ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಭಾರತದಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಹೈ-ಸ್ಪೀಡ್ ಇ-ಸ್ಕೂಟರ್‌ಗಳು, ಇ-ಸ್ಪೋರ್ಟ್ಸ್ ಬೈಕುಗಳು ಮಾರುಕಟ್ಟೆಗೆ ಬಂದಿವೆ. ಆದರೆ ಕೇವಲ ಮೂರು ಸೆಕಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪುವ ಎಲೆಕ್ಟ್ರಿಕ್ ಹೈಪರ್-ಸ್ಪೋರ್ಟ್ಸ್ ಸೂಪರ್ ಬೈಕ್ ಇನ್ನೂ ಬಂದಿಲ್ಲ. ಅಂತಹ ಹೈ-ಪರ್ಫಾರ್ಮ್ಸ್ ಇ-ಬೈಕ್ ಅನ್ನು ಟ್ರೌವ್ ಮೋಟಾರ್ (Trouve Motor) ತರಲಿದೆ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಐಐಟಿ ದೆಹಲಿಯ ವ್ಯಾಪಾರ ಸಂಸ್ಥೆ ಟ್ರೌವ್ ಮೋಟಾರ್ (Trouve ಮೋಟಾರ್), ಭಾರತದಲ್ಲಿ ಅತ್ಯಾಧುನಿಕ ಎಲೆಕ್ಟ್ರಿಕ್ ಹೈಪರ್-ಸ್ಪೋರ್ಟ್ಸ್ ಸೂಪರ್‌ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸೂಪರ್‌ಬೈಕ್ ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, ಕೇವಲ ಮೂರು ಸೆಕೆಂಡುಗಳಲ್ಲಿ 100 ಕೆಎಂಪಿಎಚ್ ವೇಗವನ್ನು ತಲುಪಲಿದೆ ಎಂದು ಟ್ರೌವ್ ಮೋಟಾರ್ ಹೇಳಿಕೊಂಡಿದ್ದು, ಈ ಕುರಿತ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಇನ್ನೂ ಹೆಸರಿಡದ ಟ್ರೌವ್ ಎಲೆಕ್ಟ್ರಿಕ್ ಹೈಪರ್ ಸ್ಪೋರ್ಟ್ಸ್ ಬೈಕ್‌ನಲ್ಲಿ 40 kW ಶಕ್ತಿಯನ್ನು ಉತ್ಪಾದಿಸಬಲ್ಲ ಲಿಕ್ವಿಡ್ ಕೂಲ್ಡ್ ಏಸಿ ಇಂಡಕ್ಷನ್ ಮೋಟಾರ್ ಅನ್ನು ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಲೇಜರ್ ಲೈಟಿಂಗ್ ಪ್ಯಾಕೇಜ್, ಅಡ್ವಾನ್ಸ್‌ಡ್ ಇನ್‌ಫೋಟೈನ್‌ಮೆಂಟ್ ಡಿಸ್‌ಪ್ಲೇ, 360 ಕ್ಯಾಮೆರಾ, ಟಿಎಫ್‌ಟಿ ಟಚ್ ಸ್ಕ್ರೀನ್ ಡಿಸ್‌ಪ್ಲೇ ಸೇರಿದಂತೆ ಇನ್ನೂ ಹಲವು ಆಧುನಿಕ ಟೆಕ್ ವೈಶಿಷ್ಟ್ಯಗಳು ಇರಲಿವೆ ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಬಳಸರುವ ಬ್ಯಾಟರಿ ಪ್ಯಾಕ್ ಮತ್ತು ಅದರ ರೇಂಜ್ ಸೇರಿದಂತೆ ಇತರ ವಿಷಯಗಳನ್ನು ಕಂಪನಿ ಬಹಿರಂಗಪಡಿಸಿಲ್ಲ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಇದಲ್ಲದೆ, ಈ ಟ್ರೌವ್ ಎಲೆಕ್ಟ್ರಿಕ್ ಹೈಪರ್ ಸ್ಪೋರ್ಟ್ಸ್ ಬೈಕ್‌ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI), ಲೆಟೆಸ್ಟ್ ಸ್ಮಾರ್ಟ್‌ಫೋನ್ ಕನೆಕ್ಟಿಂಗ್ ತಂತ್ರಜ್ಞಾನ, ಜಿಪಿಎಸ್ ನ್ಯಾವಿಗೇಶನ್, ರಿಯಲ್ ಟೈಮ್ ವೆಹಿಕಲ್ ಡಯಾಗ್ನಾಸ್ಟಿಕ್ ವೈಶಿಷ್ಟ್ಯಗಳು ಸಹ ಇವೆ. ಹಾಗೆಯೇ ಇದರಲ್ಲಿ ಡ್ಯೂಯಲ್-ಛಾನಲ್ ಎಬಿಎಸ್, ಹೊಂದಾಣಿಕೆ ಸಾಮರ್ಥ್ಯದ ಸಸ್ಪೆನ್ಷನ್ ಸೆಟಪ್ ಮತ್ತು ಬ್ರೆಂಬೋ ಬ್ರೇಕ್‌ಗಳೊಂದಿಗೆ ಹಾರ್ಡ್‌ವೇರ್ ಅನ್ನು ಸಹ ಪಡೆಯುತ್ತದೆ. ಅಲ್ಲದೇ ಪ್ರಪಂಚದಾದ್ಯಂತ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಮೊದಲು ಕಾಣುವ ಹಲವಾರು ಪೆಟೆಂಟ್‌ ಟೆಕ್ನಾಲಜಿಗಳನ್ನು ಸಹ ಪಡೆಯುತ್ತದೆ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಟ್ರೌವ್ ಮೋಟಾರ್‌ ತಮ್ಮ ಮೊದಲ ಬೈಕ್‌ ಅನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇದರ ಪ್ರೀ-ಬುಕಿಂಗ್‌ಗಲು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತ ಮಾರುಕಟ್ಟೆಗಾಗಿ ಟ್ರೌವ್ ಮೋಟಾರ್ ಪ್ಲಾನ್ ಮಾಡಿರುವ ಪ್ರೊಡಕ್ಟ್ ಲೈನಪ್‌ನಲ್ಲಿ ಕ್ಲಾಸಿಕ್, ಕೆಫ್ ರೇಸರ್, ನೆಕ್ಡ್ ಸ್ಟ್ರೀಟ್ ಬೈಕ್, ಎಂಡ್ಯೂರೋ ಮತ್ತು ಸ್ಕ್ರ್ಯಾಂಬ್ಲರ್‌ನೊಂದಿಗೆ ಮತ್ತೊಂದು ಐದು ಮಾದರಿಗಳು ಪೈಪ್‌ಲೈನ್‌ನಲ್ಲಿ ಇರುವುದಾಗಿ ಕಂಪನಿ ತಿಳಿಸಿದೆ. ಟ್ರೌವ್ ಮೋಟಾರ್‌ನಿಂದ ಈ ಮುಂಬರುವ ಬೈಕ್‌ಗಳನ್ನು ಐಐಟಿ ದೆಹಲಿಯ ಟ್ರೂವ್‌ನ ಆರ್ ಆಂಡ್ ಡಿ ಕೇಂದ್ರ ಹಾಗೂ ಬೆಂಗಳೂರಿನ ಫ್ಯಾಕ್ಟರಿಗಳಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಲಾಗುತ್ತಿದೆ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಈ ಸಂಧರ್ಭದಲ್ಲಿ ಟ್ರೌವ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ಅರುಣ್ ಸನ್ನಿ ಮಾತನಾಡಿ, ನಮ್ಮ ಹೊಸ ಸೂಪರ್ ಬೈಕ್ ಅನ್ನು ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ನಮ್ಮ ಉತ್ಪನ್ನಗಳು ಎಲಕ್ಟ್ರಿಕ್ ವಾಹನಗಳ ಭವಿಷ್ಯಕ್ಕೆ ಅನುಗುಣವಾಗಿ ಗುರಿಯನ್ನು ಪೂರೈಸಲು ಧೃಡ ವಿಶ್ವಾಸದಲ್ಲಿದ್ದೇವೆ ಎಂದು ಹೇಳಿದರು. ತಮ್ಮ ಉತ್ಪನ್ನಗಳಿಂದ ಬಳಕೆದಾರರು ಬೈಕ್‌ಗಳನ್ನು ಓಡಿಸುವ ಶೈಲಿಯೇ ಬದಲಾಗಲಿದೆ ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ ಎಂದರು.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ಭಾರತದ ಮೊದಲ ಹೈ-ಸ್ಪೀಡ್ ಎಲಾಕ್ಟ್ರಿಕ್ ಬೈಕ್ ನಹಕ್ ಪಿ-14 ಬುಕಿಂಗ್ಸ್ ಓಪನ್!

