Just In
- 1 hr ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 2 hrs ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 2 hrs ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 3 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Finance
ಪೇಟಿಎಂ ಷೇರು ಶೇಕಡ 6ರಷ್ಟು ಕುಸಿತ, ಕಾರಣವೇನು?
- Sports
ಆ ಒಂದು ಕ್ರಮಾಂಕಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಿ: ಟೀಮ್ ಇಂಡಿಯಾಗೆ ಸಬಾ ಕರೀಮ್ ಸಲಹೆ
- News
ಬಿಜೆಪಿ ನಾಯಕರಿಗೆ 'ಈಗಲೇ ಬಿಟ್ಟು ಹೊರಡಿ' ಎಂಬ ಸಂದೇಶ ನೀಡುತ್ತಿದ್ದಾರೆ ನಿತೀಶ್ ಕುಮಾರ್
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಕಳೆದ 10 ದಿನಗಳಿಂದ ಇವಿ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಓಲಾ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಕೆಲವೇ ತಿಂಗಳಿನಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಎಸ್1 ಪ್ರೊ ವಿತರಣೆಯನ್ನು ಹೆಚ್ಚಿಸಿದ್ದು, ಈ ನಡುವೆ ಕಂಪನಿಯು ಇವಿ ಸ್ಕೂಟರ್ ಉತ್ಪಾದನೆಯನ್ನು ಕಳೆದ 10 ದಿನಗಳಿಂದ ಸ್ಥಗಿತಗೊಳಿಸಿರುವ ಮಾಹಿತಿ ಲಭ್ಯವಾಗಿದೆ.

ತಮಿಳುನಾಡಿನ ಹೊಸೂರಿನಲ್ಲಿರುವ ಓಲಾ ಪ್ಯೂಚರ್ ಫಾಕ್ಟರಿಯಲ್ಲಿ ಇವಿ ಸ್ಕೂಟರ್ ಉತ್ಪಾದನೆ ಕೈಗೊಳ್ಳುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಜುಲೈ 21ರಿಂದಲೇ ಇವಿ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಇವಿ ಸ್ಕೂಟರ್ ಉತ್ಪಾದನೆಗೆ ಬೇಕಿರುವ ಪ್ರಮುಖ ತಾಂತ್ರಿಕ ಅಂಶಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಉತ್ಪಾದನೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ಆದರೆ ಸ್ಕೂಟರ್ ಉತ್ಪಾದನೆ ಸ್ಥಗಿತಕ್ಕೆ ತಾಂತ್ರಿಕ ಅಂಶಗಳ ಪೂರೈಕೆಯಲ್ಲಿನ ವ್ಯತ್ಯಯವಾಗಿರುವ ಸುದ್ದಿಯನ್ನು ತಳ್ಳಿಹಾಕಿರುವ ಓಲಾ ಉತ್ಪಾದನಾ ಹಿರಿಯ ಅಧಿಕಾರಿಗಳು ವಾರ್ಷಿಕ ನಿರ್ವಹಣೆ ಮತ್ತು ಹೊಸ ಯಂತ್ರಗಳ ಅಳವಡಿಕೆ ಮಾಡುತ್ತಿರುವ ಹಿನ್ನಲೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಸ್ಪಷ್ಟಪಡಿಸಿದೆ.

ಹೊಸ ಯಂತ್ರಗಳ ಅಳವಡಿಕೆ ನಂತರ ಉತ್ಪಾದನಾ ಪ್ರಮಾಣವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆ ವ್ಯಕ್ತಪಡಿಸಲಾಗಿದ್ದು, ತಾಂತ್ರಿಕ ಅಂಶಗಳ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದಾಗಿ ಸ್ಥಗಿತಗೊಳಿಸಿರುವ ಸುದ್ದಿಯು ಸುಳ್ಳು ಎಂದಿದೆ.

ಪ್ಯೂಚರ್ ಫ್ಯಾಕ್ಟರಿಯಲ್ಲಿ ಕಂಪನಿಯು ಇವಿ ಸ್ಕೂಟರ್ ಉತ್ಪಾದನೆ ಆರಂಭಿಸಿ ಕೇವಲ 8 ತಿಂಗಳಿನಲ್ಲಿ ವಾರ್ಷಿಕ ನಿರ್ವಹಣೆಯ ಕಾರಣವು ಗೊಂದಲಕ್ಕೆ ಕಾರಣವಾಗಿದ್ದು, ಇದೀಗ ಹೊಸ ಯಂತ್ರಗಳ ಅಳವಡಿಕೆ ಮಾಡುತ್ತಿರುವ ವಿಚಾರವು ಸುಳ್ಳುಸುದ್ದಿಗಳಿಗೆ ಬ್ರೇಕ್ ಬಿದ್ದಿದೆ.

ಆದರೆ ವಾರ್ಷಿಕ ನಿರ್ವಹಣೆ ಮತ್ತು ಹೊಸ ಯಂತ್ರಗಳ ಅಳವಡಿಕೆ ಇನ್ನು ಎಷ್ಟು ದಿನಗಳ ಕಾಲ ನಡೆಯಲಿದೆ ಎನ್ನುವ ಕುರಿತು ಮಾಹಿತಿ ಹಂಚಿಕೊಂಡಿಲ್ಲವಾದ್ದರಿಂದ ಎಸ್1 ಪ್ರೊ ಸ್ಕೂಟರ್ ವಿತರಣೆಯಲ್ಲಿ ಇನ್ನು ಕೆಲವು ದಿನಗಳ ಕಾಲ ವಿಳಂಬವಾಗಬಹುದಾಗಿದೆ.

ಇನ್ನು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಇದೀಗ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಮೂವ್ ಒಎಸ್ 3.0(MoveOS 3) ಅಪ್‌ಡೇಟ್ ನೀಡುವುದಾಗಿ ಘೋಷಣೆ ಮಾಡಿದೆ.

ಹೊಸ ಎಸ್1 ಪ್ರೊ ಮಾದರಿಯಲ್ಲಿ ಸದ್ಯ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಫೀಚರ್ಸ್ ನೀಡುತ್ತಿದ್ದು, ಮೂವ್ ಒಎಸ್ 3.0 ಅಪ್‌ಡೇಟ್ ಮೂಲಕ ಮತ್ತಷ್ಟು ಹೊಸ ಫೀಚರ್ಸ್ ನೀಡುವುದಾಗಿ ಕಂಪನಿಯ ಸಿಇಒ ಭಾವೀಶ್ ಅಗರವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್1 ಪ್ರೊ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕೆಲವೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ ಒಎಸ್ 2.0 ಅಪ್‌ಡೇಟ್ ಮೂಲಕ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಮೂವ್ ಒಎಸ್ 3.0 ಅಪ್‌ಡೇಟ್ ಮೂಲಕ ಸ್ಕೂಟರ್ ಆರಂಭದಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ಒದಗಿಸುವ ಭರವಸೆ ನೀಡಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಇದೀಗ ಕಂಪನಿಯು ಮೂವ್ ಒಎಸ್ 3.0 ಅಪ್‌ಡೇಟ್ ಮೂಲಕ ಹಿಲ್ ಹೋಲ್ಡ್, ಪ್ರಾಕ್ಸಿಮಿಟಿ ಅನ್‌ಲಾಕ್, ಮೂಡ್ಸ್, ರೀಜೆನ್ ವಿ2, ಹೈಪರ್ ಚಾರ್ಜಿಂಗ್, ಕಾಲಿಂಗ್, ಕೀ ಶೇರಿಂಗ್ ಸೇರಿದಂತೆ ಹಲವು ಫೀಚರ್ಸ್ ಬಳಕೆಗೆ ಅವಕಾಶ ಸಿಗಲಿದೆ.

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್ ಆಗಲು ಸಹಾಯ ಮಾಡುತ್ತದೆ.

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

ಹೊಸ ಅಪ್‌ಡೇಟ್‌ನಲ್ಲಿ ಮುಖ್ಯವಾಗಿ ಕ್ರೂಸ್ ಕಂಟ್ರೋಲ್ ಸೇರ್ಪಡೆ ಮಾಡಲಾಗಿದ್ದು, ಇದನ್ನು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಮೋಡ್‌ಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.