ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಲೈವ್‌ವೈರ್ ಉಪ-ಬ್ರಾಂಡ್‌ನ ಅಡಿಯಲ್ಲಿ ಎಸ್2 ಡೆಲ್ ಮಾರ್ ಹೆಸರಿನ ಎರಡನೇ ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ಒಂದೇ ರೂಪಾಂತರದಲ್ಲಿ ಲಭ್ಯವಿದೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ಬೆಲೆಯು USD 17,699 (ಸುಮಾರು ರೂ.13.67 ಲಕ್ಷ) ವಾಗಿದೆ. ಈ ಬೈಕ್ ಉತ್ಪಾದನೆಯು ಕೇವಲ 100 ಯುನಿಟ್ ಗಳಿಗೆ ಸೀಮಿತವಾಗಿದೆ. ಇದು ಯುಎಸ್ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಲೈವ್‌ವೈರ್ S2 ಡೆಲ್ ಮಾರ್ ಫ್ಲಾಟ್ ಟ್ರ್ಯಾಕರ್ ವಿನ್ಯಾಸವನ್ನು ಹೊಂದಿದ್ದು, ಒಟ್ಟಾರೆ ಆಕರ್ಷಕ ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಹೊಸ ಬೈಕ್ ಜಾಸ್ಪರ್ ಗ್ರೇ ಮತ್ತು ಕಾಮೆಟ್ ಇಂಡಿಗೋ ಎಂಬ ಎರಡು ಬಣ್ಣಗಳ ಆಯ್ಕೆಗಳಿವೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ಫ್ಲಾಟ್ ಕೌಲ್‌ನೊಂದಿಗೆ ಓವಲ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಪಡೆಯುತ್ತದೆ, ಜೊತೆಗೆ ಜೋಡಿ ಬ್ಲ್ಯಾಕ್-ಔಟ್ USD ಮುಂಭಾಗದ ಫೋರ್ಕ್‌ಗಳನ್ನು ಹೊಂದಿದೆ. ಮೋಟಾರ್ಸೈಕಲ್ ನಕಲಿ ಫ್ಯೂಯಲ್ ಟ್ಯಾಂಕ್ ಅನ್ನು ಪಡೆಯುತ್ತದೆ,

