ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಯಮಹಾ (Yamaha) ಕಂಪನಿಯು ಇತ್ತೀಚೆಗೆ ಅಪ್ ಡೇಟ್ ಮಾಡಲಾದ R15 YZF V4 ಹಾಗೂ R15 M ಬೈಕ್ ಗಳನ್ನು ಬಿಡುಗಡೆಗೊಳಿಸಿದೆ. ಈ ಬೈಕ್'ಗಳು ಯು‌ಎಸ್‌ಡಿ ಫೋರ್ಕ್‌, ಕ್ವಿಕ್ ಗೇರ್‌ಬಾಕ್ಸ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಕನೆಕ್ಟಿವಿಟಿ ಟೆಕ್ನಾಲಜಿ ಹಾಗೂ ಹಳೆಯ ತಲೆಮಾರಿನ V3 ಮಾದರಿಗಿಂತಲೂ ಉತ್ತಮವಾದ ಹೊಸ ಬಣ್ಣದ ಆಯ್ಕೆಗಳನ್ನು ಹೊಂದಿವೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಈ ಅಪ್ ಡೇಟ್ ಗಳನ್ನು ಮಾಡಲಾಗಿದ್ದರೂ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿಲ್ಲ. ಯಮಹಾ R 15 ಬೈಕುಗಳು ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿವೆ. ಭಾರತದಲ್ಲಿಯೂ R 15 ಬೈಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಹಿನ್ನೆಲೆಯಲ್ಲಿ ಯಮಹಾ ಕಂಪನಿಯು R 15 ಸರಣಿಯಲ್ಲಿ R15 S ಎಂಬ ಹೊಸ ಬೈಕ್ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಗಳಾಗಿವೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಯಮಹಾ ಕಂಪನಿಯು ಈಗಾಗಲೇ R15 S ಹೆಸರನ್ನು ನೋಂದಾಯಿಸಿದೆ. ಲಭ್ಯ ಮಾಹಿತಿಗಳ ಪ್ರಕಾರ, R15 S ಬೈಕ್ ಅನ್ನು ಮಾರುಕಟ್ಟೆಯಲ್ಲಿರುವ R 15 ಬೈಕಿಗಿಂತ ಕಡಿಮೆ ಬೆಲೆಗೆ ಬಿಡುಗಡೆಗೊಳಿಸಲಾಗುವುದು. ಈ ಮೂಲಕ ಯಮಹಾ ಕಂಪನಿಯು R 15 ಬೈಕ್ ಎಲ್ಲಾ ಗ್ರಾಹಕರಿಗೂ ತಲುಪಿಸಲು ಮುಂದಾಗಿದೆ. R 15 ಬೈಕಿನ ನೋಟವು ಅದ್ಭುತವಾಗಿರುವುದರಿಂದ, R15 S ಮಾದರಿಯಲ್ಲಿ ಯಮಹಾ ಕಂಪನಿಯು ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿಲ್ಲ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಆದರೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗಿರುವುದರಿಂದ ಯಮಹಾ ಕಂಪನಿಯು ಈ ಬೈಕಿನಲ್ಲಿ ಕೆಲವು ಸುಧಾರಿತ ಫೀಚರ್ ಗಳನ್ನು ತೆಗೆದುಹಾಕಲಿದೆ. ಯಮಹಾ ಕಂಪನಿಯು ಹೊಸ R15 S ಬೈಕ್ ಅನ್ನು R15 V3 ಬೈಕಿನ ರಿ ಬ್ರಾಂಡ್ ಆವೃತ್ತಿಯಾಗಿ ಬಿಡುಗಡೆಗೊಳಿಸಲು ಮುಂದಾಗಿದೆ. R15 V2 ಬೈಕಿನ ವಿನ್ಯಾಸದಲ್ಲಿ ಬಳಸಲಾದ ಸೂತ್ರವನ್ನೇ R15 S ಬೈಕಿನ ವಿನ್ಯಾಸದಲ್ಲಿಯೂ ಬಳಸಲಾಗುವುದು.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಯಮಹಾ ಆರ್15 ವಿ2 ಬೈಕ್ ಅನ್ನು ಹೆಚ್ಚಿನ ಪ್ರಮಾಣದ ಅಲಂಕಾರವಿಲ್ಲದೆ ಬಿಡುಗಡೆಗೊಳಿಸಿರುವುದು ವಿಶೇಷ. ಈ ಸೂತ್ರವು ಭಾರತದಲ್ಲಿ ಹೆಚ್ಚು ಯಶಸ್ವಿಯಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ಸುಧಾರಿತ ಸೌಲಭ್ಯಗಳಿಗಿಂತ ಸ್ಟೈಲಿಶ್ ಬೈಕ್‌ಗಳನ್ನು ಖರೀದಿಸಲು ಬಯಸುವವರೇ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ. 155 ಸಿಸಿ ಎಂಜಿನ್ ಹೊಂದಿದ್ದರೂ, R 15 ಬೈಕ್ ಅನ್ನು ಅತ್ಯಂತ ದುಬಾರಿ ಬೈಕ್ ಎಂದು ಪರಿಗಣಿಸಲಾಗುತ್ತದೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಈಗ ಬಿಡುಗಡೆಯಾಗಲಿರುವ ಅಗ್ಗದ ಬೆಲೆಯ R 15 ಬೈಕ್ ಆರ್ಥಿಕವಾಗಿ ಹಿಂದುಳಿದ ಗ್ರಾಹಕರನ್ನೂ ತನ್ನತ್ತ ಆಕರ್ಷಿಸುವ ಸಾಧ್ಯತೆಗಳಿವೆ. ಯಮಹಾ ಕಂಪನಿಯು ಹೊಸ ಬೈಕಿನಲ್ಲಿ ಹೊಸ ವಿನ್ಯಾಸ, ಯುಎಸ್‌ಡಿ ಫೋರ್ಕ್‌, ಹೊಸ ಬಣ್ಣ, ಗ್ರಾಫಿಕ್ಸ್ ಹಾಗೂ ಇನ್ನಿತರ ಕಾಸ್ಮೆಟಿಕ್ ಅಪ್ ಡೇಟ್ ಗಳನ್ನು ನೀಡಲಿದೆ. ಬೈಕಿನ ಬೆಲೆಯನ್ನು ಕಡಿಮೆ ಮಾಡಲು ಕ್ವಿಕ್ ಗೇರ್ ಶಿಫ್ಟ್ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಕೆಲವು ಫೀಚರ್ ಗಳನ್ನು ತೆಗೆದುಹಾಕಬಹುದು.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

