ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ಇದೀಗ ಯಮಹಾ ಕಂಪನಿಯು ಭಾರತದಲ್ಲಿ ವೈಜೆಡ್ಎಫ್-ಆರ್9(YZF-R9) ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಕುತೂಹಲಕಾರಿಯಾಗಿ, ಅದೇ ವೈಜೆಡ್ಎಫ್-ಆರ್9 ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಪ್ರಪಂಚದಾದ್ಯಂತ ಸಾಕಷ್ಟು ಇತರ ದೇಶಗಳಲ್ಲಿಯು ಕೂಡ ಸಲ್ಲಿಸಲಾಗಿದೆ. ಯಮಹಾ ವೈಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಎಂದು ನಿರೀಕ್ಷಿಸಲಾಗಿದೆ, ಇದು ಈ ವರ್ಷದ ಆರಂಭದಲ್ಲಿ ಕೂಲಂಕುಷ ಪರೀಕ್ಷೆಗೆ ಒಳಗಾಯಿತು. 889 ಸಿಸಿ ಲಿಕ್ವಿಡ್-ಕೂಲ್ಡ್, ಇನ್‌ಲೈನ್-3 ಎಂಜಿನ್‌ ಅನ್ನು ಒಳಗೊಂಡಿದೆ. ಈ ಎಂಜಿನ್ 119 ಬಿಹೆಚ್‍ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್ ಮೂಲಕ ನಿರ್ವಹಿಸಲಾಗುತ್ತದೆ, ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಆಯ್ಕೆಯ ಕ್ವಿಕ್‌ಶಿಫ್ಟರ್‌ನೊಂದಿಗೆ ಅಳವಡಿಸಲಾಗಿದೆ.ವಿನ್ಯಾಸಕ್ಕೆ ಸಂಬಂಧಿಸಿದಂತೆ, ಮುಂಬರುವ ವೈಜೆಡ್ಎಫ್-ಆರ್9 ಯಮಹಾ ಆರ್7 ಅನ್ನು ಹೋಲುತ್ತದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಈ ಹೊಸ ಎಲ್ಇಡಿ ಡಿಆರ್ಎಲ್ ಗಳು ಮತ್ತು ಪ್ರೊಜೆಕ್ಟರ್ ಲ್ಯಾಂಪ್(ಗಳು) ಜೊತೆಗೆ ಹರಿತವಾದ ಫ್ರಂಟ್ ಫೇರಿಂಗ್ ಮತ್ತು ಏರೋಡೈನಾಮಿಕ್ ವೈಸರ್ ಜೊತೆಗೆ ಶಾರ್ಪ್ ಮುಂಭಾಗದ ಫಾಸಿಕವನ್ನು ನಾವು ನಿರೀಕ್ಷಿಸುತ್ತೇವೆ. ಟೈಲ್ ವಿಭಾಗವು ತೀಕ್ಷ್ಣವಾಗಿರಬಹುದು, ಕೊನೆಯಲ್ಲಿ LED ಟೈಲ್‌ಲೈಟ್ ಇರುತ್ತದೆ

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಸಹಜವಾಗಿ, ಹ್ಯಾಂಡಲ್‌ಬಾರ್‌ಗಳು ಕಡಿಮೆ-ಸೆಟ್ ಆಗಿರುತ್ತವೆ ಮತ್ತು ಫುಟ್‌ಪೆಗ್‌ಗಳು ಹಿಂಭಾಗದಲ್ಲಿ ಹೊಂದಿಸಲ್ಪಡುತ್ತವೆ. ಬೈಕು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಸಹ ಪಡೆಯುತ್ತದೆ. ಈ ಬೈಕಿನಲ್ಲಿ ಎಲ್‌ಇಡಿ ಲೈಟಿಂಗ್ ಸಿಸ್ಟಂ, ಆರು-ಆಕ್ಸಿಸ್ inertial measurement unit (IMU), ಟ್ರ್ಯಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ಸ್ಲೈಡ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಯಮಹಾ ವೈಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದು ಪ್ರೀಮಿಯಂ ಓಹ್ಲಿನ್ಸ್ ಸಸ್ಪೆಂಕ್ಷನ್ ಯುನಿಟ್ ಹೊಂದಿದ್ದು, ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇನ್ನು ಈ ಬೈಕಿನ ಫ್ರೇಮ್ MT-09 ನಂತೆಯೇ ಇರುತ್ತದೆ,

