ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ 2023ರ ನಿಂಜಾ 650 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 650 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.12 ಲಕ್ಷವಾಗಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ 2023ರ ಕವಾಸಕಿ ನಿಂಜಾ 650 ಬೈಕ್ ಲೈಮ್ ಗ್ರೀನ್ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ 2023ರ ಕವಾಸಕಿ ನಿಂಜಾ 650 ಬೈಕ್ ಅನ್ನು ಈ ತಿಂಗಳ ಮಧ್ಯದಲ್ಲಿ ವಿತರಣೆಯನ್ನು ಪ್ರಾರಂಭಿಸಲಿದೆ. ಈ ಹೊಸ 2023ರ ಮಾದರಿ ನಿಂಜಾ 650 ಬೈಕಿನ ದೊಡ್ಡ ಬದಲಾವಣೆಯೆಂದರೆ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಕೆಆರ್‌ಟಿಸಿ) ಸೆಟಪ್‌ನ ಸೇರ್ಪಡೆಯಾಗಿದ್ದು ಅದು ಎರಡು ವಿಭಿನ್ನ ಹಂತವನ್ನು ಹೊಂದಿದೆ. ಮೋಡ್ 1 ಹಂತರದಲ್ಲಿ 2023ನಿಂಜಾ 650 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸೆಟಪ್ ಕಡಿಮೆ ಒಳನುಗ್ಗುವಂತಿರುತ್ತದೆ ಆದರೆ ಮೋಡ್ 2 ರಲ್ಲಿ ಇದು ಹೆಚ್ಚು ವೇಗವಾಗಿ ಕಡಿತಗೊಳ್ಳುತ್ತದೆ. ಸಿಸ್ಟಮ್ ಅನ್ನು ಸಹ ಸಂಪೂರ್ಣವಾಗಿ ಆಫ್ ಮಾಡಬಹುದು.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

2023ರ ಕವಾಸಕಿ ನಿಂಜಾ 650 ಬೈಕಿನಲ್ಲಿ ಹಿಂದಿನ 649ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಉಳಿಸಿಕೊಂಡಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಇನ್ನು ಹಿಂದಿನ ನಿಂಜಾ 650 ಬೈಕಿನ ಸಸ್ಪೆನ್ಷನ್ ಸೆಟಪ್ ಅನ್ನು ಉಳಿಸಿಕೊಳ್ಳಲಾಗಿದೆ ಮತ್ತು ಹೊಸ ಬೈಕ್ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಅನ್ನು ಮುಂದುವರೆಸಿದೆ. 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಕ್ರಮವಾಗಿ 125 ಎಂಎಂ ಅನ್ನು ಹೊಂದಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

