಿಯು 20,073 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 48,789 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಕಂಪನಿಯು ಕಳೆದ ತಿಂಗಳ ಮಾರಾಟದಲ್ಲಿ ಶೇ.58.8 ರಷ್ಟು ಕುಸಿತ ಕಂಡಿದೆ.

Most Read Articles

Kannada
English summary
Royal Enfield Announced New Service Care 24 Package. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X