ನಮ್ಮ ಬೆಂಗಳೂರಿನಲ್ಲಿ ಮೂರನೇ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ಕರ್ನಾಟಕದಲ್ಲಿ ತನ್ನ ಆರನೇ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ಆರಂಭಿಸಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಈಗಾಗಲೇ ಎರಡು ಮಾರಾಟ ಮಳಿಗೆಗಳನ್ನು ಹೊಂದಿದ್ದು, ಇನ್ನುಳಿದ ಮೂರು ಮಾರಾಟ ಮಳಿಗೆಗಳು ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನೆಲೆಗೊಂಡಿವೆ. ಇದೀಗ ಕಂಪನಿಯು ರಾಜಾಜಿನಗರದ 4ನೇ ಎಂ ಬ್ಲ್ಯಾಕ್‌ನಲ್ಲಿ ಆರನೇ ಶೋರೂಂ ತೆರೆದಿದ್ದು, ವಿನೂತನ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಶೋರೂಂನಲ್ಲಿ ಚಾರ್ಜಿಂಗ್ ನಿಲ್ದಾಣವನ್ನು ಸಹ ಒಳಗೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಹೊಸ ಶೋರೂಂನೊಂದಿಗೆ ಎಥರ್ ಕಂಪನಿಯು ಇದುವರೆಗೆ ದೇಶಾದ್ಯಂತ ಒಟ್ಟು 34 ಮಾರಾಟ ಮಳಿಗೆಗಳನ್ನು ತೆರೆದಂತಾಗಿದ್ದು, ಎಥರ್ ಕಂಪನಿಯು ತನ್ನ ಮಾರಾಟ ಮಳಿಗೆಗಳನ್ನು ವಿಶೇಷವಾಗಿ 'ಎಕ್ಸ್ಪಿರೆನ್ಸ್ ಸೆಂಟರ್' ಹೆಸರಿನಿಂದ ಗುರುತಿಸಿಕೊಂಡಿವೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಎಕ್ಸ್ಪಿರೆನ್ಸ್ ಸೆಂಟರ್‌ಗಳಲ್ಲಿ ಕೇವಲ ವಾಹನ ಖರೀದಿ ಪ್ರಕ್ರಿಯೆ ಮಾತ್ರವಲ್ಲದೆ ಗ್ರಾಹಕರಿಗೆ ಕಂಪನಿಯು ತನ್ನ ಸ್ಕೂಟರ್ ಉತ್ಪನ್ನಗಳ ನಿರ್ಮಾಣ, ಗುಣಮಟ್ಟ ಮತ್ತು ತಂತ್ರಜ್ಞಾನದ ಕುರಿತಾಗಿ ನುರಿತ ಉದ್ಯೋಗಿಗಳಿಂದ ತಿಳುವಳಿಕೆ ನೀಡುತ್ತದೆ. ಹೀಗಾಗಿ ಇದನ್ನು ಅನುಭವ ಕೇಂದ್ರವೆಂದು ಕರೆಯಲಾಗಿದ್ದು, ಕಂಪನಿಯು ಶೀಘ್ರದಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದವಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಹೆಚ್ಚುತ್ತಿರುವ ಇಂಧನ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಮಾರಾಟ ಮಳಿಗೆ ವಿಸ್ತರಣೆಯೊಂದಿಗೆ ಮುಂಬರುವ ಕೆಲ ತಿಂಗಳಿನಲ್ಲಿ ಮತ್ತೆರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು ಹೆಚ್ಚಿದಂತೆ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಸಹ ಹೆಚ್ಚಿಸಲಾಗುತ್ತಿದೆ. ಇವಿ ವಾಹನಗಳ ಮಾರಾಟ ಹೆಚ್ಚಳಕ್ಕೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಇವಿ ಗ್ರಾಹಕರನ್ನು ಸೆಳೆಯಲು ಎಥರ್ ಎನರ್ಜಿ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಬೃಹತ್ ಯೋಜನೆಗೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ರಾಜ್ಯದ ಮೂರು ಪ್ರಮುಖ ವಿದ್ಯುತ್‌ ಸರಬರಾಜು ಕಂಪನಿಗಳನ್ನು ಒಳಗೊಂಡಿರುವ ಎಸ್ಕಾಂ ಜೊತೆಗೆ ಹೊಸ ಸಹಭಾಗಿತ್ವ ಯೋಜನೆ ಘೋಷಣೆ ಮಾಡಿರುವ ಎಥರ್ ಎನರ್ಜಿ ಕಂಪನಿಯು ರಾಜ್ಯಾದ್ಯಂತ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಸ್ಥಾಪನೆಗೊಳ್ಳುವ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಯ ಸಂಪೂರ್ಣ ವೆಚ್ಚ ಮತ್ತ ನಿರ್ವಹಣೆಯನ್ನು ಎಥರ್ ಎನರ್ಜಿ ಕಂಪನಿಯ ವಹಿಸಿಕೊಳ್ಳಲಿದ್ದರೆ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಆಯಕಟ್ಟಿನ ಸ್ಥಳವನ್ನು ಗುರುತಿಸುವುದು ಮತ್ತು ವಿದ್ಯುತ್ ಪೂರೈಕೆಯನ್ನು ಎಸ್ಕಾಂ ಕಂಪನಿ ನಿರ್ವಹಿಸಲಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿರುವ ಎಥರ್ ಕಂಪನಿಯು ಮುಂದಿನ ಜೂನ್ ಕೊನೆಯ ತನಕ ಇವಿ ವಾಹನ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತ ಚಾರ್ಜಿಂಗ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದು, ತ್ವರಿತವಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಇನ್ನು ಎಥರ್ ಎನರ್ಜಿ ಕಂಪನಿಯು ದೇಶಾದ್ಯಂತ ತನ್ನ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಎಥರ್ ಗ್ರಿಡ್ 2.0 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದೆ. ಹೊಸ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಚಾರ್ಜಿಂಗ್ ನಿಲ್ದಾಣಗಳಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಜೊತೆಗೆ ಹೊಸ ಎಥರ್ ಗ್ರಿಡ್ 2.0 ಸೌಲಭ್ಯವು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ಹೊಸ ನೆಟ್‌ವರ್ಕ್ ಅನ್ನು ಅತಿಯಾದ ಮಳೆ, ಬಿಸಿಲಿನ ಪರಿಸ್ಥಿತಿಗಳನ್ನು ಒಡ್ಡಿಕೊಳ್ಳುವ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಮಾಡ್ಯುಲರ್ ವಿನ್ಯಾಸದೊಂದಿಗೆ ರಿಮೋಟ್ ಡಯಾಗ್ನೋಸ್ಟಿಕ್ಸ್‌ ಜೋಡಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಮೂರನೇ ಮಾರಾಟ ಮಳಿಗೆ ಆರಂಭಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಕರ್ನಾಟಕದಲ್ಲಿ ಈಗಾಗಲೇ 58 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳೊಂದಿಗೆ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದು, ಇದೀಗ ಹೊಸ ಸಹಭಾಗಿತ್ವ ಯೋಜನೆಯು ಕಂಪನಿಯ ಭವಿಷ್ಯದ ಯೋಜನೆಗಳಿಗೆ ಮಹತ್ವದ ಹೆಜ್ಜೆಯಾಗಲಿದೆ.

Most Read Articles

Kannada
English summary
Ather energy opens its 3rd retail outlet in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X