ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Yamaha ತನ್ನ ಹೊಸ MT-15 MotoGP Edition ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ Yamaha MT 15 MotoGP Edition ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.48 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಹೊಸ Yamaha MT 15 MotoGP Edition ಸ್ಟ್ಯಾಂಡರ್ಡ್ ಮಾದರಿಗಿಂತ ಎಂಟಿ-15 ಗಿಂತ ಸುಮಾರು ರೂ.1,400 ರಷ್ಟು ದುಬಾರಿಯಾಗಿದೆ. ಇನ್ನು ಹೊಸ Yamaha MT 15 MotoGP Edition ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ. 2,000 ಟೋಕನ್ ಮೊತ್ತ ಪಾವತಿಸಿ ಆನ್‌ಲೈನ್‌ನಲ್ಲಿ ಅಥವಾ ಡೀಲರ್‌ಶಿಪ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ Yamaha MT 15 MotoGP Edition ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳಲ್ಲಿ ಮಾನ್ಸ್ಟರ್ ಎನರ್ಜಿ ಗ್ರಾಫಿಕ್ಸ್ ಸಹಿ ಹೊಂದಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಮೋಟೋ ಜಿಪಿ ಬ್ರಾಂನಿಂಗ್ ಅನ್ನು ಇಂಧನ ಟ್ಯಾಂಕ್ ಕವಚಗಳು, ಸೈಡ್ ಪ್ಯಾನಲ್‌ಗಳು ಮತ್ತು ಇಂಧನ ಟ್ಯಾಂಕ್‌ನಲ್ಲಿ ಸೇರಿಸಲಾಗಿದೆ. ಪ್ರಮುಖ ಯಮಹಾ ಲೋಗೋವನ್ನು ಗೋಲ್ಡನ್ ಬಣ್ಣದಲ್ಲಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಬೈಕಿನಂತೆಯೇ ಕಾಣುತ್ತದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಹೊಸ ರೂಪಾಂತರವು ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಗ್ರಾಫಿಕ್ಸ್‌ನೊಂದಿಗೆ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

Yamaha MT 15 MotoGP Edition ನಲ್ಲಿ ಸ್ಟ್ಯಾಂಡರ್ಡ್ ಎಂಟಿ-15 ಬೈಕಿನಲ್ಲಿರುವ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 18.5 ಬಿ‍‍ಹೆಚ್‍‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಇದರೊಂದಿಗೆ ರೇಡಿಯೇಟರ್ ಗಾರ್ಡ್‌ಗಳೊಂದಿಗೆ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

Yamaha MT 15 MotoGP Edition ಮಾದರಿಯ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಗೋಲ್ಡನ್ ಬಣ್ಣಗಳ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಅಲ್ಯೂಮಿನಿಯಂ ಸ್ವಿಂಗಾರ್ಮ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಹೊಸ Yamaha MT 15 MotoGP Edition ಬೈಕಿನಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಎ ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

Yamaha ಕಂಪನಿಯು ಸ್ಟ್ಯಾಂಡರ್ಡ್ ಎಂಟಿ-15 ಬೈಕ್ ಅನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಿತು. ಈ ಯಮಹಾ ಎಂಟಿ-15 ಬೈಕ್ ಬಿಡುಗಡೆಯಾದ ಮೊದಲ ತಿಂಗಳಲ್ಲಿ 5,203 ಯುನಿಟ್ ಗಳು ಮಾರಾಟವಾಗಿತ್ತು.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಇನ್ನು Yamaha ಕಂಪನಿಯು ತನ್ನ ಇತರ ಹೊಸ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. Yamaha ಕಂಪನಿಯು ವೈಜೆಡ್ಎಫ್-ಆರ್3 ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ಹೊಸ ಯಮಹಾ ಆರ್3 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟ್ ನಡೆಸುವಾಗ ಯಮಹಾ ಆರ್15 ವಿ4 ಮಾದರಿಯಾಗಿರಬಹುದು ಎಂದು ವರದಿಯಾಗಿತ್ತು.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಆದರೆ ನಂತರ ಇದು Yamaha ಆರ್3 ಬೈಕ್ ಎಂಬ ಮಾಹಿತಿ ಬಹಿರಂಗವಾಯ್ತು. ಟೆಸ್ಟಿಂಗ್ ವೇಳೆ ಈ ಹೊಸ ಯಮಹಾ ಆರ್3 ಬೈಕ್ ಸೆಂಟ್ರಲ್ ನಲ್ಲಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿತ್ತು. ಈ ಹೊಸ ಯಮಹಾ ಆರ್3 ಬೈಕ್ ಹಿಂದಿನ ಬಿಎಸ್4 ಮಾದರಿಗೆ ಹೋಲುತ್ತದೆ. ಈ ಯಮಹಾ ಆರ್3 ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ವಿನ್ಯಾಸದ ಹೊರತಾಗಿ, ಬಿಎಸ್6 ಆರ್3 ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಐಎಂಯು ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಹೊಸ Yamaha MT-15 MotoGP Edition ಬಿಡುಗಡೆ

ಇನ್ನು ಆರ್3 ಬೈಕ್ ಟ್ರ್ಯಾಕ್ಷನ್ ಕಂಟ್ರೋಲ್ ಅಥವಾ ಪವರ್ ಮೋಡ್‌ಗಳಂತಹ ವೈಶಿಷ್ಟ್ಯಗಳನ್ನು ಕಳೆದುಕೊಳ್ಳಬಹುದು. 2021ರ Yamaha ಆರ್3 ಬೈಕಿನಲ್ಲಿ ಅದೇ 321 ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 10,750 ಆರ್‌ಪಿಎಂನಲ್ಲಿ 41 ಬಿಹೆಚ್‌ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 29 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು Yamaha MT 15 MotoGP Edition ಮಾರಾಟವನ್ನು ಹೆಚ್ಚಿಸಲು ಕಂಪನಿಗೆ ನೆರವಾಗುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha launched new mt 15 motogp edition in india price details
Story first published: Tuesday, August 24, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X