ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಭಾರತದಲ್ಲಿ ವಾಹನಗಳ ಮಾಡಿಫಿಕೇಶನ್ ಮಾಡುವುದು ಕಾನೂನು ಬಾಹಿರ. ವಾಹನಗಳ ಮಾಡಿಫಿಕೇಶನ್ ಮಾಡಲು ಆರ್‌ಟಿ‌ಒಗಳು ಅನುಮೋದನೆ ನೀಡುವುದಿಲ್ಲ. ಅದರಲ್ಲೂ ಪೆಟ್ರೋಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಮಾಡಿಫೈ ಮಾಡುವುದಕ್ಕೆ ಭಾರತದ ಮೋಟಾರು ವಾಹನ ಕಾಯ್ದೆಯು ಅವಕಾಶ ನೀಡುವುದಿಲ್ಲ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಪೆಟ್ರೋಲ್ ಎಂಜಿನ್ ಹೊಂದಿದ್ದ Hero Splendor ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆಗೊಂಡಿದೆ. ಇದೇ ಮೊದಲ ಬಾರಿಗೆ ಆರ್‌ಟಿ‌ಒ ಈ ಬೈಕಿಗೆ ಅನುಮೋದನೆಯನ್ನು ಸಹ ನೀಡಿದೆ. ಈ ಬೈಕ್ ಮಾಡಿಫಿಕೇಶನ್'ಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಎಲೆಕ್ಟ್ರಿಕ್ ವಾಹನಗಳು ಭವಿಷ್ಯದ ಸಾರಿಗೆ ಸಾಧನವೆಂದು ಎಲ್ಲರಿಗೂ ಮನದಟ್ಟಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಾಹನ ತಯಾರಕ ಕಂಪನಿಗಳು ಭಾರತದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್'ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿವೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಇದೇ ವೇಳೆ ಪೆಟ್ರೋಲ್ ವಾಹನಗಳನ್ನು ವಿದ್ಯುತ್ ವಾಹನಗಳಾಗಿ ಪರಿವರ್ತಿಸುವ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್'ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಜನಪ್ರಿಯ Maruti Suzuki Dzire ಕಾರಿಗಾಗಿ ನಾರ್ವೆ ಮೋಟಾರ್ಸ್ಪೋರ್ಟ್ ಎಂಬ ಕಸ್ಟಮೈಸ್ಡ್ ಕಂಪನಿಯು ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅಭಿವೃದ್ಧಿಪಡಿಸಿದ ಬಗ್ಗೆ ವರದಿಯಾಗಿತ್ತು.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಈಗ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಮೂಲಕ Hero Splendor ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಲಾಗಿದೆ. ಅಚ್ಚರಿ ಎಂದರೆ ಇದೇ ಮೊದಲ ಬಾರಿಗೆ ಅಧಿಕೃತ ವಾಹನ ತಯಾರಕ ಕಂಪನಿಗಳನ್ನು ಹೊರತುಪಡಿಸಿ ಒಬ್ಬ ವ್ಯಕ್ತಿ ಅಥವಾ ಗುಂಪು ಬದಲಿಸಿದ ಬೈಕಿಗೆ ಆರ್‌ಟಿ‌ಒ ಅನುಮೋದನೆ ನೀಡಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಇದರಿಂದ ಯಾರು ಬೇಕಾದರೂ ಈ ಆರ್‌ಟಿ‌ಒ ಅನುಮೋದಿತ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ತಮ್ಮ Splendor ಬೈಕಿನಲ್ಲಿ ಅಳವಡಿಸಿಕೊಳ್ಳಬಹುದು. ಬೈಕಿನಲ್ಲಿ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅಳವಡಿಸುವ ಮೊದಲು ಇಂತಹ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಗಳಿಂದ ಏನೆಲ್ಲಾ ಸಮಸ್ಯೆಗಳು ಇವೆ ಎಂಬುದನ್ನು ಪರಿಶೀಲಿಸಿದರೆ ಒಳ್ಳೆಯದು.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಈ ರೀತಿಯ ಕಿಟ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅವುಗಳನ್ನು ಬದಲಾಯಿಸಲು ಅಥವಾ ಸರಿಪಡಿಸಲು ದುಬಾರಿ ಮೊತ್ತವನ್ನು ತೆರಬೇಕಾಗುತ್ತದೆ.ಆದರೆ ಆರ್‌ಟಿಒ ಈ ನಿರ್ದಿಷ್ಟ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಅನುಮೋದಿಸಿರುವುದರಿಂದ ವಿಮಾ ಕಂಪನಿಯು ಅಂತಹ ವೆಚ್ಚವನ್ನು ಭರಿಸುತ್ತದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಈ ಹಳೆ Hero Honda Splendor ಬೈಕಿನ ಹಿಂದಿನ ವ್ಹೀಲ್ ನಲ್ಲಿ 2 ಕಿ.