ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಹೆಚ್ಚಿಸಿ ಜನರನ್ನು ಇವಿಗಳತ್ತ ಮರಳಲು FAME II ಸಬ್ಸಿಡಿಗಳನ್ನು ತರುವ ಮೂಲಕ ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಇನ್ನು ಸರ್ಕಾರವು FAME II ಯೋಜನೆಯ ಅವಧಿಯನ್ನು ಮಿತಿಗೊಳಿಸಿದ್ದು, 31 ಮಾರ್ಚ್ 2024 ರವರೆಗೆ ಸಬ್ಸಿಡಿಗಳು ದೊರೆಯಲಿವೆ. ಹಾಗಾಗಿ ಈ ಅವಧಿಯನ್ನು ಎಲೆಕ್ಟ್ರಿಕ್ ವಾಹನ ತಯಾರಕರು ಸದುಪಯೋಗಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ದ್ವಿಚಕ್ರ EV ವಾಹನ ತಯಾರಕರು ಕೈಗೆಟುಕುವ ಉತ್ಪನ್ನಗಳತ್ತ ಹೆಜ್ಜೆ ಇಡಬೇಕಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೀರೋ ವಿಡಾ ಮತ್ತು ಹೋಂಡಾ ಶೀಘ್ರದಲ್ಲೇ ಅಖಾಡಕ್ಕೆ ಇಳಿಯುವ ಸಾಧ್ಯತೆಯಿದ್ದು, ಸ್ಪರ್ಧೆಯು ಗಣನೀಯವಾಗಿ ತೀವ್ರಗೊಳ್ಳಲಿದೆ. ಹಾಗಾಗಿ ಇನ್ಮುಂದೆ ಹೊರಬರುವ ಎಲೆಕ್ಟ್ರಿಕ್ ಉತ್ಪನ್ನಗಳು ಅಗ್ಗವಾಗಿರುವ ಸಾಧ್ಯತೆಯಿದೆ. ಸದ್ಯ ದೇಶದಲ್ಲಿ ಓಲಾ ಎಲೆಕ್ಟ್ರಿಕ್ ಅತಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಇ-ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ತನ್ನ ಉತ್ಪನ್ನಗಳನ್ನು ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಜನರು ಕೂಡ ಓಲಾ ಸ್ಕೂಟರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಅತ್ಯಂತ ಅಗ್ಗವಾಗಿ ಹೊಸ ಇವಿ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ರೂ. 80 ಸಾವಿರಕ್ಕೆ Ola ಸಬ್ ಇ-ಸ್ಕೂಟರ್

ಆಗಸ್ಟ್ 15 ರಂದು ಬಿಡುಗಡೆಯಾದ ತನ್ನ S1 ನೊಂದಿಗೆ, ಓಲಾ ತನ್ನ ಪ್ರಮುಖ-ಯೋಗ್ಯ ವೈಶಿಷ್ಟ್ಯಗಳನ್ನು ಒಳಗೊಂಡ ಸ್ಕೂಟರ್ ಅನ್ನು ರೂ. 99,999 ಕ್ಕೆ ಖರೀದೆಗೆ ಲಭ್ಯವಾಗಿಸಿತ್ತು. ಇದೀಗ ನಿರಂತರವಾಗಿ ಬೆಳೆಯುತ್ತಿರುವ ಸ್ಪರ್ಧೆಯಿಂದಾಗಿ ಓಲಾ ತನ್ನ ಸಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ದೀಪಾವಳಿಯಂದು ರೂ. 80,000 ಕ್ಕೆ ಬಿಡುಗಡೆ ಮಾಡಲಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಕುರಿತ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಮಾಧ್ಯಮಲ್ಲಿ ಹಂಚಿಕೊಂಡಿರುವ ಅವರು, ಅಕ್ಟೋಬರ್ 22 ಕ್ಕೆ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿರುವುದಾಗಿ ತಿಳಿಸಿದ್ದಾರೆ. ಈ ತಿಂಗಳು ನಮ್ಮ ಬಿಡುಗಡೆ ಕಾರ್ಯಕ್ರಮವನ್ನು ದೊಡ್ಡದಾಗಿ ಯೋಜಿಸಲಾಗಿದೆ ಎಂದು ಹೇಳುವ ಮೂಲಕ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಈ ಮೂಲಕ ಒಲಾ ದೇಶದಲ್ಲಿ ಅತ್ಯಂತ ಕೈಗೆಟುಕುವ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯು ರೂ. 80 ಸಾವಿರ ಅಥವಾ ಅದಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ. ಅಗರ್ವಾಲ್ ಈ ಹೊಸ ಸ್ಕೂಟರ್ ಬಿಡುಗಡೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನೀಡಲ್ಲ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಅದೇನೇ ಇರಲಿ ಓಲಾ ಎಲೆಕ್ಟ್ರಿಕ್ ಪ್ರಕಾರ, ಹೊಸ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಆಗಮನದೊಂದಿಗೆ ಮಾರಾಟವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಜನರು ಕೂಡ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡುತ್ತಿರುವುದರಿಂದ ಓಲಾ ಹೊಸ ಸ್ಕೂಟರ್‌ಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಏನನ್ನು ನಿರೀಕ್ಷಿಸಬಹುದು?

