ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ತನ್ನ ಇವಿ ವಾಹನ ಉತ್ಪನ್ನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೋಡಣೆ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ವಾಹನಗಳಲ್ಲಿ ಏರ್ ಸಿಸ್ಟಂ ಅನ್ನು ಸರಿಯಾದ ಮಾರ್ಗದಲ್ಲಿ ನಿರ್ವಹಣೆ ಮಾಡಲು ಇತ್ತೀಚೆಗೆ ಪ್ರಮುಖ ಕಾರು ಮತ್ತು ಬೈಕ್ ತಯಾರಕ ಕಂಪನಿಗಳು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದು, ಮೊದಲ ಬಾರಿಗೆ ಎಥರ್ ಎನರ್ಜಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲೂ ಹೊಸ ಸುರಕ್ಷಾ ಸೌಲಭ್ಯವನ್ನು ಪರಿಚಯಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಹೊಸ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಎಥರ್ ಕಂಪನಿಯು ಸ್ಟ್ಯಾಂಡರ್ಡ್ ಆಗಿ ನೀಡದೆ ಆಕ್ಸೆಸರಿಸ್ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ಆಸಕ್ತ ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಸುರಕ್ಷಾ ಸೌಲಭ್ಯವನ್ನು ಹೆಚ್ಚುವರಿ ಪಾವತಿಯೊಂದಿಗೆ ಖರೀದಿಸಬಹುದು.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಹೀಗಾಗಿ ಹೊಸದಾಗಿ ಇವಿ ಸ್ಕೂಟರ್ ಖರೀದಿಸುವ ಮತ್ತು ಈಗಾಗಲೇ ಮಾಲೀಕತ್ವ ಹೊಂದಿರುವ ಗ್ರಾಹಕರು ಕೂಡಾ ಹೊಸ ಸುರಕ್ಷಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ಹೊಸ ಸುರಕ್ಷಾ ಸೌಲಭ್ಯಕ್ಕಾಗಿ ಕಂಪನಿಯು ರೂ. 5 ಸಾವಿರ ನಿಗದಿಪಡಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯವು ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ಚಕ್ರಗಳಲ್ಲಿ ಏರ್ ಪ್ರೆಷರ್ ಲಭ್ಯತೆಯ ನಿಖರ ಮಾಹಿತಿ ನೀಡಲಿದ್ದು, ಏರ್ ಪ್ರೆಷರ್ ಸರಿಯಾದ ಪ್ರಮಾಣದಲ್ಲಿ ಇದ್ದಾಗ ಗ್ರಿನ್ ಇಂಡಿಕೇಟರ್ ಮಾಡಿದರೆ ಕಡಿಮೆ ಮತ್ತು ಹೆಚ್ಚಿನ ಪ್ರೆಷರ್ ಇದ್ದಲ್ಲಿ ಯೆಲ್ಲೊ ಇಂಡಿಕೇಟರ್ ತೋರಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಒಂದು ವೇಳೆ ಏರ್ ಪ್ರೆಷರ್ ಪ್ರಮಾಣವು ಅಗತ್ಯಕ್ಕಿಂತ ಕಡಿಮೆಯಾದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಒತ್ತಡವಿದ್ದಲ್ಲಿ ರೆಡ್ ಇಂಡಿಕೇಟರ್ ತೋರಿಸಲಿದ್ದು, ಈ ಮೂಲಕ ಸುರಕ್ಷಿತ ಸ್ಕೂಟರ್ ಚಾಲನೆಗೆ ಇದು ಸಹಕಾರಿಯಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಇದರೊಂದಿಗೆ ಎಥರ್ ಎನರ್ಜಿ ಕಂಪನಿಯು ತನ್ನ ಇವಿ ಸ್ಕೂಟರ್ ಬಳಕೆದಾರರಿಗೆ ಕಾಲಕಾಲಕ್ಕೆ ಹಲವಾರು ಅಪ್‌ಡೇಟ್‌ಗಳನ್ನು ನೀಡುತ್ತಿದ್ದು, ಕಂಪನಿಯು ಕಳೆದ ಕೆಲ ದಿನಗಳ ಹಿಂದಷ್ಟೇ ಹೊಸ ಇವಿ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಜೊತೆ ಬ್ಯಾಟರಿ ದಕ್ಷತೆಯನ್ನು ಕಾಯ್ದುಕೊಳ್ಳಬಹುದಾದ 'ಸ್ಮಾರ್ಟ್ಇಕೋ' ರೈಡಿಂಗ್ ಮೋಡ್ ಪರಿಚಯಿಸಿತ್ತು.