Just In
- 37 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ನೀಡುವ ಹೊಸ ಎಥರ್ 450ಎಕ್ಸ್ ಮತ್ತು 450 ಪ್ಲಸ್ ವಿಶೇಷತೆಗಳಿವು..
ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ನಿರಂತವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಇದೀಗ ತನ್ನ ಜನಪ್ರಿಯ ಮಾದರಿಗಳಾದ 450ಎಕ್ಸ್ ಮತ್ತು 450 ಪ್ಲಸ್ ಮಾದರಿಗಳನ್ನು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದೆ.

ಹೊಸ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌ಗಳು ನವೀಕೃತ ಬ್ಯಾಟರಿ ಪ್ಯಾಕ್ ಜೊತೆ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಇದೀಗ ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿವೆ. ಹೊಸ ಫೀಚರ್ಸ್‌ಗಳ ಹೊರತಾಗಿಯೂ ಸುಧಾರಿತ ತಂತ್ರಜ್ಞಾನ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಈ ಹಿಂದಿನ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಮುಂದುವರಿಸಿದ್ದು, ವಿಸ್ತರಿತ ಬ್ಯಾಟರಿ ಪ್ಯಾಕ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ನಮ್ಮ ಬೆಂಗಳೂರಿನಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯಾದ 450 ಪ್ಲಸ್ ಮಾದರಿಯು ರೂ. 1,34,147 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯಾದ 450ಎಕ್ಸ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 1,55,657 ಬೆಲೆ ಹೊಂದಿದೆ.

ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಇವಿ ಸಬ್ಸಡಿಯಿಂದಾಗಿ ಹೊಸ ಸ್ಕೂಟರ್ ಬೆಲೆಯು ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಏರಿಳಿತ ಹೊಂದಿರಲಿದ್ದು, ಇತರೆ ರಾಜ್ಯಗಳಲ್ಲಿನ ಸಬ್ಸಡಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹೊಸ ಮಾದರಿಗಳು ಕನಿಷ್ಠ ಪ್ರಮಾಣದ ಸಬ್ಸಡಿಯೊಂದಿಗೆ ತುಸು ದುಬಾರಿ ಎನ್ನಿಸಲಿವೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ನವೀಕೃತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌ಗಳಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.7kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, 6.2kW ಮೋಟಾರ್ ಮೂಲಕ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಇದೀಗ ಹೊಸ ಸ್ಕೂಟರ್‌ಗಳು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಸುಧಾರಿತ ಬ್ಯಾಟರಿ ಜೋಡಣೆ ನಂತರ ಹೊಸ ಸ್ಕೂಟರ್‌ಗಳ ತೂಕದಲ್ಲಿ ಈ ಮೊದಲಿಗಿಂತಲೂ ಇದೀಗ 4 ಕೆ.ಜಿಯಷ್ಟು ಹೆಚ್ಚಳವಾಗಿದ್ದು, ಪ್ರಮುಖ ನಾಲ್ಕು ರೈಡ್ ಮೋಡ್‌ಗಳೊಂದಿಗೆ ಇಕೋ ಮೋಡ್‌ನಲ್ಲಿ ಕನಿಷ್ಠ 105 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಪಡೆದುಕೊಳ್ಳಬಹುದಾಗಿ ಕಂಪನಿಯು ಭರವಸೆ ನೀಡಿದೆ.

ಟೈರ್ ಆಯ್ಕೆಯಲ್ಲಿ ಬದಲಾವಣೆ
ಎಥರ್ ಕಂಪನಿಯು ಹೊಸ ಸ್ಕೂಟರ್‌ಗಳಲ್ಲಿ ಈ ಬಾರಿ ಎಂಆರ್‌ಎಫ್ ಜೊತೆಗೆ ನಿರ್ಮಾಣ ಮಾಡಲಾದ ಹೊಸ ತಂತ್ರಜ್ಞಾನ ಪ್ರೇರಿತ ಟೈರ್ ಜೋಡಣೆ ಮಾಡಿದ್ದು, ಹೊಸ ಎಂಆರ್‌ಎಫ್ ಟೈರ್‌ನಿಂದ ಹೊಸ ಸ್ಕೂಟರ್‌ಗಳ ಶೇ.22ರಷ್ಟು ಆಕ್ಸಿಲೇಷನ್, ಕಾರ್ನರ್ ರೈಡ್ ಮತ್ತು ಬ್ರೇಕಿಂಗ್ ಫರ್ಪಾಮೆನ್ಸ್ ಸಾಕಷ್ಟು ಸುಧಾರಣೆಗೊಂಡಿದೆ.