R15 S ಬೈಕ್, R15 V3 ಬೈಕಿನಲ್ಲಿರುವಂತಹ ಎಂಜಿನ್ ಹೊಂದಿರಲಿದೆ. ಹೊಸ ಬೈಕ್ 155 ಸಿಸಿ, ಎಸ್‌ಒಹೆಚ್‌ಸಿ, ಲಿಕ್ವಿಡ್-ಕೂಲ್ಡ್, 4 ವಾಲ್ವ್ ಎಂಜಿನ್‌ ಹೊಂದಿರಲಿದೆ. ಈ ಎಂಜಿನ್ ಗರಿಷ್ಠ 18.6 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸ R 15 ಬೈಕಿನಲ್ಲಿಯೂ ಇದೇ ಎಂಜಿನ್‌ ಅಳವಡಿಸಲಾಗಿದೆ. ಆದರೆ ಈ ಎಂಜಿನ್ ಅನ್ನು 10,000 ಆರ್‌ಪಿ‌ಎಂನಲ್ಲಿ 18.4 ಬಿಹೆಚ್‌ಪಿ ಪವರ್ ಹಾಗೂ 7,500 ಆರ್‌ಪಿ‌ಎಂನಲ್ಲಿ 14.2 ಎನ್ಎಂ ಟಾರ್ಕ್ ಉತ್ಪಾದಿಸುವಂತೆ ಮಾಡಿಫೈ ಮಾಡಲಾಗಿದೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಹೊಸ R15 V4 ಬೈಕಿನ ಮುಂಭಾಗದ ಯುಎಸ್‌ಡಿ ಫೋರ್ಕ್‌ಗಳು ಬಹುನಿರೀಕ್ಷಿತವಾಗಿವೆ. ಇವುಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಸ್ಟ್ಯಾಂಡರ್ಡ್ ಫೀಚರ್ ಆಗಿ ನೀಡಲಾಗುತ್ತದೆ. ಈಗ ಈ ಫೀಚರ್ ಅನ್ನು R15 ಬೈಕ್‌ ಮೂಲಕ ದೇಶಿಯ ಮಾರುಕಟ್ಟೆಯಲ್ಲಿಯೂ ನೀಡಲಾಗುತ್ತಿದೆ. ಇದರ ಜೊತೆಗೆ ಫ್ರಂಟ್ ಸಸ್ಪೆಂಷನ್ ಅನ್ನು R15 S ಮಾದರಿಯಲ್ಲಿ ನಿರೀಕ್ಷಿಸಬಹುದು.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಯಮಹಾ ಕಂಪನಿಯು ನಾಲ್ಕನೇ ತಲೆಮಾರಿನ R15 ಬೈಕ್ ಅನ್ನು ಸಂಪೂರ್ಣ ಡಿಜಿಟಲ್ ಎಲ್‌ಸಿ‌ಡಿ ಮೀಟರ್ ಕನ್ಸೋಲ್‌ನೊಂದಿಗೆ ಪರಿಚಯಿಸಿದೆ. ಇದು ಸಂಪರ್ಕ ಆಯ್ಕೆ, ಪಾರ್ಕಿಂಗ್ ಪ್ರದೇಶವನ್ನು ಹುಡುಕುವುದು, ಅಲಾರಂಗಳನ್ನು ಸರಿಪಡಿಸುವುದು, ಇಂಧನ ಬಳಕೆಯ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಶಿಫಾರಸು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಶೀಘ್ರದಲ್ಲಿಯೇ ಲಘು ವಿಮಾನವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಯಮಹಾ ಕಂಪನಿಯು ವಿಮಾನ ತಯಾರಕ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಯಮಹಾ ಕಂಪನಿಯು ಜಪಾನ್ ಮೂಲದ ವಿಮಾನಯಾನ ಕಂಪನಿಯಾದ ಶಿನ್ಮೆವಾ ಜೊತೆ ಮೈತ್ರಿ ಮಾಡಿಕೊಂಡಿದೆ. ಎರಡು ಕಂಪನಿಗಳ ನಡುವಿನ ಮೈತ್ರಿ ಜೂನ್ 29ರಿಂದ ಜಾರಿಗೆ ಬರಲಿದೆ ಎಂದು ಯಮಹಾ ಕಂಪನಿ ಘೋಷಿಸಿದೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾದ ಯಮಹಾ, ಈಗ ವಿಮಾನ ಉತ್ಪಾದನೆಯಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಲು ಮುಂದಾಗಿದೆ. ಯಮಹಾ ಕಂಪನಿಯು ವಾಯುಯಾನ ಉದ್ಯಮಕ್ಕೆ ಕಾಲಿಡುತ್ತಿರುವುದು ಇದೇ ಮೊದಲಲ್ಲ. ಯಮಹಾ ಕಂಪನಿಯು ಈಗಾಗಲೇ ಹೆಲಿಕಾಪ್ಟರ್‌ ಹಾಗೂ ವಿಮಾನಗಳಿಗಾಗಿ ಎಂಜಿನ್‌ಗಳ ಉತ್ಪಾದನೆಯಲ್ಲಿ ತೊಡಗಿದೆ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಈಗ ಮಾಡಿಕೊಂಡಿರುವ ಮೈತ್ರಿಯಲ್ಲೂ ಸಹ ಯಮಹಾ ಕಂಪನಿಯು ಎಂಜಿನ್ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಯಮಹಾ ಕಂಪನಿಯು ಲಘು ವಿಮಾನಗಳಿಗಾಗಿ ಸಣ್ಣ ಪ್ಯಾರಾಲಲ್ ಟ್ವಿನ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಶಿನ್ಮೆವಾ ಕಂಪನಿಯು ಲಘು ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸಲಿದೆ. ಕಂಪನಿಯು ಈ ಹಿಂದೆ ಹಾರುವ ಹಡಗುಗಳನ್ನು ಉತ್ಪಾದಿಸಿತ್ತು ಎಂಬುದು ಗಮನಾರ್ಹ.

