ಎಥರ್ ಎನರ್ಜಿಯಿಂದ ಜನವರಿಯಲ್ಲಿ ದೊಡ್ಡ ಘೋಷಣೆ?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಅನೇಕ ಹೊಸ ಕಂಪನಿಗಳು ಸುಧಾರಿತ ವೈಶಿಷ್ಟ್ಯಗಳು ಮತ್ತು ಉತ್ತಮ ಮೈಲೇಜ್ ನೀಡುವ ಹೊಸ ಇವಿಗಳನ್ನು ಬಿಡುಗಡೆಗೊಳಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಅದರ ಭಾಗವಾಗಿ, ಎಥರ್ ಎನರ್ಜಿ (Ather Energy) 2023ಕ್ಕೆ ಕೆಲವು ಪ್ಲ್ಯಾನ್ ಮಾಡಿದೆ.

ಕಂಪನಿಯು ಜನವರಿ 7ರಂದು ಕೆಲವು ದೊಡ್ಡ ಘೋಷಣೆಯನ್ನು ಮಾಡಲಿದೆ. ಮತ್ತೊಂದು ಹೊಸ ಇ-ಸ್ಕೂಟರ್ ಅದರ ಭಾಗವಾಗಬಹುದು ಎಂದು ವರದಿಯಾಗಿದೆ. ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಎಥರ್ ಎನರ್ಜಿ, ಜನವರಿ 7ರಂದು ಕಮ್ಯುನಿಟಿ ಡೇಯನ್ನು ಆಚರಿಸುತ್ತಿದೆ. ಆ ದಿನಕ್ಕೆ ಕಂಪನಿಯು ತನ್ನ ಗ್ರಾಹಕರಿಗೂ ಸಹ ಆಹ್ವಾನ ನೀಡಿದೆ. ಪ್ರಮುಖವಾಗಿ ಕಾರ್ಯಕ್ರಮದ ಭಾಗವಾಗಿ, ಬ್ರ್ಯಾಂಡ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಸದ್ಯ ಮಾರುಕಟ್ಟೆಯಲ್ಲಿರುವ 450Xನ ಹೊಸ ಆವೃತ್ತಿಯನ್ನು ಅನಾವರಣಗೊಳಿಸಬಹುದು.

ಎಥರ್ ಎನರ್ಜಿಯಿಂದ ಜನವರಿಯಲ್ಲಿ ದೊಡ್ಡ ಘೋಷಣೆ?

ಈ ಇವಿ ಸ್ಟಾರ್ಟಪ್ ಎಥರ್ ಎನರ್ಜಿ ಕಳೆದ ಕೆಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುತ್ತಿದೆ. ತನ್ನ ಖರೀದಿದಾರರನ್ನು ಪ್ರಮುಖ ಈವೆಂಟ್‌ಗಳ ಭಾಗವಾಗಿ ಮಾಡುವ ಮೂಲಕ ಸಂಸ್ಥೆ ಬಗ್ಗೆ ಒಳ್ಳೆಯ ಭಾವನೆ ಮೂಡಿಸಲು ಕಂಪನಿ ಪ್ರಯತ್ನಿಸುತ್ತಿದೆ. ಎಥರ್‌ನ ಕಮ್ಯುನಿಟಿ ದಿನದ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೂ, ಆ ಕಾರ್ಯಕ್ರಮದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರದರ್ಶಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಕಂಪನಿಯು 'ಎಥರ್ 450X Gen 3' ಸ್ಕೂಟರ್ ಅನ್ನು ಬಿಡುಗಡೆ ಮಾಡಿ, ಈಗ ಸರಿ ಸುಮಾರು ಆರು ತಿಂಗಳು ಕಳೆದಿವೆ. ಹೊಸ ಎಥರ್ 450X Gen 3 ಅನ್ನು ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಪರಿಚಯಿಸಲಾಯಿತು. ಆದರೆ, ಈ ಸ್ಕೂಟರ್ ಬೆಲೆಯೂ ಹೆಚ್ಚಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಎಸ್1 ಬಿಡುಗಡೆಯೊಂದಿಗೆ, ಮಾರುಕಟ್ಟೆಯ ಈ ವಿಭಾಗದಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ಹಾಗಾಗಿ, ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ನೂತನ ಇ-ಸ್ಕೂಟರ್ ಬಿಡುಗಡೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಕಂಪನಿಯು ಅಗ್ಗದ ಬೆಲೆಯ 450Xನ ನೂತನ ಆವೃತ್ತಿಯನ್ನು ಪ್ರಾರಂಭಿಸಲು ಯೋಜಿಸಿದ್ದು, ಇದನ್ನು ಖಂಡಿತವಾಗಿಯೂ ಗ್ರಾಹಕರ ಇಷ್ಟಪಡುತ್ತಾರೆ ಎನ್ನಲಾಗಿದೆ. ಜನವರಿ 7, 2023 ರಂದು ನಡೆಯುವ ಈವೆಂಟ್‌ನಲ್ಲಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅಲ್ಲದೆ, ತನ್ನ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಎಥರ್ ತನ್ನ ಮಳಿಗೆಗಳನ್ನು ದೇಶದ ವಿವಿಧ ನಗರಗಳಿಗೆ ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಬಹುದು.