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ನವೆಂಬರ್ 23 ರಿಂದ ನವೆಂಬರ್ 28 ರವರೆಗೆ ಇಟಲಿಯ ಮಿಲನ್‌ನಲ್ಲಿ ನಡೆಯಲಿರುವ 2021 EICMA ಪ್ರದರ್ಶನದಲ್ಲಿ ಯಮಹಾ ಮುಂಬರುವ ಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಕಾನ್ಸೆಪ್ಟ್ ರೂಪದಲ್ಲಿ ಪ್ರದರ್ಶಿಸಬಹುದು. ಉತ್ಪಾದನಾ ಆವೃತ್ತಿಯು ನಂತರ ಪ್ರಾರಂಭವಾಗುವ ನಿರೀಕ್ಷೆಯಿದೆ, ಬಹುಶಃ 2022ರಲ್ಲಿ ಬಹಿರಂಗಪಡಿಸಬಹುದು.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಇನ್ನು ಯಮಹಾ ಕಂಪನಿಯು ತನ್ನ ಬಹುನಿರೀಕ್ಷಿತ ವೈಜೆಡ್ಎಫ್-ಆರ್7 ಬೈಕನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತು. ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಯಮಹಾ ಕಂಪನಿಯು ತನ್ನ ಪೋರ್ಟ್ಫೋಲಿಯೊದಲ್ಲಿದ್ದ ಜಾಗತಿಕವಾಗಿ ಮೆಚ್ಚುಗೆ ಪಡೆದ ವೈಜೆಡ್ಎಫ್-ಆರ್6 ಬೈಕನ್ನು ಬದಲಾಯಿಸಿ ವೈಜೆಡ್ಎಫ್-ಆರ್7 ಮಾದರಿಯನ್ನು ಪರಿಚಯಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕ್ ಗಳಲ್ಲಿ ಒಂದಾಗಿದೆ. ಈ 2022ರ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನ ವಿನ್ಯಾಸವು ವೈಜೆಡ್ಆರ್-ಎಂ1 ಮೋಟೋ ಜಿಪಿ ಮಾದರಿಯಿಂದ ಸ್ಫೂರ್ತಿ ಪಡೆದಿದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಇನ್ನು ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಫ್ರಂಟ್ ಟ್ವಿನ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದ್ದು, ಇದು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಬೈಕಿನ ವಿಂಡ್‌ಸ್ಕ್ರೀನ್ ವೈಜೆಡ್ಎಫ್-ಆರ್6 ಮಾದರಿಗಿಂತ ಅಗಲ ಮತ್ತು ಎತ್ತರವಾಗಿದೆ.ಸೈಡ್ ಫೇರಿಂಗ್‌ನಲ್ಲಿನ 'ಆರ್7' ಬ್ಯಾಡ್ಜ್‌ಗಳು, ಸೆಂಟ್ರಲ್ ರಾಮ್ ಏರ್-ಇಂಟೆಕ್, ಫ್ಯೂಯಲ್ ಟ್ಯಾಂಕ್, ಕ್ಲಿಪ್-ಆನ್ ಹ್ಯಾಂಡಲ್‌ ಬಾರ್ ಗಳು, ಸ್ಪ್ಲಿಟ್ ಸೀಟ್, ರಿಯರ್ ಸೆಟ್ ಫುಟ್‌ಪೆಗ್ಸ್, ಟ್ಯಾಪರ್ಡ್ ರಿಯರ್ ಸೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಹೊಸದಾಗಿ ಇದರ ವಿನ್ಯಾಸದ ಕೆಲವು ಮುಖ್ಯಾಂಶಗಳು ಸೇರಿವೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಂಟಿ-07 ಮಾದರಿಯಿಂದ ಎರವಲು 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಇದು ಹೊಸ ಇಯುಸಿ (ಎಂಜಿನ್ ನಿಯಂತ್ರಣ ಘಟಕ) ಜೊತೆಗೆ ಖೋಟಾ ಅಲ್ಯೂಮಿನಿಯಂ ಪಿಸ್ಟನ್‌ಗಳನ್ನು ಹೊಂದಿದ್ದು, ಇದರ ಲಿಂಡರ್‌ಗಳನ್ನು ಕ್ರ್ಯಾನ್‌ಕೇಸ್‌ನೊಂದಿಗೆ ಸಂಯೋಜಿಸಲಾಗಿದೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 73.4 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಈ ಎಂಜಿನ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಫಂಕ್ಷನ್‌ನೊಂದಿಗೆ ಬರುತ್ತದೆ. ಇದರೊಂದಿಗೆ ಕ್ವಿಕ್‌ಶಿಫ್ಟರ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಇನ್ನು ಈ ಹೊಸ ಬೈಕಿನಲ್ಲಿ ಡಿಜಿಟಲ್ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.ಹ್ಯಾಂಡಲ್‌ಬಾರ್‌ನಲ್ಲಿ ಇರಿಸಲಾಗಿರುವ ಹೊಸ ಸ್ವಿಚ್‌ಗಿಯರ್ ಅನ್ನು ಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಕೇವಲ ಡ್ಯುಯಲ್-ಚಾನೆಲ್ ಎಬಿಎಸ್‌ಗೆ ಸೀಮಿತವಾಗಿದೆ. ಇನ್ನು ಟ್ರ್ಯಾಕ್ಷನ್ ಕಂಟ್ರೋಲ್ ಅಥವಾ ಕ್ರೂಸ್ ಕಂಟ್ರೋಲ್ ನಂತರ ಯಾವುದೇ ರೈಡರ್ ಅಸಿಸ್ಟ್ ಗಳನ್ನು ಹೊಂದಿರುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಭಾರತದಲ್ಲಿ YZF-R9 ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ Yamaha

ಇನ್ನು ಯಮಹಾ ನಿಜವಾಗಿಯೂ ವೈಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ತಂದರೆ, ಅದು CBU ಮಾರ್ಗದಲ್ಲಿ ತರಬಹುದು. ಹೀಗಾಗಿ, ಬೆಲೆಯು ದುಬಾರಿಯಾಗಿರುತ್ತದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ,13 ಲಕ್ಷದಿಂದ ರೂ.15 ಲಕ್ಷದವರೆಗೂ ಇರಬಹುದು.

Most Read Articles

Kannada
Read more on ಯಮಹಾ yamaha
English summary
Yamaha motorcycles yzf r9 name trademarked in india details
Story first published: Tuesday, November 9, 2021, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X