ವ್ಯಾ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಎಂಜಿನ್ ಸರಬರಾಜಿನಲ್ಲಿ ಬ್ಯಾಟರಿ ಹಾಗೂ ಕಂಟ್ರೋಲರ್ ಗಳನ್ನು ಅಳವಡಿಸಲಾಗಿದೆ. ಎಂಸಿಬಿ ಹಾಗೂ ಇನ್ನಿತರ ಕೆಲವು ಮಾರ್ಪಾಡುಗಳನ್ನು ಬೈಕಿನ ಸೈಡ್ ಪ್ಯಾನಲ್‌ಗಳಲ್ಲಿ ಅಳವಡಿಸಲಾಗಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಬ್ರೇಕಿಂಗ್ ಗಳಿಗಾಗಿ ಈ ಬೈಕಿನಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ. ಈ ಬೈಕಿನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಬ್ರೇಕ್ ಪ್ಲೇಟ್ ಅನ್ನು Bajaj Pulsar ಬೈಕಿನಿಂದ ಪಡೆಯಲಾಗಿದೆ. ಈ ಬೈಕಿನ ಸ್ವಿಚ್ ಗೇರ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ Splendor ಬೈಕಿಗೆ ಎಆರ್‌ಎಐನಿಂದ ಪ್ರಮಾಣೀಕರಿಸಲ್ಪಟ್ಟಂತೆ ಎರಡು ರೀತಿಯಲ್ಲಿ ಅನುಮೋದನೆ ನೀಡಲಾಗಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಮೊದಲನೆಯದಾಗಿ ಬೈಕಿನ ಎಲೆಕ್ಟ್ರಿಕ್ ಬದಲಿ ಭಾಗಗಳಿಗೆ ನೀಡಲಾಗಿದೆ. ಈ ಬದಲಿ ಭಾಗಗಳ ಉತ್ಪಾದನೆಯನ್ನು 2 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಎರಡನೇಯದು ಬೈಕಿನ ಒಟ್ಟಾರೆ ಮಾದರಿಯ ಕ್ಲಿಯರೆನ್ಸ್ ಆಗಿದೆ. 92% ನಷ್ಟು ಸಾಮರ್ಥ್ಯದೊಂದಿಗೆ ಈ ಬೈಕಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 63 ಪವರ್ ಹಾಗೂ ಗರಿಷ್ಠ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಈ ಎಲೆಕ್ಟ್ರಿಕ್ ಬೈಕ್ 100 ಕೆ.ಜಿಯಿಂದ 300 ಕೆ.ಜಿಯಷ್ಟು ತೂಕವನ್ನು ಹೊತ್ತೊಯ್ಯಬಲ್ಲದು. ಎಆರ್‌ಎಐ ಅನುಮೋದನೆಯಂತೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್ ಪ್ರತಿ ಗಂಟೆಗೆ ಗರಿಷ್ಠ 70 ಕಿ.ಮೀ ವೇಗದಲ್ಲಿ ಚಲಿಸಬಹುದು. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಕ್ 151 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಪೆಟ್ರೋಲ್ ಎಂಜಿನ್ ಹೊಂದಿರುವ Hero Splendor ಬೈಕಿನ ತೂಕ 122 ಕೆ.ಜಿಗಳಾಗಿದೆ. ಎಂಜಿನ್ ತೆಗೆದ ನಂತರ ಈ Splendor ಬೈಕಿನ ತೂಕವನ್ನು 102 ಕೆ.ಜಿಗಳಿಗೆ ಇಳಿಸಲಾಗಿದೆ. ಈ ತೂಕ ಕಡಿತವು ಬೈಕಿನ ನಿರ್ವಹಣೆ ಹಾಗೂ ಚಲಿಸುವ ವ್ಯಾಪ್ತಿಯಲ್ಲಿ ಖಂಡಿತವಾಗಿಯೂ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ಬೈಕ್ ರಿಜನರೇಟಿವ್ ಕಂಟ್ರೋಲರ್ ಹೊಂದಿದೆ. ಇದರಿಂದ ಬೈಕ್ ಸವಾರನು ಬ್ರೇಕ್ ಹಾಕಿದಾಗೆಲ್ಲಾ ಬ್ಯಾಟರಿಯ ಶಕ್ತಿಯು ವ್ಯರ್ಥವಾಗದೇ ಬ್ಯಾಟರಿಗೆ ಹಿಂತಿರುಗುತ್ತದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕಿಗೆ ಬದಲಿಸುತ್ತದೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್

ಈ ಬದಲಾವಣೆಯ ನಂತರ ಬೈಕಿನ ವಾಹನ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬಿಳಿ ನಂಬರ್ ಪ್ಲೇಟ್ ಬದಲು ಹಸಿರು ಬಣ್ಣದ ನಂಬರ್ ಪ್ಲೇಟ್ ನೀಡಲಾಗುವುದು. ವರದಿಗಳ ಪ್ರಕಾರ ಈ ಬೈಕಿನ ಮಾಲೀಕರು ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ರೂ. 35,000 ಗಳಿಗೆ ಖರೀದಿಸಿದ್ದಾರೆ. ಆದರೆ ಈ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಬೆಲೆ ರೂ.50,000 ಗಳಿಗಿಂತ ಹೆಚ್ಚು.

ಚಿತ್ರ ಕೃಪೆ: GoGoA1

Most Read Articles

Kannada
English summary
Rto approves splendor motorcycle with electric conversion kit details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X