Just In
- 2 min ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 42 min ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 1 hr ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 2 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- Movies
ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಟೀಸರ್ಗೆ ಮುಹೂರ್ತ ಫಿಕ್ಸ್
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಬ್ಸಡಿ ಹೆಚ್ಚಳ: ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ 6 ಪಟ್ಟು ಏರಿಕೆ!
ಎಲೆಕ್ಟ್ರಿಕ್ ವಾಹನ ಮಾರಾಟ ಹೆಚ್ಚಳಕ್ಕಾಗಿ ವಿವಿಧ ರಾಜ್ಯಗಳು ಹೆಚ್ಚಿನ ಸಬ್ಸಡಿ ಘೋಷಣೆ ಮಾಡುತ್ತಿದ್ದು, ಇವಿ ವಾಹನ ಮಾರಾಟ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯ ಜೊತೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ರಾಜ್ಯ ಮಟ್ಟದ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಇವಿ ವಾಹನಗಳ ಅಳವಡಿಕೆ ಸಬ್ಸಡಿ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದ್ದು, ದೆಹಲಿ ನಂತರ ಹಲವು ರಾಜ್ಯಗಳು ಇವಿ ವಾಹನಗಳಿಗೆ ಹೆಚ್ಚಿನ ಸಬ್ಸಡಿ ಘೋಷಣೆ ಮಾಡುತ್ತಿವೆ.

ರಾಜಸ್ಥಾನ ಸರ್ಕಾರವು ಸರ್ಕಾರವು ಸಹ ಇದೀಗ ಹೊಸ ಇವಿ ಪಾಲಿಸಿಗೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಹೊಸ ಇವಿ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ವಾಹನಗಳು, ಇವಿ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳ ತಯಾರಕರಿಗೆ ವಿನಾಯ್ತಿಗಳನ್ನು ಘೋಷಣೆ ಮಾಡಿ ಹೊಸ ಬದಲಾವಣೆಗೆ ಕಾರಣವಾಗಿದೆ.

ಹೊಸ ಇವಿ ನೀತಿ ಅಡಿ ರಾಜಸ್ಥಾನದಲ್ಲಿ ಇವಿ ವಾಹನ ಮಾರಾಟವು ಕಳೆದ ಕೆಲ ತಿಂಗಳಿನಲ್ಲಿ ಹೆಚ್ಚಿನ ಇವಿ ರಸ್ತೆಗಿಳಿದಿದ್ದು, ಕಳೆದ ವರ್ಷದ ಇವಿ ಮಾರಾಟಕ್ಕಿಂತ 6 ಪಟ್ಟು ಹೆಚ್ಚಳವಾಗಿದೆ.

ರಾಜಸ್ಥಾನದಲ್ಲಿ ಇವಿ ವಾಹನ ನೀತಿಯು ಮುಂದಿನ 5 ವರ್ಷಗಳವರೆಗೆ ಅನ್ವಯಿಸಲಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಒಂದು ಬಾರಿ ಈ ಪ್ರಯೋಜನವನ್ನು ನೀಡುತ್ತದೆ.

ಇ-ವಾಹನ ನೀತಿಯಡಿ ಗ್ರಾಹಕರನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗಾಗಿ ರೂ. 5 ಸಾವಿರ ಕೋಟಿಯಿಂದ ರೂ. 10 ಸಾವಿರ ಕೋಟಿ ಮತ್ತು ಇವಿ ತ್ರಿಚಕ್ರ ವಾಹನಗಳಿಗಾಗಿ ರೂ. 10 ಸಾವಿರ ಕೋಟಿಯಿಂದ ರೂ. 20 ಸಾವಿರ ಮೀಸಲಿಟ್ಟಿದೆ.

ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಸಾಮರ್ಥ್ಯದ ಮೇಲೆ ಸಬ್ಸಡಿ ಅನ್ವಯವಾಗಲಿದ್ದು, ಹೊಸ ಸಬ್ಸಡಿ ಯೋಜನೆಯಲ್ಲಿ ಇವಿ ದ್ವಿಚಕ್ರ ವಾಹನ ಮತ್ತು ಇವಿ ತ್ರಿ ಚಕ್ರವಾಹನಗಳನ್ನು ಹೊರತು ಇತರೆ ರಾಜ್ಯಗಳಂತೆ ರಾಜಸ್ಥಾನ ಸರ್ಕಾರವು ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳು ಮತ್ತು ಇ-ಬಸ್‌ಗಳಿಗೆ ಸಬ್ಸಿಡಿ ನೀಡುತ್ತಿಲ್ಲ.

ವರದಿಯ ಪ್ರಕಾರ, ರಾಜಸ್ಥಾನದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಬ್ಸಿಡಿ ಮೊತ್ತವು ಸಹ ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಗಿಂತ ಕಡಿಮೆ ಎನ್ನಲಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ರಾಜಸ್ಥಾನ ಸರ್ಕಾರವು 12 ಪ್ರಾದೇಶಿಕ ಸಾರಿಗೆ ಕೇಂದ್ರಗಳಲ್ಲಿ ನೋಂದಾಯಿತ ಇ-ವಾಹನ ಖರೀದಿದಾರರಿಗೆ ಕೇವಲ ರೂ. 18 ಕೋಟಿ ಸಬ್ಸಡಿ ಪಾವತಿ ಮಾಡಿತ್ತು.

