ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ನೈಟ್‌ಸ್ಟರ್ ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಬೈಕ್ ಬ್ರ್ಯಾಂಡ್‌ನ ಹೊಸ ಸ್ಪೋರ್ಟ್ ಸರಣಿಯನ್ನು ಸೇರುತ್ತದೆ. ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ತಯಾರಕರ ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್‌ನ ಚಿಕ್ಕ ಆವೃತ್ತಿಯಾಗಿದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಹಾರ್ಲೆ ಇಂಡಿಯಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಬೈಕ್ ಅನ್ನು ಭಾರತದಲ್ಲಿಯೂ ಮಾರಾಟವಾಗಲಿದೆ. ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ರೋಡ್‌ಸ್ಟರ್ ಅನ್ನು USD 13,499 (ಅಂದಾಜು ರೂ 10.29 ಲಕ್ಷ) ಆರಂಭಿಕ ಬೆಲೆಯಲ್ಲಿ ಅಮೆರಿಕಾದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ನೈಟ್‌ಸ್ಟರ್ ಬೈಕಿನಲ್ಲಿ 975 ಸಿಸಿ ಲಿಕ್ವಿಡ್-ಕೂಲ್ಡ್, ವಿ=ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 90 ಬಿಹೆಚ್‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಈ ಎಂಜಿನ್ ಅನ್ನು ಅಸಿಸ್ಟ್ ಮತ್ತು ಸ್ಲಿಪ್ ಮೆಕ್ಯಾನಿಕಲ್ ವೆಟ್ ಕ್ಲಚ್ ಮೂಲಕ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಪವರ್‌ಟ್ರೇನ್ ಮೂಲತಃ 1252 ಸಿಸಿ ಪವರ್ ಮಾಡುವ ಸ್ಪೋರ್ಟ್‌ಸ್ಟರ್ ಎಸ್‌ನ ಕಡಿಮೆಗೊಳಿಸಿದ ಆವೃತ್ತಿಯಾಗಿದೆ.ಈ ಬೈಕ್ ಹಗುರವಾದ ಚಾಸಿಸ್ ಅನ್ನು ಆಧರಿಸಿದೆ,

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಇದು ಬಲವಾದ ಮಧ್ಯಮ ಸರಣಿಯ ಕಾರ್ಯಕ್ಷಮತೆಗಾಗಿ ಟ್ಯೂನ್ ಮಾಡಲಾದ ಶಕ್ತಿಯುತ ಎಂಜಿನ್‌ಗೆ ಜೋಡಿಸಲಾಗಿದೆ. ಈ ಬೈಕಿನಲ್ಲಿ ಆರಾಮದಾಯಕ ಭಂಗಿಗಾಗಿ ಕಡಿಮೆ-ಎತ್ತರದ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ. ಈ ಬೈಕ್ 706 ಎಂಎಂ ಲೋ ಸೀಟ್ ಎತ್ತರವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ 41 ಎಂಎಂ ಶೋವಾ ಡ್ಯುಯಲ್ ಬೆಂಡಿಂಗ್ ವಾಲ್ವ್ ಫ್ರಂಟ್ ಫೋರ್ಕ್ಸ್ ಮತ್ತು ಡ್ಯುಯಲ್ ಔಟ್‌ಬೋರ್ಡ್ ಎಮಲ್ಷನ್-ಟೆಕ್ನಾಲಜಿ ಶಾಕ್ ಅಬ್ಸಾರ್ಬರ್‌ಗಳನ್ನು ಕಾಯಿಲ್ ಸ್ಪ್ರಿಂಗ್‌ಗಳೊಂದಿಗೆ ಮತ್ತು ಪ್ರಿ-ಲೋಡ್ ಹೊಂದಾಣಿಕೆಗಾಗಿ ಥ್ರೆಡ್ ಕಾಲರ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಹೊಸ ಹಾರ್ಲೆ ಡೇವಿಡ್‌ಸನ್ ನೈಟ್‌ಸ್ಟರ್ ಬೈಕ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಆಯ್ಕೆ ಮಾಡಬಹುದಾದ ರೈಡ್ ಮೋಡ್‌ಗಳೊಂದಿಗೆ ಬರುತ್ತದೆ, ಅದು ಮೋಟಾರ್‌ಸೈಕಲ್‌ನ ಕಾರ್ಯಕ್ಷಮತೆಯ ಗುಣಲಕ್ಷಣಗಳನ್ನು ಎಲೆಕ್ಟ್ರಿಕ್ ಆಗಿ ನಿಯಂತ್ರಿಸುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಈ ಬೈಕಿನಲ್ಲಿ ರೈಡಿಂಗ್ ಮೋಡ್‌ಗಳನ್ನು ನೀಡುತ್ತದೆ. ಇದು ರೋಡ್ ಮೋಡ್, ಸ್ಪೋರ್ಟ್ ಮೋಡ್ ಮತ್ತು ರೈನ್ ಮೋಡ್. ಆಗಿದೆ. ರೋಡ್‌ಸ್ಟರ್ 19-ಇಂಚಿನ ಮುಂಭಾಗದ ವ್ಹೀಲ್ ಮತ್ತು 16-ಇಂಚಿನ ಹಿಂದಿನ ವ್ಹೀಲ್ ಅನ್ನು ಹೊಂದಿದೆ. ಬ್ರೇ