2023ರ ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಡ್ಯುಯಲ್ 300mm ಫ್ರಂಟ್ ಪೆಟಲ್ ಡಿಸ್ಕ್‌ಗಳು ಮುಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ 220m ಪೆಟಲ್ ಡಿಸ್ಕ್‌ನಲ್ಲಿ ಬ್ರೇಕಿಂಗ್ ಗಳನ್ನು ಹೊಂದಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಇನ್ನು ಈ ಹೊಸ ಕವಾಸಕಿ ನಿಂಜಾ 650 ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 120/70 (ಮುಂಭಾಗ) ಮತ್ತು 160/60 (ಹಿಂಭಾಗ) ಡನ್‌ಲಾಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಹೊಂದಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ವಿನ್ಯಾಸದ ವಿಷಯದಲ್ಲಿ, 2023ರ ಕವಾಸಕಿ ನಿಂಜಾ 650 ಬೈಕಿನಲ್ಲಿ ಹೆಚ್ಚಾಗಿ ಬದಲಾಗದೆ ಉಳಿದಿದೆ. ಬೈಕ್ ಈಗ ಸ್ಲೀಕರ್ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮುಂಭಾಗದಲ್ಲಿ ಹೊಂದಿದ್ದು ಅದು ಕಿಟ್‌ಗೆ ಸ್ವಲ್ಪ ತೀಕ್ಷ್ಣವಾದ ನೋಟವನ್ನು ನೀಡುತ್ತದೆ. ಇನ್ನು ಇಂಡಿಕೇಟರ್ಸ್ ಹೊಸ ನಿಂಜಾ 650 ಫೇರಿಂಗ್‌ನಲ್ಲಿ ಸಂಯೋಜಿಸಲಾಗಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ ಹೊಸ ಕವಾಸಕಿ ಸೂಪರ್ ಬೈಕಿನಲ್ಲಿ 4.3-ಇಂಚಿನ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಹೊಸ ಪ್ಯಾನೆಲ್ ನಿಮ್ಮ ವಾಹನದ ಮಾಹಿತಿ ಮತ್ತು ಸ್ಥಿತಿಯನ್ನು ವೀಕ್ಷಿಸಲು ನಿಮಗೆ ಅನುಮತಿಸುವ ಕವಾಸಕಿ ರೈಡಿಯಾಲಜಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ನೀಡುತ್ತದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಬಹುನಿರೀಕ್ಷಿತ ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ಅನ್ನು ನಡೆಸಿದ್ದರು. ಈಗ ಸುಮಾರು ಎರಡು ವರ್ಷಗಳ ನಂತರ, ಕವಾಸಕಿ ಡಬ್ಲ್ಯು175 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ ಡಬ್ಲ್ಯು175 ಚಿಕ್ಕ ಸಾಮರ್ಥ್ಯದ ರೆಟ್ರೋ-ಥೀಮ್ ಕವಾಸಕಿ ಬೈಕು, ಹೊಸ ಕವಾಸಕಿ ಡಬ್ಲ್ಯು175 ಬೈಕ್ ರೆಟ್ರೊ-ಶೈಲಿಯ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಎಬೊನಿ ಪೇಂಟ್ ಅನ್ನು ಒಳಗೊಂಡಿರುವ ಬೇಸ್ ರೂಪಾಂತರ ಮತ್ತು ಕ್ಯಾಂಡಿ ಪರ್ಸಿಮನ್ ರೆಡ್ ಬಣ್ಣವನ್ನು ಹೊಂದಿರುವ ಪ್ರೀಮಿಯಂ ರೂಪಾಂತರವನ್ನು ಹೊಂದಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ ಎರಡು ಆಯ್ಕೆಗಳ ನಡುವಿನ ವ್ಯತ್ಯಾಸವು ಪೇಂಟ್ ಥೀಮ್‌ಗಳಿಗೆ ಸೀಮಿತವಾಗಿದೆ. ಕವಾಸಕಿ ಡಬ್ಲ್ಯು175 ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಮೆಕ್ಸಿಕೋ, ಉರುಗ್ವೆ ಮತ್ತು ಬೊಲಿವಿಯಾದಂತಹ ಲ್ಯಾಟಿನ್ ಅಮೇರಿಕನ್ ದೇಶಗಳಿಗೂ ಇದನ್ನು ರಫ್ತು ಮಾಡಲಾಗುತ್ತದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ ಕವಾಸಕಿ ಡಬ್ಲ್ಯು175 ಬೈಕ್ 177ಸಿಸಿ, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಕೆಆರ್‌ಟಿಸಿ ಸೇರಿದಂತೆ ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾದ ಕವಾಸಕಿ ನಿಂಜಾ 650

ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಡಬಲ್-ಕ್ರೇಡಲ್ ಚಾಸಿಸ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ರಿಯರ್ ಸ್ಪ್ರಿಂಗ್‌ಗಳನ್ನು ಹೊಂದಿವೆ.

Most Read Articles

Kannada
English summary
New kawasaki ninja 650 launched price specs details
Story first published: Wednesday, November 16, 2022, 11:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X