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ತಕ್ಕಂತೆ ಕಡಿಮೆ ಸ್ಪೆಕ್ಸ್ ಮತ್ತು ಕಡಿಮೆ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಈ ಹೊಸ ಉತ್ಪನ್ನವು ಓಲಾ S1 ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಕಡಿಮೆ ವೆಚ್ಚವನ್ನು ಹೊಂದಿರುವುದರಿಂದ, ಕಡಿಮೆ ವೈಶಿಷ್ಟ್ಯಗಳನ್ನು ಸಹ ನಿರೀಕ್ಷಿಸಬಹುದು. S1 ಪ್ರೊಗೆ ವ್ಯತಿರಿಕ್ತವಾಗಿ S1 ಈಗಾಗಲೇ ಕಡಿಮೆ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಮುಂಬರುವ ಹೀರೋ ವಿಡಾ ಮತ್ತು ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜೊತೆಗೆ ಎಥರ್, ಸಿಂಪಲ್ ಎನರ್ಜಿ, ಓಕಿನಾವಾ, ಟಿವಿಎಸ್ ಐಕ್ಯೂಬ್, ಚೇತಕ್ ಮತ್ತು ಪ್ರಸ್ತುತ ಎಲೆಕ್ಟ್ರಿಕ್ ವಿಭಾಗದ ನಾಯಕ ಹೀರೋ ಎಲೆಕ್ಟ್ರಿಕ್ ನಂತಹ ಅಸ್ತಿತ್ವದಲ್ಲಿರುವ ಸ್ಕೂಟರ್‌ಗಳ ಸ್ಪರ್ಧೆಯನ್ನು ಈ ಮುಂಬರುವ ಓಲಾ ಸ್ಕೂಟರ್ ಯಶಸ್ವಿಯಾಗಿ ಎದುರಿಸುವ ಸಾಧ್ಯತೆಯಿದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಇನ್ನು ಓಲಾ ತನ್ನ S1 ವಿತರಣೆಗಳು ಸೆಪ್ಟೆಂಬರ್ 7 ರಿಂದ ದೇಶಾದ್ಯಂತ ಪ್ರಾರಂಭಿಸಿದೆ. ಇದು 3 kWh ಬ್ಯಾಟರಿ ಪ್ಯಾಕ್ ಒಳಗೊಂಡಿದೆ. ಇದು S1 ಪ್ರೊನ ಬ್ಯಾಟರಿ ಪ್ಯಾಕ್‌ಗಿಂತ ಚಿಕ್ಕದಾಗಿದ್ದು, S1 ಪ್ರೊನಲ್ಲಿ 4 kWh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಸಣ್ಣ ಬ್ಯಾಟರಿಯೊಂದಿಗೆ Ola S1 ಸಿಂಗಲ್ ಚಾರ್ಜ್‌ನಿಂದ 141 ಕಿ.ಮೀ ಮೈಲೇಜ್ ನೀಡುತ್ತದೆ. ಈ ಮೋಟಾರ್ S1 ಪ್ರೊನಂತೆಯೇ ಇರುತ್ತದೆ.

ಕೈಗೆಟುಕುವ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖಚಿತಪಡಿಸಿದ ಓಲಾ: ಅಕ್ಟೋಬರ್ 22ಕ್ಕೆ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಓಲಾ ಸಬ್ ರೂ. 80 ಸಾವಿರದ ಎಲೆಕ್ಟ್ರಿಕ್ ಸ್ಕೂಟರ್ ಅದರ ಕಡಿಮೆ ಬೆಲೆಯ ಕಾರಣದಿಂದಾಗಿ S1 ನಷ್ಟು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಇರುವ ವಿಶೇಷಣಗಳನ್ನು ಪಡೆಯಬಹುದು. ಒಲಾ ಈ ತಿಂಗಳ ತಮ್ಮ ಕಾರ್ಯಕ್ರಮದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದೆ. ಆದರೆ ಈ ಹೊಸ ಸ್ಕೂಟರ್ ಸುತ್ತ ಸುತ್ತುತ್ತಿರುವ ಊಹಾಪೋಹಗಳು Ola S1 ನಂತೆಯೇ ಇರಲಿದೆ ಎನ್ನಲಾಗುತ್ತಿದೆ.

Most Read Articles

Kannada
Read more on ಓಲಾ ola
English summary
Ola Confirms New Affordable Electric Scooter October 22 Launch
Story first published: Monday, October 10, 2022, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X