ಮತ್ತೊಂದೆಡೆ ದೇಶೀಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ "ನಹಕ್ ಮೋಟಾರ್ಸ್" ಭಾರತದ ಮೊದಲ ಹೈ-ಸ್ಪೀಡ್ ಎಲೆಕ್ಟ್ರಿಕ್ ಮೋಟಾಸೈಕಲ್‌ ಅನ್ನು ಅಭಿವೃದ್ಧಿಪಡಿಸಿದೆ. ನೋಡಲು ಬಹುತೇಕ ಪೆಟ್ರೋಲ್ ಆಧಾರಿತ ಸ್ಪೋರ್ಟ್ಸ್ ಬೈಕ್‌ನಂತೆ ಕಾಣುವ "ನಹಕ್ ಪಿ-14" (ನಹಕ್ ಪಿ-14) ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಅನ್ನು ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ನಹಕ್ ಪಿ-14 ಐ-ಬೈಕ್‌ಗಾಗಿ ಕಂಪನಿ ಬುಕಿಂಗ್‌ಗಳನ್ನು ಸಹ ಪ್ರಾರಂಭಿಸಲಾಗಿದೆ. ಈ ಬೈಕ್ ಗಂಟೆಗೆ 135 ವೇಗದಲ್ಲಿ ಚಲಿಸಲಿದೆ.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ನಹಕ್ ಪಿ-14 ಡೆಲಿವರಿಗಳು ಮೇ ತಿಂಗಳಲ್ಲಿ ಪ್ರಾರಂಭವಾಗುತ್ತವೆ. ಮಾರುಕಟ್ಟೆಯಲ್ಲಿ ಪಿ-14 ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಬೆಲೆ ರೂ. 2.49 ಲಕ್ಷ (ಎಕ್ಸ್-ಶೋರೂಮ್) ಇದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ. 11,000 ಟೋಕನ್ ಅಡ್ವಾನ್ಸ್ ಪಾವತಿಸಿ ಇದನ್ನು ಬುಕ್ ಮಾಡಬಹುದು.

ಶೀಘ್ರದಲ್ಲೇ ಭಾರತದಲ್ಲೂ ಲಭ್ಯವಾಗಲಿದೆ ಟ್ರೌವ್ ಮೋಟಾರ್‌ನ ಇ-ಸ್ಪೋರ್ಟ್ಸ್ ಬೈಕ್

ನಹಕ್ ಪಿ-14 ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಬ್ಯಾಟರಿ ಮನೆಯಲ್ಲಿಯೇ ಮನೆ ಪ್ಲಗ್ ಸಹಾಯದೊಂದಿಗೆ ಚಾರ್ಜ್ ಮಾಡಬಹುದು. ಸಾಮಾನ್ಯ ಚಾರ್ಜರ್ ಬಳಸಿ, ಈ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ನಹಕ್ ಪಿ-14 ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಫಾಸ್ಟ್ ಚಾರ್ಜಿಂಗ್ ಸಿಗುತ್ತದೆ. ಈ ಫಾಸ್ಟ್ ಚಾರ್ಜರ್ ಸಹಾಯದೊಂದಿಗೆ ಈ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಕೇವಲ 30 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಬೈಕ್‌ನಲ್ಲಿ 72v 60Ah ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
India to get first electric hyper sports bike with top speed of 200 kmph from trouve motor
Story first published: Saturday, March 26, 2022, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X