ಜೊತೆಗೆ ಹೊಸ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಏರ್ ಪ್ರೆಷರ್ ಮಾಹಿತಿಯನ್ನು ತಿಳಿಯಲು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ(ಟಿಪಿಎಂಎಸ್) ನೊಂದಿಗೆ ಕ್ಯಾಸ್ಟ್ ಅಲ್ಯೂನಿಯಂನಿಂದ ನಿರ್ಮಿಸಲಾದ ವಿಸ್ತರಿತ ಸೈಡ್ ಸ್ಟೆಪ್ ಮತ್ತು ಹೊಸ ವಿನ್ಯಾಸದ ರಿಯರ್ ವ್ಯೂ ಮಿರರ್ ಜೋಡಣೆ ಮಾಡಿದೆ.

ಸುಧಾರಣೆಗೊಂಡ ಕನೆಕ್ಟೆಡ್ ಫೀಚರ್ಸ್
ಹೊಸ ಇವಿ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಣೆಗೊಳಿಸಲು ಎಥರ್ ಕಂಪನಿಯು ಹೆಚ್ಚುವರಿ ಸ್ಟೋರೆಜ್ ನೀಡಲು 2 ಜಿಬಿ ರ‍್ಯಾಮ್ ಜೋಡಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಹೊಸ ಮಾದರಿಗಳಲ್ಲಿನ ಹಲವಾರು ಹೊಸ ಫೀಚರ್ಸ್‌ಗಳನ್ನು ಓವರ್-ದ-ಏರ್ ಅಪ್‌ಡೇಟ್ ಮೂಲಕ ಒಂದೊಂದಾಗಿ ಅನ್‌ಲಾಕ್ ಮಾಡಲಿದೆ.

ಬುಕಿಂಗ್ ಪ್ರಕ್ರಿಯೆ
ಎಥರ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ ಈಗಾಗಲೇ ಅಧಿಕೃತ ಬುಕಿಂಗ್ ಸ್ವಿಕರಿಸುತ್ತಿದ್ದು, ಬುಕಿಂಗ್ ಮಾಡಲಾದ ಗ್ರಾಹಕರಿಗೆ ಈಗಾಗಲೇ ಹಂತ-ಹಂತವಾಗಿ ಟೆಸ್ಟ್ ರೈಡ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎನ್ನಲಾಗಿದೆ.

ಟೆಸ್ಟ್ ರೈಡ್ ಪ್ರಕ್ರಿಯೆ ನಂತರ ಖರೀದಿಗಾಗಿ ಒಪ್ಪಿಗೆ ಸೂಚಿಸುವ ಗ್ರಾಹಕರಿಗೆ ಈ ತಿಂಗಳಾಂತ್ಯಕ್ಕೆ ಹೊಸ ಸ್ಕೂಟರ್‌ಗಳು ವಿತರಣೆಗೊಳ್ಳಲಿದ್ದು, ಹೊಸ ಮಾದರಿಗಳ ಮೂಲಕ ಕಂಪನಿಯು ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯೊಂದಿಗೆ ಓಲಾ ಎಸ್1 ಪ್ರೊ, ಟಿವಿಎಸ್ ಐಕ್ಯೂಬ್ ವಿಸ್ತರಿತ ರೇಂಜ್ ವರ್ಷನ್‌ಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪ್ರೀಮಿಯಂ ಫೀಚರ್ಸ್‌ನೊಂದಿಗೆ ಹೊಸ ಇವಿ ಸ್ಕೂಟರ್‌ಗಳು ಎಥರ್ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

ವಿಸ್ತರಿತ ಮೈಲೇಜ್ ಪ್ರೇರಿತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್ ಮಾದರಿಗಳು ಪ್ರಸ್ತುತ ಮಾದರಿಗಿಂತ ರೂ. 4 ಸಾವಿರದಿಂದ ರೂ. 5,500 ರಷ್ಟು ದುಬಾರಿಯಾಗಲಿದ್ದು, ಬೆಲೆ ದುಬಾರಿಯಾದರೂ ಹೊಸ ಮಾದರಿಗಳಲ್ಲಿ ಹಲವಾರು ಹೊಸ ಫೀಚರ್ಸ್ ನೀಡುತ್ತಿರುವುದು ಖರೀದಿ ಮೌಲ್ಯ ಹೆಚ್ಚಿಸಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ಪ್ರಮುಖ ನಗರಗಳಿಗೆ ವಿಸ್ತರಿಸುವ ಯೋಜನೆಯಲ್ಲಿದೆ.