ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್ "ಲೈಟ್ XE" ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಸ್ವದೇಶಿ ಪ್ರೀಮಿಯಂ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಆಗಿರುವ ಸ್ವಿಚ್ ಕಂಪನಿಯು ಮಡಚಬಹುದಾದ ಐಷಾರಾಮಿ ಇ-ಬೈಕ್‌ಗಳ ತನ್ನ ಪ್ರೀಮಿಯಂ ಪೋರ್ಟ್‌ಫೋಲಿಯೊಗೆ ಎಲೆಕ್ಟ್ರಿಕ್ ಸೈಕಲ್‌ಗಳ ಮತ್ತೊಂದು ವಿಶೇಷ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಲೈಟ್ ಎಕ್ಸ್ (LITE XE) ಎಂಬ ಹೊಸ ಎಲೆಕ್ಟ್ರಿಕ್ ಸೈಕಲ್ ಅನ್ನು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದನ್ನು ಯುವ ಪೀಳಿಗೆಗೆ ಇಷ್ಟವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇದರ ವಿಶೇಷತೆಯೆಂದರೆ ಮಡಚುವ ಮೂಲಕ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಈ ಹೊಸ ಎಲೆಕ್ಟ್ರಿಕ್ ಸೈಕಲ್ ಅನ್ನು ಅಧಿಕೃತ ಸ್ವಿಚ್ ಬೈಕ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಕಂಪನಿಯವರೊಂದಿಗೆ ಸಂಪರ್ಕದಲ್ಲಿರುವುದರ ಮೂಲಕ LITE XE ಅನ್ನು ಬುಕ್ ಮಾಡಿಕೊಳ್ಳಬಹುದು. ಈ ಹೊಸ ಎಲೆಕ್ಟ್ರಿಕ್ ಸೈಕಲ್ ಕುರಿತು ಮತ್ತಷ್ಟು ವಿವರವಾದ ಮಾಹಿತಿಯನ್ನು ಇಲ್ಲಿ ನೋಡೋಣ...

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಹೊಸ ಎಲೆಕ್ಟ್ರಿಕ್ ಸೈಕಲ್ ವಿಶೇಷತೆಗಳು

1. ಫೋಲ್ಡಬಿಲಿಟಿ

2. ಹೊಂದಾಣಿಕೆ (ಹ್ಯಾಂಡಲ್‌ಬಾರ್, ಸೀಟ್ ಬಾರ್, ಸಸ್ಪೆನ್ಷನ್)

3. ಏರ್‌ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ 6061 ಫ್ರೇಮ್ ಹಗುರವಾದ ಗಟ್ಟಿತನ

4. 36V, 250W ಸ್ವಿಚ್ ಮೋಟಾರ್

5. 36V, 10.4 AH ಬ್ಯಾಟರಿ

6. LCD ಡಿಜಿಟಲ್ ಡಿಸ್ಪ್ಲೇ

7. 20×3 ಸ್ಲೀಕ್ ಟೈರ್‌ಗಳು

8. 7 ಸ್ಪೀಡ್ ಶಿಮಾನೋ ಗೇರುಗಳು

9. 5 PAS ವಿಧಾನಗಳು (ಪೆಡಲ್ ಅಸಿಸ್ಟ್ ಸಿಸ್ಟಮ್)

