ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ 125ಸಿಸಿ ಸ್ಕೂಟರ್ ಮಾದರಿಗಳಾದ ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಮಾದರಿಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಆಯ್ಕೆ ನಂತರ ಸ್ಕೂಟರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಸುಜುಕಿ ಕಂಪನಿಯು ರೈಡ್ ಕನೆಕ್ಟ್ ಮಾದರಿಗಳಲ್ಲಿ ಮೆಟಾಲಿಕ್ ಡಾರ್ಕ್ ಗ್ರಿನಿಶ್ ಬ್ಲ್ಯೂ ಮತ್ತು ಗ್ಲಾಸಿ ಗ್ರೇ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಬಣ್ಣದ ಆಯ್ಕೆಯು ಎರಡು ಸ್ಕೂಟರ್‌ಗಳ ಹೈ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿವೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಮೆಟಾಲಿಕ್ ಡಾರ್ಕ್ ಗ್ರಿನಿಶ್ ಬ್ಲ್ಯೂ ಮತ್ತು ಗ್ಲಾಸಿ ಗ್ರೇ ಹೊರತುಪಡಿಸಿ ಇನ್ನುಳಿದ ಹತ್ತು ಬಣ್ಣದ ಆಯ್ಕೆಗಳು ಸ್ಟ್ಯಾಂಡರ್ಡ್ ಆಗಿ ದೊರೆಯಲಿದ್ದು, ಹೊಸ ಬಣ್ಣದ ಆಯ್ಕೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

125ಸಿಸಿ ಪ್ರೀಮಿಯಂ ಸ್ಕೂಟರ್ ಮಾದರಿಗಳಲ್ಲಿ ಸದ್ಯ ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಮಾದರಿಗಳು ಉತ್ತಮ ಬೇಡಿಕೆ ಹೊಂದಿದ್ದು, ಒಂದೇ ಮಾದರಿಯ ಎಂಜಿನ್ ಹೊಂದಿದ್ದರೂ ಎರಡು ಸ್ಕೂಟರ್ ವಿಭಿನ್ನ ಗ್ರಾಹಕರ ವರ್ಗವನ್ನು ಹೊಂದಿವೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಸ್ಟ್ಯಾಂಡರ್ಡ್ ಆಕ್ಸೆಸ್ 125 ಮಾದರಿಯು ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಒಟ್ಟು ಏಳು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 74,381 ದಿಂದ ಟಾಪ್ ಎಂಡ್ ಮಾದರಿಯು ರೂ. 83,524 ಬೆಲೆ ಹೊಂದಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಆಕ್ಸೆಸ್ 125 ಟಾಪ್ ಎಂಡ್ ಮಾದರಿಗಳಲ್ಲಿ ಬ್ಲೂಟೂತ್ ಕನೆಕ್ಟ್ ಸೌಲಭ್ಯವನ್ನು ನೀಡಲಾಗಿದ್ದು, 124 ಸಿಸಿ ಎಂಜಿನ್‌ನೊಂದಿಗೆ 8.6 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

125 ಸಿಸಿ ಮಾದರಿಗಳಲ್ಲಿಯೇ ಉತ್ತಮ ಇಂಧನ ದಕ್ಷತೆ ಹೊಂದಿರುವ ಆಕ್ಸೆಸ್ ಸ್ಕೂಟರ್ ಮಾದರಿಯು 5 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಗರಿಷ್ಠ 50 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಉತ್ತಮ ಹಿಡಿತಕ್ಕಾಗಿ ಹಿಂಬದಿಯಲ್ಲಿ ಡ್ರಮ್ ಬ್ರೇಕ್ ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಆಯ್ಕೆ ನೀಡಲಾಗಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