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಹೊಸ ರೈಡಿಂಗ್ ಮೋಡ್ ಉನ್ನತೀಕರಿಸಲು 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾಲೀಕರು ಸರ್ವಿಸ್ ಸೆಂಟರ್‌ಗಳಿಗೆ ಭೇಟಿ ನೀಡದೆ ಓವರ್ ಟು ಏರ್(OTA) ಮೂಕವೇ ಉನ್ನತೀಕರಿಸಿದ 'ಸ್ಮಾರ್ಟ್ಇಕೋ' ರೈಡಿಂಗ್ ಮೋಡ್ ಪರಿಚಯಿಸಿದ್ದು, ಹೊಸ ರೈಡಿಂಗ್ ಮೂಲಕ ಕಂಪನಿಯುಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರದೆ ಬ್ಯಾಟರಿಯ ದೀರ್ಘ ಕಾಲ ಬಾಳಿಕೆಗೆ ಸಹಾಯ ಮಾಡುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಹೊಸ ಸ್ಮಾರ್ಟ್ಇಕೋ ರೈಡಿಂಗ್ ಮೋಡ್ ಸಕ್ರಿಯೆಗೊಳಿಸಲು 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾಲೀಕರು ಕಡ್ಡಾಯವಾಗಿ ಎಥರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಎಥರ್ ಲ್ಯಾಬ್ಸ್ ಸೆಟಿಂಗ್ಸ್ ಆಯ್ಕೆ ಮಾಡುವ ಮೂಲಕ ಸ್ಮಾರ್ಟ್ಇಕೋ ಬಟನ್ ಕ್ಲಿಕ್ ಮಾಡಿ ಹೊಸ ರೈಡಿಂಗ್ ಮೋಡ್ ಪಡೆಯಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಕಂಪನಿಯ ಪ್ರಕಾರ ಹೊಸ ಸ್ಮಾರ್ಟ್ಇಕೋ ಮೋಡ್ ಆಯ್ಕೆಯು ಸಾಮಾನ್ಯ ಇಕೋ ಮತ್ತು ಸ್ಪೋರ್ಟ್ ಮೋಡ್ ನಡುವಿನ ಯೋಗ್ಯ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಅಪೇಕ್ಷಿತ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಹೊಸ ರೈಡಿಂಗ್ ಮೋಡ್ ಮೂಲಕ ಸವಾರಿಯ ಶೈಲಿಯನ್ನು ಆಧರಿಸಿ ಮೈಲೇಜ್ ಪ್ರಮಾಣವನ್ನು ನಿಗದಿ ಮಾಡಿಕೊಳ್ಳಲು ಸಹಾರಿಯಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಇದಲ್ಲದೆ ಕಂಪನಿಯು ಸ್ಕೂಟರಿನ 7-ಇಂಚಿನ ಟಚ್‌ಸ್ಕ್ರೀನ್ ಘಟಕದಲ್ಲಿ ಸ್ಮಾರ್ಟ್ಇಕೋ ಬಟನ್ ಪ್ರದರ್ಶಿಸಲಿದ್ದು, ಪವರ್ ಬಾರ್ ನಿಖರವಾದ ಮಾಹಿತಿ ನೀಡುತ್ತದೆ. ಪೂರಕವಾದ ವಿದ್ಯುತ್ ಲಭ್ಯವಿದ್ದಾಗ ಟಚ್‌ಸ್ಕ್ರೀನ್ ನೀಲಿ ಬಣ್ಣವನ್ನು ಸೂಚಿಸುತ್ತದೆ ಮತ್ತೆ ಪವರ್ ಬಾರ್ ಕೆಂಪು ಬಣ್ಣಕ್ಕೆ ತಿರುಗಿದಾಗ ಅದರಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ ಲಭ್ಯವಿದೆ ಎಂದರ್ಥ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಹೀಗೆ ಕೆಲವು ತಿಂಗಳಿನಿಂದ 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್‌ನಲ್ಲಿ ಹಲವಾರು ಬದಲಾವಣೆ ತಂದಿರುವ ಓಲಾ ಕಂಪನಿಯು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಮತ್ತೆರಡು ಹೊಸ ಇವಿ ವಾಹನ ಉತ್ಪನ್ನಗಳ ಬಿಡುಗಡೆಗೆ ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಉತ್ಪನ್ನಗಳಿಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಪರಿಚಯಿಸಿದ ಎಥರ್ ಎನರ್ಜಿ

ಮುಂದಿನ ಎರಡು ವರ್ಷಗಳಲ್ಲಿ ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, 2025ರ ವೇಳೆಗೆ ಮತ್ತಷ್ಟು ಹೂಡಿಕೆಯೊಂದಿಗೆ ವಾರ್ಷಿಕವಾಗಿ ಒಟ್ಟು 10 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುತ್ತಿದೆ.

Most Read Articles

Kannada
English summary
Ather energy introduced tpms for its electric scooters details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X