ಇ-ವಾಹನ ನೀತಿ ಜಾರಿಯಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗಲಿದ್ದು, ಇದರಿಂದ ಮಾರಾಟ ಪ್ರಮಾಣ ಹೆಚ್ಚಳವಾಗಲಿದೆ ಎಂದು ರಾಜಸ್ಥಾನ ಸರ್ಕಾರ ಹೊಸ ಸಬ್ಸಡಿ ಯೋಜನೆ ಕುರಿತಂತೆ ಮಾಹಿತಿ ಹಂಚಿಕೊಂಡಿದೆ.

ಕಳೆದ ವರ್ಷದ ಸಬ್ಸಡಿ ಯೋಜನೆಯಿಂದಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಇವಿ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡಿರುವುದಾಗಿ ರಾಜಸ್ಥಾನ ಸಾರಿಗೆ ಸಚಿವರು ಮಾಹಿತಿ ನೀಡಿದ್ದು, ಸದ್ಯ ಎರಡು ವಿಭಾಗದಲ್ಲಿ ಇವಿ ವಾಹನಗಳಿಗೆ ಮಾತ್ರ ಸಬ್ಸಡಿ ಅವಶ್ಯವಿದೆ ಎಂದಿದ್ದಾರೆ.

ಇನ್ನು ದೇಶಾದ್ಯಂತ ಇವಿ ವಾಹನಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವಾಗಲೇ ಹೆಚ್ಚುತ್ತಿರುವ ಅಗ್ನಿ ಅವಘಡಗಳು ಇವಿ ವಾಹನಗಳ ಸುರಕ್ಷತೆ ವಿಚಾರವು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿವೆ. ಇದರಿಂದ ಗ್ರಾಹಕರ ಸುರಕ್ಷತೆಗಾಗಿ ಹೊಸ ಇವಿ ವಾಹನಗಳಲ್ಲಿ ಇದೀಗ ಹಲವಾರು ಹೊಸ ಸುರಕ್ಷಾ ಮಾನದಂಡಗಳನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ದೇಶಾದ್ಯಂತ ದಾಖಲಾದ ಸರಣಿ ಇವಿ ವಾಹನಗಳಲ್ಲಿನ ಅಗ್ನಿ ಅವಘಡ ಪ್ರಕರಣಗಳು ಇವಿ ಗ್ರಾಹಕರ ಆಯ್ಕೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಸುರಕ್ಷಾ ಮಾನದಂಡಗಳು ಹೊಸ ಇವಿ ವಾಹನಗಳಿಗೆ ಉತ್ತಮ ಸುರಕ್ಷತೆ ಖಾತ್ರಿ ಪಡಿಸಲಿದ್ದು, ಮುಖ್ಯವಾಗಿ ಬ್ಯಾಟರಿ ಸ್ಪೋಟ ಪ್ರಕರಣಗಳನ್ನು ಪರಿಣಾಮಕಾರಿ ತಗ್ಗಿಸುವತ್ತ ಗಮನಹರಿಸಲಾಗಿದೆ.

ಇವಿ ವಾಹನಗಳಲ್ಲಿ ಅಗ್ನಿ ಅವಘಡಗಳ ಕುರಿತಾಗಿ ಕುಲಂಕೂಶವಾಗಿ ಅಧ್ಯಯನ ನಡೆಸಿರುವ ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸಾರಿಗೆ ಸಚಿವಾಲಯವು ಅಕ್ಟೋಬರ್ 1ರಿಂದಲೇ ಹೊಸ ಸುರಕ್ಷಾ ಮಾನದಂಡಗಳನ್ನು ಜಾರಿಗೆ ತರಲು ಮುಂದಾಗಿದೆ.

ಇವಿಗಳಲ್ಲಿ ಸ್ಫೋಟಗಳಿಗೆ ಕೆಲವು ಬಾರಿ ಇತರೆ ತಾಂತ್ರಿಕ ದೋಷಗಳು ಕಾರಣವಾದರೆ ಇನ್ನು ಕೆಲವು ಪ್ರಕರಣಗಳಲ್ಲಿ ಬೇಸಿಗೆಯ ಉಷ್ಣತೆಯ ಹೆಚ್ಚಾಗಿರುವುದು ಕಾರಣವೆಂದು ವಾದಿಸಲಾಗಿತ್ತು. ಆದರೆ ಘಟನೆಗಳ ಕುರಿತು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಿದ್ದ ಸಾರಿಗೆ ಸಚಿವಾಯವು ಮತ್ತು ನಿಖರ ಕಾರಣವಾಗಳು ಮತ್ತು ಪರಿಹಾರ ಕ್ರಮಗಳ ಕುರಿತು ಸಮಿತಿಗೆ ಶಿಫಾರಸುಗಳನ್ನು ನೀಡುವಂತೆ ಮನವಿ ಮಾಡಿತ್ತು.

ತಜ್ಞರ ಸಮಿತಿ ಶಿಫಾರಸ್ಸು ಆಧರಿಸಿ ಬ್ಯಾಟರಿ ಸುರಕ್ಷತಾ ಮಾನದಂಡಗಳಲ್ಲಿ ಹೆಚ್ಚುವರಿ ಸುರಕ್ಷತಾ ಅವಶ್ಯಕತೆಗಳನ್ನು ಪ್ರತಿಪಾದಿಸಲಾಗಿದ್ದು, ಈ ಹೊಸ ನಿಯಮಾವಳಿಗಳು ಅಕ್ಟೋಬರ್ 1 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿವೆ.