ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಇದೀಗ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಮೂವ್‌ ಒಎಸ್ 3.0(MoveOS 3) ಅಪ್‌ಡೇಟ್ ನೀಡುವುದಾಗಿ ಘೋಷಣೆ ಮಾಡಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಹೊಸ ಎಸ್1 ಪ್ರೊ ಮಾದರಿಯಲ್ಲಿ ಸದ್ಯ ಮೂವ್‌ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಫೀಚರ್ಸ್ ನೀಡುತ್ತಿದ್ದು, ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಮತ್ತಷ್ಟು ಹೊಸ ಫೀಚರ್ಸ್ ನೀಡುವುದಾಗಿ ಕಂಪನಿಯ ಸಿಇಒ ಭಾವೀಶ್ ಅಗರವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಎಸ್1 ಪ್ರೊ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕೆಲವೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್‌ ಒಎಸ್ 2.0 ಅಪ್‌ಡೇಟ್ ಮೂಲಕ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಸ್ಕೂಟರ್ ಆರಂಭದಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ಒದಗಿಸುವ ಭರವಸೆ ನೀಡಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಇದೀಗ ಕಂಪನಿಯು ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಹಿಲ್ ಹೋಲ್ಡ್, ಪ್ರಾಕ್ಸಿಮಿಟಿ ಅನ್‌ಲಾಕ್, ಮೂಡ್ಸ್, ರೀಜೆನ್ ವಿ2, ಹೈಪರ್ ಚಾರ್ಜಿಂಗ್, ಕಾಲಿಂಗ್, ಕೀ ಶೇರಿಂಗ್ ಸೇರಿದಂತೆ ಹಲವು ಫೀಚರ್ಸ್ ಬಳಕೆಗೆ ಅವಕಾಶ ಸಿಗಲಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್‌ ಆಗಲು ಸಹಾಯ ಮಾಡುತ್ತದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಹೊಸ ಅಪ್‌ಡೇಟ್‌ನಲ್ಲಿ ಮುಖ್ಯವಾಗಿ ಕ್ರೂಸ್ ಕಂಟ್ರೋಲ್ ಸೇರ್ಪಡೆ ಮಾಡಲಾಗಿದ್ದು, ಇದನ್ನು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಮೋಡ್‌ಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಇದು ಪ್ರಯಾಣಿಕರ ಇವಿ ಸ್ಕೂಟರ್ ವಿಭಾಗದಲ್ಲಿ ಒಂದು ರೀತಿಯ ಹೊಸ ಅನುಭವ ನೀಡುತ್ತಿದ್ದು, ಇದು ಮುಕ್ತವಾಗಿರುವ ಮಾರ್ಗಗಳಲ್ಲಿ 20 km/h ನಿಂದ 80 km/h ವರೆಗೆ ಹೆಚ್ಚಿನ ಸೌಕರ್ಯ ಮತ್ತು ಸುಗಮ ಸವಾರಿಯ ಅನುಭವವನ್ನು ಖಾತರಿಪಡಿಸಲು ನೇರವಾಗುತ್ತದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಕ್ರೂಸ್ ಕಂಟ್ರೋಲ್ ಅನ್ನು ಎಡಭಾಗದ ಡಿಪ್ಯಾಡ್ ಮೇಲಿನ ಬಲಭಾಗದ ಬಟನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ 20 kmph ಮತ್ತು 80 kmph ನಡುವೆ ಸಕ್ರಿಯಗೊಳಿಸಬಹುದಾಗಿದ್ದು, ಅದರ ಮೇಲೆ ಕ್ರೂಸ್ ಕಂಟ್ರೋಲ್/ರಿವರ್ಸ್ ಐಕಾನ್ ಕೂಡ ಇರುತ್ತದೆ. ಇದನ್ನು ನಾರ್ಮಲ್, ಹೈಪರ್ ಮತ್ತು ಸ್ಪೋರ್ಟ್ ವಿಧಾನಗಳಲ್ಲಿ ಸಕ್ರಿಯಗೊಳಿಸಬಹುದಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಈ ಮೂಲಕ ಹೊಸ ನವೀಕರಣದೊಂದಿಗೆ ಸ್ಕೂಟರ್ ಚಾಲನೆಯ ಆನಂದ ಸವಿಯುತ್ತಿರುವ ಓಲಾ ಗ್ರಾಹರಿಗೆ ಮೂವ್‌ ಒಎಸ್ 3.0 ಹೊಸ ನವೀಕರಣವು ಮತ್ತಷ್ಟು ಥ್ರಿಲ್ ನೀಡಲಿದ್ದು, ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದೆ.

ಹೊಸ ಸೌಲಭ್ಯಗಳೊಂದಿಗೆ ಬರಲಿದೆ ಓಲಾ ಮೂವ್‌ ಒಎಸ್ 3.0 ಅಪ್‌ಡೇಟ್ ವರ್ಷನ್

ಕಳೆದ ಅಗಸ್ಟ್‌ನಲ್ಲಿ ಇವಿ ಸ್ಕೂಟರ್ ಬಿಡುಗಡೆಯ ನಂತರ ಮೊದಲ ಬಾರಿಗೆ ಬೆಲೆ ಹೆಚ್ಚಿಸಿರುವ ಕಂಪನಿಯು ಬಿಡಿಭಾಗಗಳ ವೆಚ್ಚ ನಿರ್ವಹಣೆ ಮತ್ತು ಹೆಚ್ಚುವರಿ ಫೀಚರ್ಸ್ ಸೇರ್ಪಡೆ ಮಾಡಿರುವ ಗ್ರಾಹಕರಿಗೆ ಹೊರೆಯಾದರೂ ಹೊಸ ಫೀಚರ್ಸ್ ರೈಡಿಂಗ್ ಅನುಭವ ಹೆಚ್ಚಿಸಲಿವೆ.

Most Read Articles

Kannada
English summary
Ola electric will launch move os 3 in this diwali details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X