ಅಗ್ಗದ ಬೆಲೆಯ R 15 ಬೈಕ್ ಬಿಡುಗಡೆಗೊಳಿಸಲಿದೆ Yamaha

ಶಿನ್ಮೆವಾ ಈಗ ಯಮಹಾ ಸಹಭಾಗಿತ್ವದಲ್ಲಿ ಲಘು ಕಮರ್ಷಿಯಲ್ ವಿಮಾನಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ಯಮಹಾ ಕಂಪನಿಯು 1990ರ ದಶಕದಲ್ಲಿಯೇ ವಿಮಾನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿತು ಎಂಬುದು ಗಮನಾರ್ಹ. ಕೃಷಿ ಕೆಲಸಗಳಿಗೆ ನೆರವಾಗಲು ಆರ್-ಮ್ಯಾಕ್ಸ್ ಹೆಲಿಕಾಪ್ಟರ್ ಪರಿಚಯಿಸುವ ಮೂಲಕ ಯಮಹಾ ಕಂಪನಿಯು ವಾಯುಯಾನ ಉದ್ಯಮದಲ್ಲಿ ತನ್ನ ಛಾಪು ಮೂಡಿಸಿತು.

Most Read Articles

Kannada
Read more on ಯಮಹಾ yamaha
English summary
Yamaha to launch cheaper version of r15 bike details
Story first published: Tuesday, November 2, 2021, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X