ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಬ್ರಿಟಿಷ್ ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಟ್ರಯಂಫ್ ಮೋಟಾರ್‌ಸೈಕಲ್ ತನ್ನ ಪ್ರಮುಖ ಬೈಕ್ ಶ್ರೇಣಿಯಲ್ಲಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಗೋಲ್ಡ್ ಲೈನ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಕಂಪನಿಯು ಗೋಲ್ಡ್ ಲೈನ್ ಆವೃತ್ತಿಗಳ ಅಡಿಯಲ್ಲಿ ಪ್ರಮುಖ ಐದು ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದ್ದು, ವಿಶೇಷ ಬೈಕ್ ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿವೆ. ಗೋಲ್ಡ್ ಲೈನ್ ಮಾದರಿಗಳಲ್ಲಿ ಟ್ರಯಂಫ್ ಬೊನೆವಿಲ್ಲೆ ಟಿ100, ಟ್ರಯಂಫ್ ಬೊನೆವಿಲ್ಲೆ ಟಿ120, ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್, ಟ್ರಯಂಫ್ ಬೊನೆವಿಲ್ಲೆ ಸ್ಪೀಡ್‌ಮಾಸ್ಟರ್ ಮತ್ತು ಟ್ರಯಂಫ್ ಬಾಬರ್ ಅನ್ನು ಒಳಗೊಂಡಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸದಾಗಿ ಬಿಡುಗಡೆಯಾಗಿರುವ ಬೊನೆವಿಲ್ಲೆ ಶ್ರೇಣಿಯಲ್ಲಿನ ಹೊಸ ಗೋಲ್ಡ್ ಲೈನ್ ಆವೃತ್ತಿಗಳ ವಿತರಣೆಯು 2022ರಿಂದ ಜನವರಿಯಿಂದ ಪ್ರಾರಂಭವಾಗಲಿದ್ದು, ಗೋಲ್ಡ್ ಲೈನ್ ಆವೃತ್ತಿಯ ಮಾದರಿಗಳು ಕೇವಲ ಒಂದು ವರ್ಷಕ್ಕೆ ಮಾರಾಟಗೊಳ್ಳಲಿವೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯ ಹೊಸ ಗೋಲ್ಡ್ ಲೈನ್ ಆವೃತ್ತಿಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲ ವಿಭಿನ್ನವಾದ ವಿನ್ಯಾಸ ನೀಡಲು ಕೈಯಿಂದ ಚಿತ್ರಿಸಿದ ಗೋಲ್ಡ್ ಲೈನ್‌ ಬಣ್ಣದ ಆಯ್ಕೆ ಹೊಂದಿರಲಿದ್ದು, ವಿಶೇಷ ಮಾದರಿಗಳಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ನೀಡಲಾಗಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಬಣ್ಣದ ಮಿಂಚುತ್ತಿರುವ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಗೋಲ್ಡ್ ಲೈನ್‌ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ 9.95 ಲಕ್ಷ ಬೆಲೆ ಹೊಂದಿದ್ದರೆ ಟ್ರಯಂಫ್ ಬಾಬರ್ ಗೋಲ್ಡ್ ಲೈನ್ ರೂ. 12.75 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಗೋಲ್ಡ್ ಲೈನ್ ಮಾದರಿಯು ಗೋಲ್ಡ್ ಲೈನ್ ಶ್ರೇಣಿಯ ಮೋಟಾರ್‌ಸೈಕಲ್‌ಗಳಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆವೃತ್ತಿಯಾಗಿದ್ದು, ಹೊಸ ಮೋಟಾರ್‌ಸೈಕಲ್‌ಗೆ ಹೊಸ ಲುಕ್ ನೀಡಲು ಟ್ರಯಂಫ್ ಫ್ಯುಯಲ್ ಟ್ಯಾಂಕ್‌ನಲ್ಲಿ ಮ್ಯಾಟ್ ಪೆಸಿಫಿಕ್ ಬ್ಲೂ ಬಣ್ಣದ ಸ್ಕೀಮ್ ಅನ್ನು ಬಳಸಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಜೊತೆಗೆ ಹೊಸ ಬೈಕ್ ಮಾದರಿಗೆ ಗೋಲ್ಡ್ ಕಲರ್ ಪೇಂಟ್ ಕೋಟಿಂಗ್ ಹೊಂದಿರುವ ಟ್ರಯಂಫ್ ಲೋಗೋವನ್ನು ನೀಡಲಾಗಿದ್ದು, ಇದರ ಜೊತೆಗೆ ಹೊಸ ಮೋಟಾರ್‌ಸೈಕಲ್‌ನ ಫ್ಯೂಲ್ ಟ್ಯಾಂಕ್ ಮತ್ತು ಏರ್‌ಬಾಕ್ಸ್‌ನಲ್ಲಿ ಕೈಯಿಂದ ಚಿತ್ರಿಸಿದ ಗೋಲ್ಡ್ ಲೈನ್ ಅನ್ನು ಸಹ ಒಳಗೊಂಡಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಸ್ಕ್ರ್ಯಾಂಬ್ಲರ್ ಮಾದರಿಯು 64 ಬಿಎಚ್‌ಪಿ ಮತ್ತು 80 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯದ 900 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದ್ದು, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಇದರೊಂದಿಗೆ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಗೋಲ್ಡ್ ಲೈನ್‌ನಂತೆಯೇ ಟ್ರಯಂಫ್ ಬೊನೆವಿಲ್ಲೆ ಟಿ100 ಸಹ 64 ಬಿಎಚ್‌ಪಿ ಮತ್ತು 80 ಎನ್ಎಂ ಟಾರ್ಕ್‌ ಉತ್ಪಾದನೆ ಮಾಡಬಲ್ಲ 900ಸಿಸಿ ಪ್ಯಾರಾಲಲ್-ಟ್ವಿನ್ ಎಂಜಿನ್ ಅನ್ನು ಪಡೆಯುತ್ತದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಆದಾಗ್ಯೂ ಬೊನೆವಿಲ್ಲೆ ಟಿ100 ಡ್ಯುಯಲ್-ಟೋನ್ ಕಾಂಪಿಟೇಶನ್ ಗ್ರೀನ್ ಮತ್ತು ಸಿಲ್ವರ್ ಐಸ್ ಕಲರ್ ಸ್ಕೀಮ್ ಅನ್ನು ಪಡೆದುಕೊಂಡಿರಲಿದ್ದು, ಟಿ100 ಗೋಲ್ಡ್ ಲೈನ್ ಕೂಡಾ ಇಂಧನ ಟ್ಯಾಂಕ್ ಮತ್ತು ಏರ್‌ಬಾಕ್ಸ್‌ನಲ್ಲಿ ಕೈಯಿಂದ ಚಿತ್ರಿಸಿದ ಗೋಲ್ಡ್ ಲೈನ್ ಅನ್ನು ಪಡೆಯುತ್ತದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಮಾದರಿಯು ಸಹ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಇದರ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ 10.09 ಲಕ್ಷದಿಂದ ಪ್ರಾರಂಭವಾಗುತ್ತದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಬೊನೆವಿಲ್ಲೆ ಟಿ100 ಗೋಲ್ಡ್ ಲೈನ್‌ಗಿಂತ ಭಿನ್ನವಾಗಿ ಟ್ರಯಂಫ್ ಬೊನೆವಿಲ್ಲೆ ಟಿ120 ಗೋಲ್ಡ್ ಲೈನ್ ಮಾದರಿಯು ಸಹ ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಟಿ120 ಮಾದರಿಯ ಇಂಧನ ಟ್ಯಾಂಕ್ ಹೆಡ್‌ಲ್ಯಾಂಪ್ ಬೌಲ್, ಏರ್‌ಬಾಕ್ಸ್ ಮತ್ತು ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳಲ್ಲಿ ಮ್ಯಾಟ್ ಸಫೈರ್ ಕಪ್ಪು ಬಣ್ಣದ ಸ್ಕೀಮ್ ಅನ್ನು ಪಡೆಯುತ್ತದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಗೋಲ್ಡ್ ಲೈನ್ ಆವೃತ್ತಿಗಳ ಭಾಗವಾಗಿ ಟಿ120 ಮಾದರಿಯ ಫ್ಯೂಲ್ ಟ್ಯಾಂಕ್ ಮತ್ತು ಏರ್‌ಬಾಕ್ಸ್‌ನಲ್ಲಿ ಕೈಯಿಂದ ಚಿತ್ರಿಸಿದ ಗೋಲ್ಡ್ ಲೈನ್ ನೀಡಲಾಗಿದ್ದು, ಈ ಬೈಕ್ ಮಾದರಿಯು 79 ಬಿಎಚ್‌ಪಿ ಮತ್ತು 105 ಎನ್ಎಂ ಟಾರ್ಕ್ ಉತ್ಪಾದಿತ 1,200 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟಿ120 ಮಾದರಿಯ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದ್ದು, ಈ ಬೈಕಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ 11.79 ಲಕ್ಷದಿಂದ ಪ್ರಾರಂಭವಾಗುತ್ತದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಇನ್ನು ಹೊಸ ಮಾದರಿಯಲ್ಲಿ ಪ್ರಮುಖವಾಗಿರುವ ಟ್ರಯಂಫ್ ಬೊನೆವಿಲ್ಲೆ ಸ್ಪೀಡ್‌ಮಾಸ್ಟರ್ ಗೋಲ್ಡ್ ಲೈನ್ ಸಫೈರ್ ಬ್ಲ್ಯಾಕ್ ಪೇಂಟ್ ಸ್ಕೀಮ್ ಮತ್ತು ಇಂಧನ ಟ್ಯಾಂಕ್ ಮತ್ತು ಏರ್‌ಬಾಕ್ಸ್‌ನಲ್ಲಿ ಕೈಯಿಂದ ಚಿತ್ರಿಸಿದ ಗೋಲ್ಡ್ ಲೈನ್ ಪಡೆದುಕೊಂಡಿದ್ದು, ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಈ ಮೋಟಾರ್ ಸೈಕಲ್ ಎಕ್ಸ್‌ಶೋರೂಂ ಪ್ರಕಾರ ರೂ. 12.75 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಬೊನೆವಿಲ್ಲೆ ಸ್ಪೀಡ್‌ಮಾಸ್ಟರ್ ಗೋಲ್ಡ್ ಲೈನ್ ಮಾದರಿಯು 1200 ಸಿಸಿ ಟ್ವಿನ್-ಸಿಲಿಂಡರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ ಪ್ರೇರಣೆಯೊಂದಿಗೆ 77 ಬಿಎಚ್‌ಪಿ ಮತ್ತು 196 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಬಾಬರ್ ಗೋಲ್ಡ್ ಲೈನ್ ಕೂಡಾ ಟ್ರಯಂಫ್ ಬೊನೆವಿಲ್ಲೆ ಸ್ಪೀಡ್ ಮಾಸ್ಟರ್ ಗೋಲ್ಡ್ ಲೈನ್ ನಂತೆಯೇ ಪವರ್ ಟ್ರೈನ್ ಆಯ್ಕೆ ಹೊಂದಿದ್ದು, ಈ ಮೋಟಾರ್‌ಸೈಕಲ್‌ನ ಏರ್‌ಬಾಕ್ಸ್‌ನಲ್ಲಿ ಆಕರ್ಷಕವಾದ ಕಪ್ಪು ಬಣ್ಣದ ಸ್ಕೀಮ್‌ನೊಂದಿಗೆ ಕಾರ್ನಿವಾಲ್ ರೆಡ್ ಬಣ್ಣವನ್ನು ನೀಡಲಾಗಿದೆ.

ಪ್ರಮುಖ ಬೈಕ್ ಆವೃತ್ತಿಗಳಲ್ಲಿ ಗೋಲ್ಡ್ ಎಡಿಷನ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಜೊತೆಗೆ ಬ್ಲ್ಯಾಕ್ ಔಟ್ ಎಂಜಿನ್ ಆಯ್ಕೆ ಹೊಂದಿದ್ದು, ಫ್ಯೂಲ್ ಟ್ಯಾಂಕ್ ಮತ್ತು ಏರ್‌ಬಾಕ್ಸ್‌ನಲ್ಲಿ ಕೈಯಿಂದ ಚಿತ್ರಿಸಿಲಾದ ಗೋಲ್ಡ್ ಲೈನಿಂಗ್ ಅನ್ನು ಸಹ ಪಡೆದುಕೊಂಡಿದೆ. ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಟ್ರಯಂಫ್ ಬಾಬರ್ ಗೋಲ್ಡ್ ಲೈನ್ ಎಕ್ಸ್‌ಶೋರೂಂ ಪ್ರಕಾರ ರೂ 12.75 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Triumph motorcycles launches the gold editions bikes in india
Story first published: Tuesday, December 21, 2021, 22:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X