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಈ ಬೈಕಿನಲ್ಲಿ ಬ್ರೇಕಿಂಗ್‌ಗಾಗಿ, ಇದು ಅಕ್ಷೀಯವಾಗಿ ಮೌಂಟೆಡ್ 4-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಫ್ಲೋಟಿಂಗ್ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಅನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕಿನಲ್ಲಿ 4.0 ಇಂಚಿನ ಅನಲಾಗ್ ಸ್ಪೀಡೋಮೀಟರ್ ಜೊತೆಗೆ ಹ್ಯಾಂಡಲ್‌ಬಾರ್ ರೈಸರ್‌ನಲ್ಲಿ ಅಳವಡಿಸಲಾದ ಮಲ್ಟಿ-ಫಂಕ್ಷನ್ ಎಲ್ಸಿಡಿ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಎಲ್ಲಾ ಎಲ್ಇಡಿ ಲೈಟ್ ಸಿಸ್ಟಂ ಅನ್ನು ಡೆಯುತ್ತದೆ. ಮೋಟಾರ್‌ಸೈಕಲ್ ಸಾಂಪ್ರದಾಯಿಕ ಸ್ಪೋರ್ಟ್ಸ್ ವಿನ್ಯಾಸವನ್ನು ಹೊಂದಿದ್ದು, ಮಸ್ಕಲರ್ ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳು, ಸುತ್ತಿನ ಹೆಡ್‌ಲ್ಯಾಂಪ್, ಸಿಂಗಲ್ ಬಾಬರ್ ಸೀಟ್, ಫ್ಯೂಯಲ್ ಟ್ಯಾಂಕ್ ಮತ್ತು ಏರ್ ಉನ್ ಟೆಕ್ ಕವರ್ ಹೊಂದಿದೆ. ಮೋಟಾರ್‌ಸೈಕಲ್ ಬೀಫಿಯರ್ ಸಿಂಗಲ್ ಸೈಡೆಡ್ ಎಕ್ಸಾಸ್ಟ್ ಡಬ್ಬಿಯನ್ನು ಪಡೆಯುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಈ ಹೊಸ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ವಿವಿಡ್ ಬ್ಲಾಕ್, ಗನ್‌ಶಿಪ್ ಗ್ರೇ ಮತ್ತು ರೆಡ್‌ಲೈನ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಗನ್‌ಶಿಪ್ ಗ್ರೇ ಮತ್ತು ರೆಡ್‌ಲೈನ್ ರೆಡ್. ಗನ್‌ಶಿಪ್ ಗ್ರೇ ಮತ್ತು ರೆಡ್‌ಲೈನ್ ರೆಡ್ ಕಲರ್ ಆಯ್ಕೆಗಳನ್ನು ಏರ್‌ಬಾಕ್ಸ್ ಕವರ್‌ಗೆ ಮಾತ್ರ ಅನ್ವಯಿಸಲಾಗುತ್ತದೆ. ಮುಂಭಾಗ ಮತ್ತು ಹಿಂಭಾಗದ ಫೆಂಡರ್‌ಗಳು ಮತ್ತು ವೇಗದ ಪರದೆಯನ್ನು ವಿವಿಡ್ ಬ್ಲ್ಯಾಕ್‌ನ ಫಿನಿಶಿಂಗ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಇನ್ನು ಹಾರ್ಲೆ ಡೇವಿಡ್ಸನ್ ತನ್ನ 2022ರ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ 2022ರ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಇದು ಸವಾರರಿಗೆ ಡಿಸ್ ಪ್ಲೇಯ ಓದುವಿಕೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಪ್ಯಾನ್ ಅಮೇರಿಕಾ 1250 ಬೈಕ್ 10 ಸೆಕೆಂಡುಗಳಿಂದ 3-5 ನಿಮಿಷಗಳವರೆಗೆ ವಿಸ್ತರಿಸಿದ ವೆಹಿಕಲ್ ಹಿಲ್ ಹೋಲ್ಡ್ ಕಂಟ್ರೋಲ್ ಸಕ್ರಿಯ ಸಮಯವನ್ನು ಪಡೆಯುತ್ತದೆ.ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗಾಗಿ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಲಾಗಿದೆ, ಇದನ್ನು ಫಾಸ್ಟ್‌ಬ್ಯಾಕ್ ಬ್ಲೂ/ವೈಟ್ ಸ್ಯಾಂಡ್ ಎಂದು ಕರೆಯಲಾಗುತ್ತದೆ.

ಆಕರ್ಷಕ ವಿನ್ಯಾಸದ ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಬೈಕ್ ಆನಾವರಣ

ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್ ಮಾರ್ಕ್‌ನ ಸ್ಪೋರ್ಟ್‌ಸ್ಟರ್ ಕುಟುಂಬದ ಹೊಸ ಸದಸ್ಯ. ನೈಟ್‌ಸ್ಟರ್ ಹೆಚ್ಚಿನ ರಿವ್ವಿಂಗ್ ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್‌ನ ಚಿಕ್ಕ ಆವೃತ್ತಿಯಿಂದ ಚಾಲಿತವಾಗಿದೆ. ಹಾರ್ಲೆಯ ಭಾರತೀಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ. ಇದರಿಂದ ಈ ಹೊಸ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
New harley davidson nightster revealed specs features engine details
Story first published: Wednesday, April 13, 2022, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X