2020ರಿಂದ ಆಕ್ಸೆಸ್ 125 ಮಾದರಿಗಾಗಿ ಸುಜುಕಿ ಕಂಪನಿಯು ಬ್ಲೂಟೂತ್ ಆಯ್ಕೆ ನೀಡುತ್ತಿದ್ದು, ಬ್ಲೂಟೂತ್ ಮೂಲಕ ಸ್ಕೂಟರಿನ ಸ್ಮಾರ್ಟ್ ಕನೆಕ್ಟ್ ಕನ್ಸೊಲ್ ನಿರ್ವಹಿಸಬಹುದು. ಇದರಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಯಾಟರಿ ಲಭ್ಯತೆ, ಓವರ್ ಸ್ಪೀಡ್ ವಾರ್ನಿಂಗ್, ಲಾಸ್ಟ್ ಪಾರ್ಕ್ ಲೋಕೆಷನ್ ಮತ್ತು ಟ್ರಿಪ್ ಇನ್ಪಾರ್ಮೆಷನ್ ತಿಳಿದುಕೊಳ್ಳಬಹುದಾಗಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಇನ್ನು ಬರ್ಗಮನ್ ಸ್ಟ್ರೀಟ್ 125 ಮಾಕ್ಸಿ ಸ್ಕೂಟರ್‌ ಮಾದರಿಯು ಸಹ ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಬರ್ಗಮನ್ ಸ್ಟ್ರೀಟ್ 125 ಮಾದರಿಯಲ್ಲಿ ಆಕ್ಸೆಸ್ ಮಾದರಿಯಲ್ಲಿರುವಂತೆ 124 ಸಿಸಿ ಎಂಜಿನ್‌ ಜೋಡಣೆ ಮಾಡಲಾಗಿದ್ದು, ಇದು 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಇದು ಸಾಮಾನ್ಯ ಸ್ಕೂಟರ್ ಮಾದರಿಗಳಿಂತಲೂ ಹೆಚ್ಚಿನ ವ್ಹೀಲ್‌ಬೆಸ್‌ನೊಂದಿಗೆ ಬಲಿಷ್ಠ ವಿನ್ಯಾಸ ಹೊಂದಿದ್ದು, ಇದು ಕೂಡಾ ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಚಾಲನಾ ಗುಣ ಆಧರಿಸಿ 40 ರಿಂದ 45 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್ ಮಾದರಿಯಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಲೈಟ್ಸ್, ಬ್ಲೂಟೂಥ್ ಸಂಪರ್ಕಿತ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 85,907ಕ್ಕೆ ಮತ್ತು ಟಾಪ್ ಎಂಡ್ ರೂ.89,531 ಬೆಲೆ ಹೊಂದಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಇದರೊಂದಿಗೆ ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಬರ್ಗಮನ್ ಸ್ಟ್ರೀಟ್ ಮಾದರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಈಗಾಗಲೇ ಬಹಿರಂಗವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಆಕಾರ ಮತ್ತು ಸಿಲೂಯೆಟ್ ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲುತ್ತದೆ ಎಂದು ತೋರುತ್ತದೆಯಾದರೂ ವಿನ್ಯಾಸವು ಸ್ವಲ್ಪ ವಿಭಿನ್ನವಾಗಿದೆ.

ಆಕ್ಸೆಸ್ 125 ಮತ್ತು ಬರ್ಗಮನ್ ಸ್ಟ್ರೀಟ್ 125 ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ಪರಿಚಯಿಸಿದ ಸುಜುಕಿ

ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಕೆಲವು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಸ್ಕೂಟರ್ ಫೀಚರ್ಸ್‌ಗಳು ಎಥರ್ 450ಎಕ್ಸ್ ಮತ್ತು ಟಿವಿಎಸ್ ಐಕ್ಯೂಬ್‌‌ಗಿಂತಲೂ ಉತ್ತಮವಾಗಿವೆ. ಹೊಸ ಸ್ಕೂಟರ್ ಮಾದರಿಯು ರೂ. 1.40 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ.

Most Read Articles

Kannada
English summary
Suzuki motorcycles introduced new colours for access 125 and burgman street 125
Story first published: Saturday, December 25, 2021, 22:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X