Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Sports
ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್ಗೆ ವೈಟ್ವಾಶ್ ಮುಖಭಂಗ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಬಿಡುಗಡೆಯ ಸನಿಹದಲ್ಲಿ ಹೊಸ ಕೆಟಿಎಂ ಆರ್‌ಸಿ 390 ಬೈಕ್
ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ ಆರ್‌ಸಿ 390 (KTM RC 390) ಬೈಕ್ ಹಲವಾರು ಹೊಸ ನವೀಕರಣಗಳನು ಪಡೆದುಕೊಂಡಿವೆ.

ಕೆಟಿಎಂ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ 2022ರ ಆರ್‌ಸಿ 390 ಬೈಕ್ ಬಿಡುಗಡೆಗೆ ಮುಂಚಿತವಾಗಿ ಪಟ್ಟಿ ಮಾಡಿದೆ. ಇಂಡಿಯಾ-ಸ್ಪೆಕ್ ಮಾಡೆಲ್ ಸ್ವೀಕರಿಸುವ ಎಲ್ಲಾ ವೈಶಿಷ್ಟ್ಯಗಳನ್ನು ಕಂಪನಿಯು ಪಟ್ಟಿ ಮಾಡಿದೆ. ಅಂತರರಾಷ್ಟ್ರೀಯ-ಸ್ಪೆಕ್ ಮಾದರಿಯಂತೆಯೇ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ, ಕಾರ್ನರ್ ಮಾಡುವ ABS, ಕ್ವಿಕ್‌ಶಿಫ್ಟರ್, TFT-ಡಿಸ್ ಪ್ಲೇ ಮತ್ತು 390 ಅಡ್ವೆಂಚರ್ ಮತ್ತು 390 ಡ್ಯೂಕ್‌ಗೆ ಹೋಲುವ ಮಲ್ಟಿಫಂಕ್ಷನ್ ಸ್ವಿಚ್‌ಗಿಯರ್ ಅನ್ನು ಒಳಗೊಂಡಿರುತ್ತದೆ.

ಇತ್ತೀಚಿನ ವರದಿಯ ಪ್ರಕಾರ, ಹೊಸ ಕೆಟಿಎಂ ಆರ್‌ಸಿ 390 ಬೈಕ್ ಭಾರತದಲ್ಲಿ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದಕ್ಕಾಗಿ ಆರ್‌ಸಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆಟಿಎಂ ಆರ್‌ಸಿ 390 ಬೈಕ್ ಅನ್ನು 2021 ರಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು.

ಆದರೆ ಸೆಮಿಕಂಡಕ್ಟರ್‌ಗಳ ಕೊರತೆ ಮತ್ತು ನಡೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಬಿಡುಗಡೆಯಾಗಲಿ ವಿಳಂಬವಾಗಿದೆ. ಇಂಟರ್ನ್ಯಾಷನಲ್-ಸ್ಪೆಕ್ ಮೋಟಾರ್ಸೈಕಲ್ ಹೊಂದಾಣಿಕೆಯ ಸಸ್ಪೆಂಕ್ಷನ್ ವೈಶಿಷ್ಟ್ಯವನ್ನು ಹೊಂದಿದೆ. ಹಿಂದೆ ನೋಡಿದಂತೆ. ಭಾರತದ ಕೆಲವು ಕೆಟಿಎಂ ಮಾದರಿಗಳು ಈ ಫೀಚರ್ ಅನ್ನು ಕಳೆದುಕೊಂಡಿದೆ.

ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಈ ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಈ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

2022ರ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದ ವಿಷಯದಲ್ಲಿ ಸಂಪೂರ್ಣ ಮೇಕ್ ಓವರ್ ಅನ್ನು ಪಡೆದುಕೊಂಡಿದೆ. ಈ ಬೈಕ್ ಹೆಡ್‌ಲೈಟ್‌ನ ಸುತ್ತಲಿನ ಮುಂಭಾಗದ ಕಾರ್ಬನ್-ಫೈಬರ್ ಫಿನಿಶ್ ಅನ್ನು ತೋರುತ್ತಿದೆ. ಆದರೆ ನಿಜವಾದ ಕಾರ್ಬನ್-ಫೈಬರ್ ಅನ್ನು ಪಡೆಯುವ ಸಾಧ್ಯತೆಗಳು ಕಡಿಮೆಯಾಗಿದೆ.

ಇನ್ನು ಈ 2022ರ ಕೆಟಿಎಂ ಬೈಕ್ ವಿಂಡ್‌ಸ್ಕ್ರೀನ್ ಪ್ರಸ್ತುತ ಆರ್‌ಸಿ ಸರಣಿಯಲ್ಲಿರುವುದಕ್ಕಿಂತ ಸ್ವಲ್ಪ ಎತ್ತರವಾಗಿದೆ ಎಂದು ತೋರುತ್ತದೆ. ಹೆಡ್‌ಲ್ಯಾಂಪ್‌ನ ಬದಿಯಲ್ಲಿರುವ ಎರಡು ಸ್ಲಿಮ್ ಲೈಟ್‌ಗಳು ಇಂಡೀಕೆಟರ್ ಗಳಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ, ಆದರೆ ಬಹುಶಃ ಪೈಲಟ್ ಲೈಟ್ ಗಳಾಗಿಯು ಕಾರ್ಯನಿರ್ವಹಿಸಬಹುದಾಗಿದೆ.

ಈ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಟಾಪ್ ಟ್ರಿಪಲ್-ಕ್ಲಾಂಪ್ ಹೊಸದು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಮತ್ತು ಹಿಂದಿನ ಸಬ್‌ಫ್ರೇಮ್ ಈಗ ಬೋಲ್ಟ್-ಆನ್ ಯೂನಿಟ್ ಆಗಿದೆ. ಕ್ಲಿಪ್-ಆನ್‌ಗಳು ಪ್ರಸ್ತುತ ಬೈಕ್‌ಗಿಂತ ಹೆಚ್ಚಿನದಾಗಿರುವಂತೆ ತೋರುತ್ತದೆ, ಇದು ಹೆಚ್ಚು ಆರಾಮದಾಯಕವಾದ ರೈಡಿಂಗ್ ಪೋಷಿಸನ್ ಅನ್ನು ಒದಗಿಸಬೇಕು, ಇನ್ನು ಹೊಸ ವ್ಹೀಲ್ ಗಳನ್ನು ಕಾಂಟಿನೆಂಟಲ್ ಕಾಂಟಿರೋಡ್ ಸ್ಪೋರ್ಟ್ ಟೂರಿಂಗ್ ಟೈರ್‌ಗಳನ್ನು ಹೊಂದಿರಲಿವೆ.

2022ರ ಹೊಸ ಕೆಟಿಎಂ ಆರ್‌ಸಿ 390 ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾದ ಬಾಡಿವರ್ಕ್ ಆಗಿದೆ, ಇದು ಈ ಸೂಪರ್‌ಸ್ಪೋರ್ಟ್ ಬೈಕಿನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಫೀಚರ್ಸ್ ಗಳ ವಿಷಯದಲ್ಲಿ, ಹೊಸ ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ಬ್ಲೂಟೂತ್-ಕನೆಕ್ಟಿವಿಟಿ ಟಿಎಫ್ಟಿ ಡಿಸ್ ಪ್ಲೇಯನ್ನು ಪಡೆಯುತ್ತದೆ ಅದು ಕೆಟಿಎಂನ ಮೈ ರೈಡ್ ಅಪ್ಲಿಕೇಶನ್ ಸಂಪೂರ್ಟ್ ಹೊಂದಿರುತ್ತದೆ.

ಇನ್ನು ಸವಾರರು ಅದರ ಹೊಸ ಸ್ವಿಚ್ ಗೇರ್ ಬಳಸಿ ಪ್ರಯಾಣದಲ್ಲಿರುವಾಗ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಫೋನ್ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಕೆಟಿಎಂನ ಸೂಪರ್‌ಮೋಟೋ ಎಬಿಎಸ್ ಮೋಡ್, ಕಾರ್ನರ್ ಮಾಡುವ ಎಬಿಎಸ್ ಮತ್ತು ಕಾರ್ನರ್ ಮಾಡುವ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಜೊತೆಗೆ ಆಯ್ಕೆಯ ಬೈ-ಡೈರಕ್ಷನಲ್ ಕ್ವೀಕ್ -ಶಿಫ್ಟರ್ ಅನ್ನು ಒಳಗೊಂಡಿರುವ ಹಲವಾರು ಎಲೆಕ್ಟ್ರಾನಿಕ್ ತಂತ್ರಜ್ಞಾನಗಳನ್ನು ಕೂಡ ಪಡೆಯಲಿವೆ.

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಕೆಲವು ಚಿಕ್ಕ ಬದಲಾವಣೆಗಳನ್ನು ಹೊಂದಿದ್ದರೂ ಅದರ ಹಿಂದಿನ ಎಂಜಿನ್ ಅನ್ನು ಹೊಂದಿರುತ್ತದೆ. ಇದು ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಫೋರ್ಕ್‌ಗೆ ಹೊಂದಾಣಿಕೆ ಮಾಡಬಹುದಾದ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅನ್ನು ಒಳಗೊಂಡಿದೆ.ಇನ್ನು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯ ಸೆಟಪ್ ಅನ್ನು ಹೊಂದಿರುತ್ತದೆ.

ಇದರೊಂದಿಗೆ ಪ್ರಮುಖವಾಗಿ ಈ ಕೆಟಿಎಂ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಬಾಷ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದು ಕಾರ್ನರ್ ಗಳಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಬ್ರೇಕ್ ಮಾಡುವಾಗ ಅತ್ಯುತ್ತಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಕೆಟಿಎಂ ಬೈಕ್‌ಗಳು ಹೊಸ ಚಾಸಿಸ್, ಕ್ಲಾಸ್ ಲೀಡಿಂಗ್ ಕಾರ್ಯಕ್ಷಮತೆ, ನವೀಕರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಗ್ರ್ಯಾಂಡ್ ಪ್ರಿಕ್ಸ್-ಪ್ರೇರಿತ ಸ್ಟೈಲಿಂಗ್‌ನೊಂದಿಗೆ ಪ್ರಮುಖ ಅಪ್‌ಡೇಟ್ ಅನ್ನು ನೀಡಲಾಗಿದೆ.

ಹೊಸ ವಿನ್ಯಾಸದ ನ್ಯೂ ಜನರೇಷನ್ ಆರ್‌ಸಿ ಬೈಕ್‌ಗಳು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು. ಇದರೊಂದಿಗೆ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಬೈಕ್ ಕೂಡ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.