Just In
- 44 min ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 1 hr ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 2 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 3 hrs ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Movies
ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಇಂದಿನಿಂದ ಖರೀದಿ ವಿಂಡೋ ತೆರೆದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
Recommended Video
ಹೊಸ ಇವಿ ಸ್ಕೂಟರ್ ಖರೀದಿಗಾಗಿ ಈಗಾಗಲೇ ಬುಕಿಂಗ್ ಸಲ್ಲಿಸಿರುವ ಗ್ರಾಹಕರು ಖರೀದಿಗಾಗಿ ಮೊದಲ ಹಂತದ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿದೆ.

ಹೊಸ ಎಸ್1 ಇವಿ ಸ್ಕೂಟರ್ ಮಾದರಿಗಾಗಿ ಈಗಾಗಲೇ ಸಾಕಷ್ಟು ಪ್ರಮಾಣದ ಬುಕಿಂಗ್ ಪಡೆದುಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಈ ತಿಂಗಳಾಂತ್ಯಕ್ಕೆ ಸ್ಕೂಟರ್ ವಿತರಿಸುವ ಭರವಸೆ ನೀಡಿದೆ. ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದು, ಇದು ಎಸ್1 ಪ್ರೊ ಮಾದರಿಗಿಂತೂ ಕಡಿಮೆ ಪ್ರಮಾಣದ ಫೀಚರ್ಸ್‌ಗಳೊಂದಿಗೆ ಬಜೆಟ್ ಬೆಲೆ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಎಸ್1 ಪ್ರೊ ಮಾದರಿಯ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಎಸ್1 ಮಾದರಿಯ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಸ್ವಿಕರಿಸುತ್ತಿದ್ದು, ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದೆ.

ಬುಕಿಂಗ್ ನಂತರ ಮೊದಲ ಹಂತದ ಖರೀದಿ ಪ್ರಕ್ರಿಯೆಗೆ ಸಮ್ಮತಿಸುವ ಗ್ರಾಹಕರಿಗೆ ಸೆಪ್ಟೆಂಬರ್ 7ರಿಂದ ಹೋಂ ಡೆಲಿವರಿ ಆರಂಭವಾಗಲಿದ್ದು, ಫೀಚರ್ಸ್‌ಗಳಲ್ಲಿ ತುಸು ಭಿನ್ನತೆ ಹೊಂದಿರುವ ಎಸ್1 ಇವಿ ಮಾದರಿಯು ಎಸ್1 ಪ್ರೊ ಮಾದರಿಯನ್ನೇ ಆಧರಿಸಿ ನಿರ್ಮಾಣವಾಗಿದೆ.

ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳೊಂದಿಗೆ ಖರೀದಿ ಮಾಡಬಹುದಾಗಿದ್ದು, ಇವೆರಡ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಇನ್ನು ಹೊಸ ಎಸ್1 ಮಾದರಿಯು ಕಳೆದ ವರ್ಷ ಅನಾವರಣಗೊಳಿಸಿದ ಸಂದರ್ಭದಲ್ಲಿನ ಮಾದರಿಗಿಂತಲೂ ಇದೀಗ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ವಿನ್ಯಾಸದ ವಿಷಯದಲ್ಲಿ ಮಾತ್ರ ಎಸ್1 ಪ್ರೊ ಮಾದರಿಯನ್ನೇ ಹೋಲುತ್ತದೆ.

ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3KWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ARAI ಪ್ರಮಾಣೀಕೃತ 131 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಇಕೋ ಮೋಡ್‌ನಲ್ಲಿ ಗರಿಷ್ಠ 128 ಕಿಮೀ, 101 ಕಿ.ಮೀ ನಾರ್ಮಲ್ ಮೋಡ್‌ನಲ್ಲಿ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಓಲಾ ಪ್ರಕಾರ, ಎಸ್1 ಮಾದರಿಯ ಗರಿಷ್ಠ ವೇಗವು 95 ಕಿ.ಮೀ ಆಗಿದ್ದು, ಈ ಕಾರಣದಿಂದಾಗಿ ಈ ಸ್ಕೂಟರ್ ಅನ್ನು ಹೆದ್ದಾರಿಗಳಲ್ಲಿಯೂ ಸುಲಭವಾಗಿ ಓಡಿಸಬಹುದಾಗಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ರೆಡ್, ಜೆಟ್ ಬ್ಲಾಕ್, ಬ್ರೊಸಲಿನ್ ವೈಟ್, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ಓಲಾ ಕಂಪನಿಯು ಹೇಳಿಕೊಂಡಿರುವಂತೆ ಹೊಸ ಎಸ್1 ಮಾದರಿಯು ಕಂಪನಿಯು ಇತ್ತೀಚಿಗೆ ಪರಿಚಯಿಸಿರುವ ಹೊಸ ಆಪರೇಟಿಂಗ್ ಸಿಸ್ಟಮ್ (MoveOS 3) ಅನ್ನು ಬೆಂಬಲಿಸಲಿದ್ದು, ಈ ಅಪ್‌ಡೇಟ್‌ನಲ್ಲಿ ಗ್ರಾಹಕರಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ, ಆಪರೇಟಿಂಗ್ ಸಿಸ್ಟಮ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಆಪರೇಟಿಂಗ್ ಸಿಸ್ಟಮ್ ಮೂಲಕ ಎಸ್1 ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಬಳಕೆದಾರ ಸ್ನೇಹಿ ವೈಶಿಷ್ಟ್ಯತೆಗಳಾದ ಮ್ಯೂಸಿಕ್, ನ್ಯಾವಿಗೇಷನ್, ಓಲಾ ಆ್ಯಪ್, ರಿವರ್ಸ್ ಮೋಡ್ ಸೌಲಭ್ಯಗಳಿವೆ.

ಇನ್ನು ಕಂಪನಿಯು ವಿದ್ಯುತ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು, ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಮೂಲಕ ಲೀಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ನೀರಿಕ್ಷೆ ಹೊಂದಿದೆ.

ಇದರೊಂದಿಗೆ 2021ರ ಅಗಸ್ಟ್ 15ರಂದು ಬಿಡುಗಡೆಯಾಗಿದ್ದ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಡಿಸೆಂಬರ್‌ನಲ್ಲಿ ವಿತರಣೆ ಆರಂಭಿಸಿತ್ತು. ಆರಂಭದಲ್ಲಿ ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ನಿಧಾನಗತಿಯಲ್ಲಿ ವಿತರಣೆ ಆರಂಭಿಸಿದ್ದ ಓಲಾ ಎಲೆಕ್ಟ್ರಿಕ್ ಕಳೆದ ಕೆಲ ತಿಂಗಳಿನಿಂದ ವಿತರಣೆಯನ್ನು ತೀವ್ರಗೊಳಿಸಿದೆ.

ಉತ್ಪಾದನಾ ಪ್ರಮಾಣ ಹೆಚ್ಚಳ ನಂತರ ಕಳೆದ ಆರು ತಿಂಗಳಿನಲ್ಲಿ ವಿತರಣೆ ಪ್ರಮಾಣವು ಸರಾಸರಿಯಾಗಿ ಪ್ರತಿ ತಿಂಗಳು 10 ಸಾವಿರ ಯುನಿಟ್ ವಿತರಣೆಗೊಂಡಿದ್ದು, ಈ ಮೂಲಕ ಹೊಸ ಸ್ಕೂಟರ್‌ಗೆ ದಾಖಲಾಗಿರುವ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇವಿ ಸ್ಕೂಟರ್ ವಿತರಣೆ ಮಾಡಿದೆ.

ಎಸ್1 ಪ್ರೊ ಮಾದರಿಗಾಗಿ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಸ್ಕೂಟರ್ ವಿತರಣೆಯ ಹೆಚ್ಚಳದ ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ನಿರಂತರವಾಗಿ ಹೊಸ ಬದಲಾವಣೆಗಳನ್ನು ಕೂಡಾ ಪರಿಚಯಿಸುತ್ತಿದೆ.