ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಟ್ರಯಂಫ್ ಮೋಟಾರ್‌ಸೈಕಲ್ಸ್ ಕಂಪನಿಯು ಭಾರತದಲ್ಲಿ ತನ್ನ ಪ್ರಮುಖ ಸೂಪರ್ ಬೈಕ್ ಮಾದರಿಗಳ ಬೆಲೆ ಹೆಚ್ಚಿಸಿದ್ದು, ಹೊಸ ದರ ಪಟ್ಟಿಯಲ್ಲಿ ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಮಾದರಿಗಳು ಹೆಚ್ಚಿನ ಮಟ್ಟದ ದರ ಏರಿಕೆ ಪಡೆದುಕೊಂಡಿವೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಟ್ರಯಂಫ್ ಕಂಪನಿಯು ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 31 ಸಾವಿರದಿಂದ ಗರಿಷ್ಠ ರೂ. 1.05 ಲಕ್ಷದಷ್ಟು ಹೆಚ್ಚುವರಿ ದರ ಪಡೆದುಕೊಂಡಿದ್ದು, ಹೊಸ ದರಗಳನ್ನು ಇಂದಿನಿಂದಲೇ ಅನ್ವಯವಾಗುವಂತೆ ಪರಿಸ್ಕೃತ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಿದೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಹೊಸ ದರಪಟ್ಟಿಯಲ್ಲಿ ಮಧ್ಯಮ ಕ್ರಮಾಂಕದ ಸ್ಟ್ರೀಟ್ ನೆಕೆಡ್ ಆವೃತ್ತಿಯಾಗಿರುವ ಸ್ಟ್ರೀಟ್ ಟ್ರಿಪ್ಪಲ್ ಆರ್ ಮಾದರಿಯು ರೂ. 31 ಸಾವಿರ ಹೆಚ್ಚುವರಿ ದರದೊಂದಿಗೆ ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 9.15 ಲಕ್ಷ ಬೆಲೆ ಪಡೆದುಕೊಂಡಿದೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ದರ ಹೆಚ್ಚಳದ ನಂತರ ಸ್ಟ್ರೀಟ್ ಟ್ರಿಪ್ಪಲ್ ಆರ್ ಮಾದರಿಯು ಪ್ರತಿಸ್ಪರ್ಧಿ ಮಾದರಿಯಾದ ಕವಾಸಕಿ ಜೆಡ್900 ಮಾದರಿಗಿಂತ ರೂ.81 ಸಾವಿರಷ್ಟು ಅಧಿಕ ಬೆಲೆ ಹೊಂದಿದ್ದರೆ ಬಿಎಂಡಬ್ಲ್ಯು ಎಫ್ 900ಆರ್ ಮಾದರಿಗಿಂತ ರೂ. 1.65 ಲಕ್ಷದಷ್ಟು ಅಗ್ಗದ ಸೂಪರ್ ಬೈಕ್ ಮಾದರಿಯಾಗಿದೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಸ್ಟ್ರೀಟ್ ಟ್ರಿಪ್ಪಲ್ ಆರ್ ಮಾದರಿಯು ಮೊಟೊ 2 ಪ್ರೇರಿತ 765 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿದ್ದು, ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲೀಪ್ ಅಸಿಸ್ಟೆಡ್ ಕ್ಲಚ್ ಹೊಂದಿದೆ. ಈ ಮೂಲಕ 116-ಬಿಎಚ್‌ಪಿ, 77-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹಲವಾರು ಎಲೆಕ್ಟ್ರಾನಿಕ್ ಅಸಿಸ್ಟ್ ಸೌಲಭ್ಯಗಳಿವೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಇನ್ನು ಹೊಸ ದರ ಪಟ್ಟಿಯಲ್ಲಿ ಟ್ರಯಂಫ್ ರಾಕೆಟ್ 3 ಆರ್ ಮತ್ತು ರಾಕೆಟ್ ಜಿಟಿ ಮಾದರಿಗಳು ರೂ.85 ಸಾವಿರದಿಂದ ರೂ.1.05 ಲಕ್ಷ ಹೆಚ್ಚುವರಿ ಬೆಲೆ ಹೊಂದಿದ್ದು, ಪರಿಸ್ಕೃತ ದರ ಪಟ್ಟಿಯಲ್ಲಿ ರಾಕೆಟ್ 3 ಆರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.19.35 ಲಕ್ಷ ಮತ್ತು ರಾಕೆಟ್ ಜಿಟಿ ಮಾದರಿಯು ರೂ. 19.95 ಲಕ್ಷ ಬೆಲೆ ಹೊಂದಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಟ್ರಯಂಫ್ ಕಂಪನಿಯು ರಾಕೆಟ್ ಮಾದರಿಯ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪ್ಲರ್ ಬ್ಲ್ಯಾಕ್ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪ್ಲರ್ ಬ್ಲ್ಯಾಕ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ. 20.35 ಲಕ್ಷ ಮತ್ತು ರೂ. 20.95 ಲಕ್ಷ ಬೆಲೆ ಹೊಂದಿವೆ.

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಟ್ರಯಂಫ್ ರಾಕೆಟ್ 3 ಆರ್ ಬ್ಲ್ಯಾಕ್ ಮತ್ತು ರಾಕೆಟ್ 3 ಜಿಟಿ ಟ್ರಿಪ್ಲಲ್ ಬ್ಲ್ಯಾಕ್‌ ಬೈಕ್‌ಗಳಲ್ಲಿ 2,458 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲೀಪ್ ಅಸಿಸ್ಟೆಡ್ ಕ್ಲಚ್ ಸಹಾಯದೊಂದಿಗೆ 165 ಬಿಹೆಚ್‍ಪಿ, 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ಟ್ರೀಟ್ ಟ್ರಿಪ್ಪಲ್ ಆರ್ ಮತ್ತು ರಾಕೆಟ್ 3 ಜಿಟಿ ಬೈಕ್ ಬೆಲೆಗಳಲ್ಲಿ ರೂ.1.05 ಲಕ್ಷದ ತನಕ ಬೆಲೆ ಹೆಚ್ಚಳ

ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ ಮತ್ತು ಸಂಪೂರ್ಣ ಕಾನ್ಫಿಗರ್ ಮಾಡಬಹುದಾದ ರೈಡರ್ ಮೋಡ್‌ಗಳನ್ನು ಹೊಂದಿದ್ದು, ಬೃಹತ್ ಗಾತ್ರದ ಎಂಜಿನ್‍‍ನ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಅಲ್ಯುಮಿನಿಯಂ ಚಾಸೀಸ್ ನೀಡಲಾಗುತ್ತಿದೆ.

Most Read Articles

Kannada
English summary
Triumph Street Triple R & Rocket 3 Models Prices Hiked. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X