Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗಾಗಿ ಸಿ4ವಿ ಕಂಪನಿ ಜೊತೆಗೂಡಿದ ಸಿಂಪಲ್ ಎನರ್ಜಿ
ಭಾರತದಲ್ಲಿ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸಲು ಸಿಂಪಲ್ ಎನರ್ಜಿಯು ಸಿ4ವಿ ಕಂಪನಿಯೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ಉಭಯ ಕಂಪನಿಗಳು ಭಾರತದಲ್ಲಿಯೇ ಬ್ಯಾಟರಿ ಸೆಲ್ಸ್ ಉತ್ಪಾದನಾ ಗುರಿಯನ್ನು ಹೊಂದಿವೆ.

'ಮೇಕ್ ಇನ್ ಇಂಡಿಯಾ' ಯೋಜನ ಅಡಿಯಲ್ಲಿ ಹೊಸ ಪಾಲುದಾರಿಕೆ ಘೋಷಿಸಿರುವ ಸಿಂಪಲ್ ಎನರ್ಜಿ ಮತ್ತು ಸಿ4ವಿ ಕಂಪನಿಗಳು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸೆಲ್‌ಗಳ ಮೇಲಿನ ಅವಲಂಬನೆಯನ್ನು ಸಹ ತಗ್ಗಿಸುವ ಗುರಿಹೊಂದಿವೆ. ಸದ್ಯ ಇವಿ ವಾಹನಗಳಿಗೆ ಮುಖ್ಯವಾಗಿ ಬೇಕಿರುವ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಗಳಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಪ್ರಮುಖ ವಾಹನ ತಯಾರಕ ಕಂಪನಿಗಳು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾದ ಬ್ಯಾಟರಿ ಸೌಲಭ್ಯದ ಮೇಲೆ ಹೆಚ್ಚಿನ ಆಸಕ್ತಿ ವಹಿಸಿವೆ.

ಸ್ಥಳೀಯವಾಗಿ ಉತ್ಪಾದನಾ ಮಾಡಲಾದ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯದಿಂದ ಮಾತ್ರ ಇವಿ ವಾಹನಗಳ ಬೆಲೆ ನಿಯಂತ್ರಣ ಮಾತ್ರ ಸಾಧ್ಯವಿದ್ದು, ಇದನ್ನು ಅರಿತಿರುವ ಹಲವು ಕಂಪನಿಗಳು ಇದೀಗ ಭಾರತದಲ್ಲಿಯೇ ಲೀಥಿಯಂ ಅಯಾನ್ ಬ್ಯಾಟರಿಗೆ ಬೇಕಿರುವ ಬ್ಯಾಟರಿ ಸೆಲ್ಸ್ ಅನ್ನು ಸ್ಥಳೀಯವಾಗಿ ತಯಾರಿ ಮಾಡುವ ಯೋಜನೆಯಲ್ಲಿವೆ.

ಸಿಂಪಲ್ ಎನರ್ಜಿ ಮತ್ತು ಸಿ4ವಿ ಕಂಪನಿಗಳು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸೆಲ್‌ಗಳನ್ನು ಸ್ಥಳೀಯ ಉತ್ಪಾದಿಸುವ ಗುರಿಹೊಂದಿದ್ದು, ಪಾಲುದಾರಿಕೆ ಯೋಜನೆ ಅಡಿ ಅಭಿವೃದ್ದಿಗೊಳಿಸಲಾದ ಹೊಸ ಬ್ಯಾಟರಿ ಪ್ಯಾಕ್ ಅನ್ನು ಭವಿಷ್ಯದ ಇವಿ ಮಾದರಿಗಳಿಗೆ ಬಳಕೆ ಮಾಡಿಕೊಳ್ಳುವ ಸುಳಿವು ನೀಡಿದೆ.

ಇನ್ನು ಸಿಂಪಲ್ ಎನರ್ಜಿ ಕಂಪನಿಯು ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ವಿತರಣೆಗೆ ಅಂತಿಮ ಸಿದ್ದತೆಯಲ್ಲಿದ್ದು, ಹೊಸ ಇವಿ ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಕಂಪನಿಯು ಹೊಸ ಇವಿ ಸ್ಕೂಟರ್ ಉತ್ಪಾದನೆ ಮತ್ತಷ್ಟು ಹೊಸತನ ಪರಿಚಯಿಸುವ ಮೂಲಕ ಸ್ಕೂಟರ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುತ್ತಿದೆ.

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಈಗಾಗಲೇ ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುತ್ತಿದ್ದು, ಹೊಸ ಸ್ಕೂಟರ್ ವಿತರಣೆಗೂ ಮುನ್ನ ಮತ್ತಷ್ಟು ಸ್ಕೂಟರ್ ಕಾರ್ಯಕ್ಷಮತೆಯಲ್ಲಿ ಸುಧಾರಿಸಲು ಸುಧಾರಿತ ತಾಂತ್ರಿಕ ಅಂಶಗಳೊಂದಿಗೆ ನಿರಂತರವಾಗಿ ಬದಲಾವಣೆಗಳನ್ನು ಮಾಡಲಾಗಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ಬುಕ್ಕಿಂಗ್ ಆರಂಭಿಸಿರುವ ಕಂಪನಿಯು ಮುಂಬರುವ ಜೂನ್ ಆರಂಭದಿಂದ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿದ್ದು, ವಿತರಣೆ ಆರಂಭಕ್ಕೂ ಮುನ್ನ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಬ್ಯಾಟರಿ ರೇಂಜ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆಯಲ್ಲಿ ಮಹತ್ವದ ಬದಲಾವಣೆಯನ್ನು ಪರಿಚಯಿಸಿದೆ.

ಉನ್ನತೀಕರಿಸಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಕಂಪನಿಯು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಣೆಗೊಳಿಸಿದ್ದು, ಹೊಸ ತಂತ್ರಜ್ಞಾನ ಮೂಲಕ ಕಂಪನಿಯು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿಯೇ ಅತ್ಯಧಿಕ ದಕ್ಷತೆಯನ್ನು ಸಾಧಿಸಲು ಮುಂದಾಗಿದೆ.

ಹೊಸ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯ ಮೂಲಕ ಸಿಂಪಲ್ ಒನ್ ಸ್ಕೂಟರ್ ಶೇ. 95 ರಷ್ಟು ಬ್ಯಾಟರಿ ದಕ್ಷತೆಯನ್ನು ಹಿಂದಿರುಗಿಸಲಿದ್ದು, 4.8 kWh ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 72 ಎನ್ಎಂ ಟಾರ್ಕ್ ಜೊತೆಗೆ ಇಕೋ ಮೋಡ್‌ನಲ್ಲೂ 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.

ಈ ಮೂಲಕ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಸಹ ಆಯ್ಕೆ ರೂಪದಲ್ಲಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ರೂ. 1.44 ಲಕ್ಷ ದರ ಪಾವತಿ ಮಾಡಬೇಕಾಗುತ್ತದೆ.

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.