ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ ಬೈಕ್‌ಗಳ ಬೆಲೆಗಳನ್ನು ಹೆಚ್ಚಿಸಿದೆ ಈ ಬೆಲೆ ಏರಿಕೆಯು ಕೆಟಿಎಂನ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಮೇಲೆಯು ಪರಿಣಾಮ ಬೀರಿದೆ. ಇದರಿಂದ ಈ ಎರಡೂ ಅಡ್ವೆಂಚರ್ ಬೈಕ್‌ಗಳು ತುಸು ದುಬಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಬೆಲೆ ಏರಿಕೆಯಾದ ಬಳಿಕ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆಯು ರೂ.2.44 ಲಕ್ಷವಾಗಿದ್ದರೆ, ಕೆಟಿಎಂ 390 ಅಡ್ವೆಂಚರ್ ಬೈಕಿನ ಬೆಲೆಯು ರೂ,3.37 ಲಕ್ಷವಾಗಿದೆ. ಈ ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಈ ಎರಡೂ ಅಡ್ವೆಂಚರ್ ಬೈಕ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಎರಡೂ ಮೋಟಾರ್‌ಸೈಕಲ್‌ಗಳು ತಮ್ಮ ಬಣ್ಣ ಆಯ್ಕೆಗಳನ್ನು ಉಳಿಸಿಕೊಂಡಿವೆ. 250 ಅಡ್ವೆಂಚರ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ಬ್ಲೂ ಮತ್ತು ಎಲೆಕ್ಟ್ರಾನಿಕ್ ಆರೆಂಜ್ ಪೇಂಟ್ ಥೀಮ್‌ಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ, 390 ಅಡ್ವೆಂಚರ್ ಅನ್ನು ಡಾರ್ಕ್ ಗಾಲ್ವನೊ ಬ್ಲಾಕ್ ಮತ್ತು ರೇಸಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ,

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಮೊದಲಿಗೆ ಕೆಟಿಎಂ 390 ಅಡ್ವೆಂಚರ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 373.2 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಸೀಕ್ವೆನ್ಷಿಯಲ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ. ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಜೊತೆಗೆ ಸ್ಲಿಪ್ಪರ್/ಅಸಿಸ್ಟ್ ಕ್ಲಚ್ ಅನ್ನು ಸಹ ಇಲ್ಲಿ ನೀಡಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಆಸ್ಟ್ರಿಯನ್ ವಾಹನ ತಯಾರಕರು ಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಎರಡು ವಿಧಾನಗಳನ್ನು ನೀಡೀದ್ದಾರೆ. ಇದು - ಸ್ಟ್ರೀಟ್ ಮತ್ತು ಆಫ್ರೋಡ್ ಆಗಿದೆ. ಎರಡನೆಯದು ಹಿಂಬದಿಯ ಚಕ್ರಗಳನ್ನು ಒಂದು ಹಂತಕ್ಕೆ ಸ್ಲಿಪ್ ಮಾಡಲು ಅನುಮತಿಸುತ್ತದೆ, ಇದು ಆಫ್-ರೋಡ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಇದು ಬಹು ಮುಖ್ಯವಾಗಿ, ಸಂಕ್ಷಿಪ್ತ ಎಂಜಿನ್ ಸ್ಥಗಿತಗೊಂಡರೆ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಡೀಫಾಲ್ಟ್ ಸೆಟ್ಟಿಂಗ್‌ಗೆ (ಬೀದಿ) ಹಿಂತಿರುಗುವುದಿಲ್ಲ. ಏಕೆಂದರೆ ಹೆಚ್ಚಿನ ಸಿಸ್ಟಂಗಳು ಸಾಮಾನ್ಯವಾಗಿ ಎಂಜಿನ್ ಅನ್ನು ಆಫ್ ಮಾಡಿದಾಗಲೆಲ್ಲಾ ಡೀಫಾಲ್ಟ್ ಸೆಟ್ಟಿಂಗ್‌ಗಳಿಗೆ ಹಿಂತಿರುಗುತ್ತವೆ, ಇದು ಹೆಚ್ಚಿನ ಸಂದರ್ಭಗಳಲ್ಲಿ ಕಿರಿಕಿರಿ ಮತ್ತು ಕೆಲವರಲ್ಲಿ ಅಪಾಯಕಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಈ 2022ರ ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಹೊಸ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಹಿಂದಿನ ಮಾದರಿಯ ಹಳೆಯ ಸಿಕ್ಸ್-ಸ್ಪೋಕ್ ವಿನ್ಯಾಸದ ಬದಲಿಗೆ 2022ರ ಮಾದರಿಗೆ ಐದು-ಸ್ಪೋಕ್ ಆರ್ಕಿಟೆಕ್ಚರ್ ಅನ್ನು ನೀಡಿದೆ, ಹೊಸ ವ್ಹೀಲ್ ಗಳು ಹಗುರವಾಗಿರುತ್ತವೆ ಮತ್ತು ಆಫ್ರೋಡ್ ರನ್ಗಳಲ್ಲಿ ಉತ್ತಮ ಬಿಗಿತ ಮತ್ತು ಪ್ರತಿರೋಧವನ್ನು ನೀಡುತ್ತವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಕೆಟಿಎಂ 390 ಅಡ್ವೆಂಚರ್ ಬೈಕಿನ ಯಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಇದರ .ಸಸ್ಪೆಂಕ್ಷನ್, ಮುಂಭಾಗದಲ್ಲಿ 43 ಎಂಎಂ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ WP ಮೊನೊಶಾಕ್ ಅನ್ನು ಒಳಗೊಂಡಿದೆ. ಇನ್ನು 2022ರ ಕೆಟಿಎಂ 390 ಅಡ್ವೆಂಚರ್ ಬೈಕಿನ ಬ್ರ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಬ್ರೇಕ್ ಅನ್ನು ಹೊಂದಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್.ಅನ್ನು ನೀಡಲಾಗಿದೆ. ಕೆಟಿಎಂ 390 ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಎರಡನೆಯದು ಸ್ವಲ್ಪ ಹೆಚ್ಚು ಕೈಗೆಟುಕುವದು ಆದರೆ ಕಡಿಮೆ ಕಾರ್ಯಕ್ಷಮತೆ ಮತ್ತು ಸಲಕರಣೆಗಳನ್ನು ನೀಡುತ್ತದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

2022ರ ಮಾದರಿಯಾಗಿ ಗುರುತಿಸಲು ಬಣ್ಣದ ಆಯ್ಕೆಯಲ್ಲಿ ಹೊಸ ಗ್ರಾಫಿಕ್ಸ್ ವಿನ್ಯಾಸವನ್ನು ನೀಡಲಾಗಿದ್ದು, ಕಂಪನಿಯ ಎಂಟ್ರಿ ಲೆವಲ್ ಅಡ್ವೆಂಚರ್ ಮಾದರಿಯಾಗಿರುವ 250 ಎವಿಡಿ ಮಾದರಿಯಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಎಂಜಿನ್ ನೀಡಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಹೊಸ ಎಮಿಷನ್‌ಗೆ ಅನುಗುಣವಾಗಿ ಅಭಿವೃದ್ದಿಗೊಂಡಿರುವ 248 ಸಿಸಿ ಎಂಜಿನ್ ಮಾದರಿಯು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಆರು ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿದ್ದು, ಇದು 29.6 ಬಿಎಚ್‌ಪಿ ಮತ್ತು 24 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಕೆಟಿಎಂ ಕಂಪನಿಯು 250 ಅಡ್ವೆಂಚರ್ ಮೋಟಾರ್‌ಸೈಕಲ್ ಮಾದರಿಯನ್ನು ಸ್ಟೀಲ್-ಟ್ರೆಲ್ಲಿಸ್ ಫ್ರೇಮ್ ಮೂಲಕ ಅಭಿವೃದ್ದಿಪಡಿಸಿದ್ದು, ಇದು ಸಬ್‌ಫ್ರೇಮ್ ಮತ್ತು ಮಿಶ್ರಲೋಹದ ಚಕ್ರಗಳನ್ನು 390 ಅಡ್ವೆಂಚರ್ ಮಾದರಿಯಿಂದ ಎರವಲು ಪಡೆದಿದ್ದು, ಕಂಪನಿಯ ಪ್ರಕಾರ 250 ಎವಿಡಿ ಮತ್ತು 390 ಎವಿಡಿಯ ಫ್ರೇಮ್‌ಗಳು 450 ಡಕಾರ್ ರ‍್ಯಾಲಿ ಬೈಕ್‌ಗಳಿಂದ ಸ್ಫೂರ್ತಿ ಪಡೆದುಕೊಂಡಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಕೆಟಿಎಂ 250 ಅಡ್ವೆಂಚರ್ ಬೈಕ್ ಸಸ್ಷೆಷನ್‌ಗಳು ಕೂಡಾ ಉತ್ತಮವಾಗಿದ್ದು, 43ಎಂಎಂ ಡಬ್ಲ್ಯುಪಿ ಅಪೆಕ್ಸ್ ಫ್ರಂಟ್ ಫೋರ್ಕ್‌ನೊಂದಿಗೆ 170ಎಂಎಂ ಟ್ರಾವೆಲ್ ಸಸ್ಷೆಷನ್ ಹೊಂದಿದ್ದು, ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ-ಶಾಕ್ ಸೆಟಪ್‌ನೊಂದಿಗೆ ಹೊಂದಾಣಿಕೆ ಮಾಡಬಹುದಾದ 177ಎಂಎಂ ಟ್ರಾವೆಲ್ ಸಸ್ಫೆಷನ್ ಪಡೆದುಕೊಂಡಿದೆ. ದಿನಬಳಕೆಯ ಜೊತೆಗೆ ಅಡ್ವೆಂಚರ್ ಚಾಲನೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಹೊಸ ಬೈಕ್ ಮಾದರಿಯು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಮತ್ತು 230 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಕೆಟಿಎಂ ಅಡ್ವೆಂಚರ್ ಬೈಕ್‌ಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕೆಟಿಎಂ ಕಂಪನಿಯು ತನ್ನ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಈ ಅಡ್ವೆಂಚರ್ ಬೈಕ್ ಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
Read more on ಕೆಟಿಎಂ ktm
English summary
Ktm hiked the prices of 390 adventure 250 adventure in india details
Story first published: Thursday, July 28, 2022, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X