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಇದು ಸಾಕಷ್ಟು ಸ್ಲಿಮ್ ಆಗಿದೆ, ಅದರ ನಂತರ ಸ್ಪ್ಲಿಟ್-ಸೀಟ್ ಸೆಟಪ್ ಇದೆ. ಟರ್ನ್ ಇಂಡಿಕೇಟರ್ಸ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅತ್ಯಂತ ನಯವಾದ ಟೈಲ್ ವಿಭಾಗವನ್ನು ಹೊಂದಿದೆ ಮತ್ತು ನಾವು ಸ್ಪೋರ್ಟಿ ಸ್ವಿಂಗರ್ಮ್ ಮತ್ತು ಆಫ್‌ಸೆಟ್ ಹಿಂಭಾಗದ ಮೊನೊಶಾಕ್ ಅನ್ನು ಸಹ ನೋಡುತ್ತೇವೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಇದು ಸುಂದರವಾದ ಬಾರ್-ಎಂಡ್ ಮಿರರ್‌ಗಳೊಂದಿಗೆ ಎತ್ತರದ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ಅನ್ನು ಸಹ ಪಡೆಯುತ್ತದೆ. ICE ಮೋಟಾರ್‌ಸೈಕಲ್‌ನಲ್ಲಿ ಎಂಜಿನ್ ಇರುವಂತಹ ಬ್ಯಾಟರಿ ಕೇಸ್, ಪಕ್ಕೆಲುಬಿನ ವಿನ್ಯಾಸವನ್ನು ಹೊಂದಿದೆ. ಸಾಂದರ್ಭಿಕ ವೀಕ್ಷಕರಿಗೆ, ಬ್ಯಾಟರಿ ಕೇಸ್ ತಪ್ಪಾಗಿ ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ನಂತೆ ಕಾಣಿಸಬಹುದು.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಈ ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಇನ್ನು ಪ್ರಮುಖವಾಗಿ ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು (ಬ್ರೆಂಬೊ ಕ್ಯಾಲಿಪರ್‌ಗಳೊಂದಿಗೆ) ಹೊಂದಿದೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಈ ಎಲೆಕ್ಟ್ರಿಕ್ ಬೈಕಿನಲ್ಲಿ ಎತ್ತರಿಸಿದ ಹ್ಯಾಂಡಲ್‌ಬಾರ್ ಮತ್ತು ಸೆಂಟರ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ. ಈ ಬೈಕಿನಲ್ಲಿ ರೈಡಿಂಗ್ ಭಂಗಿಯು ನೇರವಾಗಿದ್ದು, ಇದು ಪ್ರಯಾಣಕ್ಕೆ ಮತ್ತು ಸ್ಪೋರ್ಟಿ ರೈಡಿಂಗ್‌ಗೆ ಉತ್ತಮವಾಗಿರುತ್ತದೆ. ಹೊಸ ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ನಿಯೋ-ರೆಟ್ರೊ ವಿನ್ಯಾಸದಿಂದ ಅತ್ಯಂತ ಪ್ರಭಾವಿತವಾಗಿದೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಲೈವ್‌ವೈರ್ ಎಸ್2 ಡೆಲ್ ಮಾರ್‌ನ ಅಧಿಕೃತ ವಿಶೇಷಣಗಳನ್ನು ಹಾರ್ಲೆ-ಡೇವಿಡ್‌ಸನ್ ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಕೆಲವು ಅಂಕಿಅಂಶಗಳು ಲಭ್ಯವಿವೆ. ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸುಮಾರು 80 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ ಮತ್ತು ಇದು ಸುಮಾರು 160 ಕಿಮೀ ರೇಂಜ್ ಅನ್ನು ಹೊಂದಿದೆ. ಈ ಬೈಕ್ 197 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಹೊಸ ಹಾರ್ಲೆ ಡೇವಿಡ್ಸನ್ ಎಸ್2 ಡೆಲ್ ಎಲೆಕ್ಟ್ರಿಕ್ ಬೈಕ್ ಬುಕ್ಕಿಂಗ್ ಅನ್ನು ಇಂದು ಪ್ರಾರಂಭಿಸಿತು. ಆದರೆ 100 ಯೂನಿಟ್‌ಗಳ ಸಂಪೂರ್ಣ ಮೊದಲ 18 ನಿಮಿಷಗಳಲ್ಲಿ ಮಾರಾಟವಾದ ಕಾರಣ ಬುಕ್ಕಿಂಗ್ ಸ್ಥಗಿತಗೊಳಿಸಳಾಗಿದೆ. ಈ ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಭಾರತ ಬಿಡುಗಡೆ ಇನ್ನೂ ದೃಢಪಟ್ಟಿಲ್ಲ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಹಾರ್ಲೆ ಡೇವಿಡ್ಸನ್ ತನ್ನ ಹೊಸ ನೈಟ್‌ಸ್ಟರ್ ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಬೈಕ್ ಬ್ರ್ಯಾಂಡ್‌ನ ಹೊಸ ಸ್ಪೋರ್ಟ್ ಸರಣಿಯನ್ನು ಸೇರುತ್ತದೆ. ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ತಯಾರಕರ ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್‌ನ ಚಿಕ್ಕ ಆವೃತ್ತಿಯಾಗಿದೆ. ಹಾರ್ಲೆ ಇಂಡಿಯಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಬೈಕ್ ಅನ್ನು ಭಾರತದಲ್ಲಿಯೂ ಮಾರಾಟವಾಗಲಿದೆ. ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ರೋಡ್‌ಸ್ಟರ್ ಅನ್ನು USD 13,499 (ಅಂದಾಜು ರೂ 10.29 ಲಕ್ಷ) ಆರಂಭಿಕ ಬೆಲೆಯಲ್ಲಿ ಅಮೆರಿಕಾದಲ್ಲಿ ಬಿಡುಗಡೆ ಮಾಡಲಾಗಿದೆ.

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಈ ಹೊಸ ನೈಟ್‌ಸ್ಟರ್ ಬೈಕಿನಲ್ಲಿ 975 ಸಿಸಿ ಲಿಕ್ವಿಡ್-ಕೂಲ್ಡ್, ವಿ=ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 90 ಬಿಹೆಚ್‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಅಸಿಸ್ಟ್ ಮತ್ತು ಸ್ಲಿಪ್ ಮೆಕ್ಯಾನಿಕಲ್ ವೆಟ್ ಕ್ಲಚ್ ಮೂಲಕ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಪವರ್‌ಟ್ರೇನ್ ಮೂಲತಃ 1252 ಸಿಸಿ ಪವರ್ ಮಾಡುವ ಸ್ಪೋರ್ಟ್‌ಸ್ಟರ್ ಎಸ್‌ನ ಕಡಿಮೆಗೊಳಿಸಿದ ಆವೃತ್ತಿಯಾಗಿದೆ.ಈ ಬೈಕ್ ಹಗುರವಾದ ಚಾಸಿಸ್ ಅನ್ನು ಆಧರಿಸಿದೆ,

ಹೊಸ ಹಾರ್ಲೆ ಡೇವಿಡ್‌ಸನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ: 18 ನಿಮಿಷಗಳಲ್ಲಿ ಸೋಲ್ಡ್ ಔಟ್

ಇನ್ನು ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್ ಮಾರ್ಕ್‌ನ ಸ್ಪೋರ್ಟ್‌ಸ್ಟರ್ ಕುಟುಂಬದ ಹೊಸ ಸದಸ್ಯ. ನೈಟ್‌ಸ್ಟರ್ ಹೆಚ್ಚಿನ ರಿವ್ವಿಂಗ್ ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್‌ನ ಚಿಕ್ಕ ಆವೃತ್ತಿಯಿಂದ ಚಾಲಿತವಾಗಿದೆ. ಹಾರ್ಲೆಯ ಭಾರತೀಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ. ಇದರಿಂದ ಈ ಹೊಸ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Harley davidson launched livewire s2 del mar electric motorcycle details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X