Just In
- 6 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 7 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 8 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇವಿ ಸ್ಕೂಟರ್ ಮಾದರಿಗಳಿಗಾಗಿ ಭರ್ಜರಿ ಬೇಡಿಕೆ ಪಡೆದುಕೊಂಡ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ
ದುಬಾರಿ ಇಂಧನಗಳ ಪರಿಣಾಮ ದೇಶಾದ್ಯಂತ ಇವಿ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರನ್ನು ಸೆಳೆಯಲು ಇವಿ ವಾಹನ ಉತ್ಪಾದನಾ ಕಂಪನಿಗಳ ನಡುವೆ ಭರ್ಜರಿ ಪೈಪೋಟಿ ಶುರುವಾಗಿದೆ.

ಹಾಪ್ ಎಲೆಕ್ಟ್ರಿಕ್ ಕಂಪನಿಯು ಕೂಡಾ ತನ್ನ ಸಂಭಾವ್ಯ ಗ್ರಾಹಕರಿಗೆ ಕೆಲವು ವಿಶೇಷ ಆಫರ್ ಘೋಷಣೆ ಮಾಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಿಗೆ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದೆ. ಕಳೆದ ಕೆಲ ತಿಂಗಳಷ್ಟೇ ಕಂಪನಿಯು ದಕ್ಷಿಣ ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಹೈದ್ರಾಬಾದ್‌ನಲ್ಲಿರುವ ಕುಟಕ್‌ಪಲ್ಲಿಯಲ್ಲಿರುವ ಡೀಲರ್ಸ್ ಮೂಲಕ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಕುಟಕ್‌ಪಲ್ಲಿಯಲ್ಲಿರುವ ಹಾಪ್ ಮೊಬಿಲಿಟಿ ಡೀಲರ್ಸ್ ಆರಂಭವಾದ ಕೇವಲ 150 ದಿನಗಳಲ್ಲಿ 225 ಯುನಿಟ್ ಸ್ಕೂಟರ್‌ಗಳನ್ನು ವಿತರಿಸಿದ್ದು, ವಿವಿಧ ಆಫರ್‌ಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಕಳೆದ ಕೆಲ ತಿಂಗಳಿನಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆಗಳು ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಕಳೆದ ಕೆಲ ಅವಧಿಯಲ್ಲಿ ಹಲವಾರು ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ಜೈಪುರ್ ಮೂಲದ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಎರಡು ಹೊಸ ಇವಿ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹಾಪ್ ಎಲೆಕ್ಟ್ರಿಕ್ ಕಂಪನಿಯು ಇದೀಗ ಸೀಮಿತ ಅವಧಿಯಲ್ಲಿ ತನ್ನ ಇವಿ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಆಫರ್‌ಗಳನ್ನು ಘೋಷಿಸಿ ಉತ್ತಮ ಬೇಡಿಕೆ ಪಡೆದುಕೊಂಡಿದೆ.

ಕಳೆದ ತಿಂಗಳು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಪ್ರಮುಖ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಆಫರ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಇವಿ ಸ್ಕೂಟರ್ ಮಾರಾಟ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಇನ್ನು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾರ ವಿವಿಧ ಬ್ಯಾಟರಿ ರೇಂಜ್ ಹೊಂದಿರುವ ಲಿಯೋ ಮತ್ತು ಲೈಫ್ ಎನ್ನುವ ಎರಡು ಇವಿ ಸ್ಕೂಟರ್ ಪರಿಚಯಿಸಿದ್ದು, ಹೊಸ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ. 65,500 ರಿಂದ ಪ್ರಾರಂಭಗೊಳ್ಳುತ್ತದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಎಕ್ಸ್ಟೆಂಡ್ ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದು, ಎಕ್ಸ್ಟೆಂಡ್ ವೆರಿಯೆಂಟ್ ಮಾದರಿಗಳೇ ಹಾಪ್ ಇವಿ ಸ್ಕೂಟರ್‌ಗಳ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿವೆ.

ಲಿಯೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.7kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಲೈಫ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2.0kw ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 50 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಈ ಮೂಲಕ ಎರಡು ಸ್ಕೂಟರ್‌ಗಳಲ್ಲಿ ಎಕ್ಸ್ಟೆಂಡ್ ಮಾದರಿಗಳು ಡ್ಯುಯಲ್ ಲೀ-ಅಯಾನ್ ಬ್ಯಾಟರಿ ಬ್ಯಾಕ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 125 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

ಹೊಸ ಸ್ಕೂಟರ್ ಪ್ರತಿ ಮಾದರಿಯು 72ವಿ ಆರ್ಕಿಟೆಕ್ಚರ್ ಬಾಡಿ ತಂತ್ರಜ್ಞಾನ ಹೊಂದಿದ್ದು, ಗರಿಷ್ಠು 180 ಕೆ.ಜಿ ಲೋಡಿಂಗ್ ಸಾಮಾರ್ಥ್ಯದೊಂದಿಗೆ 19.5-ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಪಡೆದುಕೊಂಡಿದೆ.

ಜೊತೆಗೆ ಹೊಸ ಇವಿ ಸ್ಕೂಟರ್‌ಗಳಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಡ್ಯುಯಲ್ ಟೋನ್ ಗ್ರಾಫಿಕ್ಸ್, ಜಿಪಿಎಸ್ ಕನೆಕ್ಟಿವಿಟಿ, ಸೈಡ್ ಸ್ಟ್ಯಾಂಡ್ ಸೆನ್ಸಾರ್, ವಿವಿಧ ರೈಡ್ ಮೋಡ್, ಎಲ್ಇಡಿ ಕನ್ಸೋಲ್, ರಿಮೋಟ್ ಕೀ, ಆ್ಯಂಟಿ ಥೇಫ್ಟ್ ಅಲಾರಾಂ, ವೀಲ್ಹ್ ಲಾಕ್ ಸಿಸ್ಟಂ ಸೌಲಭ್ಯಗಳಿವೆ.

ಈ ಮೂಲಕ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಕಿ.ಮೀ ಗೆ 20 ಪೈಸೆಗಿಂತಲೂ ಕಡಿಮೆ ರನ್ನೀಂಗ್ ಕಾಸ್ಟ್ ಹೊಂದಿದ್ದು, ಸದ್ಯಕ್ಕೆ ಕೆಲವೇ ನಗರಗಳಲ್ಲಿ ಮಾರಾಟ ಹೊಂದಿರುವ ಹಾಪ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ವಿವಿಧ ನಗರಗಳಲ್ಲಿ ಮಾರಾಟ ಆರಂಭಿಸುತ್ತಿದೆ.