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

LITE XE ಪೂರ್ಣ ಚಾರ್ಜ್‌ನಲ್ಲಿ 80 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ರೂ. 74,999 ಬೆಲೆಗೆ ಬಿಡುಗಡೆ ಮಾಡಲಾಗಿದೆ. LITE XE 4 ಎಲೆಕ್ಟ್ರಿಕ್ ಸೈಕಲ್‌ಗಳು ಮತ್ತು 1 ಸಾಮಾನ್ಯ ಸೈಕಲ್‌ ಶ್ರೇಣಿಯನ್ನು ಹೊಂದಿದ್ದು, ಐಷಾರಾಮಿ ಸ್ವಿಚ್ ಬೈಕ್ ಉತ್ಪನ್ನ ಕ್ಯಾಟಲಾಗ್‌ಗೆ 5ನೇ ಸೇರ್ಪಡೆಯಾಗಿದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಪ್ರಸ್ತುತ ಸ್ವಿಚ್ ಬೈಕ್ ಲೈನ್-ಅಪ್ XE+, XE, MXE, NXE ಮತ್ತು LITE XE ಮಾದರಿಗಳನ್ನು ಒಳಗೊಂಡಿದೆ. ಇದರಲ್ಲಿ ಎಲೆಕ್ಟ್ರಿಕ್ ಬೈಕ್ LITE XE ಬೆಲೆ ರೂ 74,999 ರಿಂದ ಪ್ರಾರಂಭವಾಗುತ್ತದೆ. LITE XE 5 ಬಣ್ಣಗಳಲ್ಲಿ ಬರುತ್ತದೆ. ಸ್ಕಾರ್ಲೆಟ್ ರೆಡ್, ಮಿಡ್‌ನೈಟ್ ಸಫೈರ್, ಯಾಂಕೀ ಎಲ್ಲೋ ಮತ್ತು ಎರಡು ವಿಶೇಷ ಆವೃತ್ತಿಯ ಬಣ್ಣಗಳಾದ ಗಾಬ್ಲಿನ್ ಗ್ರೀನ್ ಮತ್ತು ಬರ್ಲಿನ್ ಗ್ರೇ ನಲ್ಲಿ ಬರುತ್ತದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಸಂಸ್ಥಾಪಕ ಮತ್ತು MD ರಾಜ್‌ಕುಮಾರ್ ಪಟೇಲ್ ಮಾತನಾಡಿ, "ಕಳೆದ ಕೆಲವು ವರ್ಷಗಳಿಂದ ಇ-ಸೈಕಲ್ ಉದ್ಯಮದಲ್ಲಿ ಸ್ವಿಚ್ ಬೈಕ್ ಗೇಮ್ ಚೇಂಜರ್ ಆಗಿದೆ. ನಾವು ನಮ್ಮ ಪೋರ್ಟ್‌ಫೋಲಿಯೊಗೆ ಹೊಸ ಉತ್ಪನ್ನಗಳನ್ನು ಸೇರಿಸುತ್ತಿದ್ದೇವೆ. ಮತ್ತಷ್ಟು ವಾಹನಗಳ ಸೇರ್ಪಡೆಯ ಉತ್ಸಾಹದಲ್ಲಿದ್ದೇವೆ ಎಂದರು.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ನಾವು ಇತ್ತೀಚೆಗೆ ಡೀಲರ್‌ಶಿಪ್ ಅಪ್ಲಿಕೇಶನ್‌ಗಳನ್ನು ಮರಳಿ ತೆರೆದಿದ್ದೇವೆ. ಅರ್ಜಿದಾರರೊಂದಿಗೆ ಚಂದಾದಾರರಾದ ನಂತರ ನಾವು ಸಂಪೂರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದೇವೆ. ನಾವು ಅನೇಕ ಹೊಸ ಪ್ರಯತ್ನಗಳ ಕಡೆಗೆ ವೈವಿಧ್ಯಗೊಳಿಸುತ್ತಿದ್ದೇವೆ. ಬಹುಮುಖ ಪೋರ್ಟ್‌ಫೋಲಿಯೊ ಹೊಂದಿರುವ ಉದ್ಯಮಿಯಾಗಲು ಇದು ಒಂದು ರೋಮಾಂಚಕಾರಿ ಸಮಯ ಎಂದರು.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತಿದ್ದಂತೆ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿವೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ಬಜಾಜ್‌ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದೀಗ ರಾಯಲ್ ಎನ್‌ಫೀಲ್ಡ್ ಕೂಡ ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾಗುತ್ತಿದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ರಾಯಲ್ ಎನ್‌ಫೀಲ್ಡ್ ತನ್ನ ಇವಿ ಮೂಲಮಾದರಿಗಳನ್ನು ಟೆಸ್ಟ್ ಮಾಡಲು ಪ್ರಾರಂಭಿಸಿದೆ. ಈ ಟೆಸ್ಟ್ ಗಳನ್ನು ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರೀಕ್ಷಿಸಲು ಅಗತ್ಯವಿರುವಂತೆ ಮೀಸಲಾದ ಮೂಲಸೌಕರ್ಯಗಳನ್ನು ರಚಿಸಲು ಹೂಡಿಕೆಗಳನ್ನು ಮಾಡಲಾಗಿದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ರಾಯಲ್ ಎನ್‌ಫೀಲ್ಡ್ ಭಾರತ ಮತ್ತು ಯುಕೆಯಲ್ಲಿರುವ ತನ್ನ ತಂತ್ರಜ್ಞಾನ ಕೇಂದ್ರಗಳಿಗೆ ಸಂಬಂಧಿತ ಜನರನ್ನು ನೇಮಿಸಿಕೊಳ್ಳುತ್ತಿದೆ. ಇದು ತನ್ನ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದರೂ, ಮೊದಲ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು 2025ರ ನಂತರವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಕೈಗೆಟುಕುವ ಬೆಲೆಗೆ ಮಡಚಬಹುದಾದ ಸ್ವಿಚ್

ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್‌ನ ಪರೀಕ್ಷಾ ಹಂತವನ್ನು ತ್ವರಿತವಾಗಿ ಪ್ರಾರಂಭಿಸಲು ನೋಡುತ್ತಿದೆ. ಇದು ಕಂಪನಿಯ ಪ್ರಾಥಮಿಕ ಗುರಿಯಲ್ಲ. ಆದರೆ ಇವಿ ಜಾಗದಲ್ಲಿ ಖರೀದಿದಾರರ ಅಗತ್ಯತೆಗಳು ನಿಖರವಾಗಿ ಏನೆಂಬುದನ್ನು ಮೊದಲು ಅರ್ಥಮಾಡಿಕೊಳ್ಳಲು ರಾಯಲ್ ಎನ್‌ಫೀಲ್ಡ್ ಕಾರ್ಯನಿರ್ವಹಿಸುತ್ತಿದೆ.

Most Read Articles

Kannada
English summary
Launch of affordable Switch Lite xe electric bike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X