ಎಥರ್ ಎನರ್ಜಿ, ಇತ್ತೀಚೆಗೆ ಒಡಿಶಾದಲ್ಲಿ ತನ್ನ ಡೀಲರ್‌ಶಿಪ್ ಅನ್ನು ವಿಸ್ತರಿಸಿದೆ. ಕಂಪನಿಯು ಭುವನೇಶ್ವರ ಮತ್ತು ಕಟಕ್‌ನಲ್ಲಿ ಹೊಸ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ. ಜ್ಯೋತಿ ಮೋಟಾರ್ಸ್ ಸಹಯೋಗದಲ್ಲಿ ಸ್ಥಾಪಿಸಲಾದ ಈ ಔಟ್‌ಲೆಟ್‌ಗಳು, ಟೆಸ್ಟ್ ರೈಡ್‌ ಸೇರಿದಂತೆ ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವವರಿಗೆ ಉತ್ತಮ ಅನುಭವ ನೀಡುತ್ತದೆ. ಅಲ್ಲದೆ, ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೊದಲು ಟೆಸ್ಟ್ ರೈಡ್ ಸ್ಲಾಟ್‌ಗಳನ್ನು ಬುಕ್ ಮಾಡಲು ಬಯಸುವ ಗ್ರಾಹಕರು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗಿದೆ.

ಬ್ರ್ಯಾಂಡ್ ಲೈನ್-ಅಪ್ ಗಮನಿಸಿದಾಗ ಎಥರ್ 450X Gen 3 ಅತ್ಯುತ್ತಮ ಸ್ಕೂಟರ್ ಆಗಿದೆ ಎಂದು ಹೇಳಬಹುದು. ಎಥರ್ 450Xಯನ್ನು ಭಾರತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಮೊದಲ ಸಾಲಿನಲ್ಲಿರಿಸಲು ಕಂಪನಿ ಪ್ರಯತ್ನಿಸುತ್ತಿದ್ದು, ಈ ಸ್ಕೂಟರ್ ಅದರ ಬಲವಾದ ಡೈನಾಮಿಕ್ಸ್ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯಿಂದಾಗಿ ಮಾರುಕಟ್ಟೆಯಲ್ಲಿ ಹಿಟ್ ಆಗಿದೆ. ಹೊಸ 450x Gen 3 ಟಿವಿಎಸ್ iCube, ಓಲಾ Ta1 ಮತ್ತು ಬಜಾಜ್ Chetakನಂತಹ ಇತರೆ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ.

ಇನ್ನು, ಎಲೆಕ್ಟ್ರಿಕ್ ಸ್ಕೂಟರ್‌ನ ಅತ್ಯಾಧುನಿಕ ಆವೃತ್ತಿಯಾಗಿರುವ ಎಥರ್ 450X Gen 3ನ ಕೆಲವು ಪ್ರಮುಖಾಂಶಗಳೆಂದರೇ 6kW PMSM ಪ್ರೊಪಲ್ಷನ್ ಮೋಟಾರ್, 3.7kWh ಲಿಥಿಯಂ-ಐಯಾನ್ ಬ್ಯಾಟರಿ ಇದ್ದು, ರೈಡಿಂಗ್ ಮೋಡ್ ಅನ್ನು ಸವಾರನ ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಲು ನಾಲ್ಕು ರೈಡಿಂಗ್ ಮೋಡ್‌ಗಳಿವೆ. ಈ ವರ್ಷದ ನವೆಂಬರ್‌ನಲ್ಲಿ ಎಥರ್ ದೇಶದಲ್ಲಿ 9,737 ಯುನಿಟ್‌ಗಳ ಮಾರಾಟ ಮಾಡಿ, ದಾಖಲೆ ನಿರ್ಮಿಸಿದ್ದು. ಎಥರ್ 450X ಮಾರುಕಟ್ಟೆಯಲ್ಲಿ ಮಾರಾಟವಾಗುವ ಮೂರನೇ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

Most Read Articles

Kannada
English summary
Big announcement in january from aether energy
Story first published: Thursday, December 29, 2022, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X